ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಿದ ನ್ಯೂಜಿಲೆಂಡ್ ಸರ್ಕಾರ
ವೆಲ್ಲಿಂಗ್ಟನ್, ಡಿಸೆಂಬರ್ 02: ನ್ಯೂಜಿಲೆಂಡ್ ಸರ್ಕಾರವು ಸಾಂಕೇತಿಕವಾಗಿ ಹವಾಮಾನ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.'
ಈ ಮೊದಲು ಜಪಾನ್, ಕೆನಡಾ, ಫ್ರಾನ್ಸ್ ಮತ್ತು ಬ್ರಿಟನ್ ಸೇರಿದಂತೆ 30 ಕ್ಕೂ ಹೆಚ್ಚು ರಾಷ್‌ಟರಗಳು ಹವಾಮಾನ ತುರ್ತು ಪರಿಸ್ಥಿತಿ ಘೋಷಿಸಿವೆ. ಈ ಸಾಂಕೇತಿಕ ಘೋಷಣೆಯ ನಿರ್ಣಯ ಕೈಗೊಳ್ಳುವ ಮೂಲಕ ಆ ರಾಷ್ಟ್ರಗಳ ಜತೆಗೆ ನ್ಯೂಜಿಲೆಂಡ್ ಕೂಡ ಸೇರಿಕೊಂಡಿದೆ.
ಸರ್ಕಾರ ಕೈಗೊಂಡ ಈ ನಿರ್ಣಯದ ಪರವಾಗಿ 76 ಶಾಸಕರು ಮತ ಚಲಾಯಿಸಿದ್ದಾರೆ. 76-43 ಮತಗಳಿಂದ ಈ ನಿರ್ಣಯ ಅಂಗೀಕಾರಗೊಂಡಿದೆ. ಈ ಹವಾಮಾನ ತುರ್ತು ಪರಿಸ್ಥಿತಿ ಘೋಷಣೆ ಮುಂದಿನ ಪೀಳಿಗೆಯವರು ಎದುರಿಸಲಿರುವ ಪಾರಿಸಾರಿಕ ಬಿಕ್ಕಟ್ಟುಗಳಿಗೆ ಸೂಕ್ತ ಪರಿಹಾರವಾಗುತ್ತದೆ ಎಂದು ಜೆಸಿಂಡಾ ಹೇಳಿದ್ದಾರೆ.

ಕಲ್ಲಿದ್ದಲ್ಲು ಬಾಯ್ಲರ್‌ಗಳನ್ನು ನಿಷೇಧ, ಎಲೆಕ್ಟ್ರಿಕ್ ಕಾರುಗಳ ಖರೀದಿಯಂತಹ ಉಪಕ್ರಮಗಳ ಮೂಲಕ ಸಾರ್ವಜನಿಕ ಸಂಸ್ಥೆಗಳು 2025ರ ವೇಳೆಗೆ ಇಂಗಾಲ ಹೊರಸೂಸುವಿಕೆಯನ್ನು ತಟಸ್ಥಗೊಳಿಸುವಂತಹ ಪ್ರಯತ್ನಗಳನ್ನು ಸರ್ಕಾರ ಆರಂಭಿಸಿದೆ.
ಸಾಮಾನ್ಯವಾಗಿ ನೈಸರ್ಗಿಕ ವಿಪತ್ತುಗಳಂತಹ ವಿಚಾರದಲ್ಲಿ ಆತ್ರ ಸರ್ಕಾರಗಳು ತುರ್ತು ಪರಿಸ್ಥಿತಿ ಘೋಷಿಸುತ್ತವೆ. ಆದರೆ ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಪರಿಹರಿಸದಿದ್ದರೆ ನಿಸರ್ಗ ವಿಪತ್ತು ಸಂಭವಿಸುತ್ತಲೇ ಇರುತ್ತದೆ ಎಂದು ನ್ಯೂಜಿಲೆಂಡ್ ಪ್ರಧಾನಿ ಜೆಸಿಂಡಾ ಹೇಳಿದ್ದಾರೆ.












Click it and Unblock the Notifications