ನ್ಯೂಜಿಲ್ಯಾಂಡ್, ಆಸ್ಟ್ರೇಲಿಯಾದಲ್ಲಿ ಹೊಸ ವರ್ಷಕ್ಕೆ ಸ್ವಾಗತ: ಪಟಾಕಿ ಸಿಡಿಸಿ ಸಂಭ್ರಮ
ಆಕ್ಲೆಂಡ್, ಡಿಸೆಂಬರ್ 31: ಭಾರತ ಸೇರಿದಂತೆ ಏಷ್ಯಾ ಹಾಗೂ ಇತರೆ ಅನೇಕ ಖಂಡಗಳಲ್ಲಿನ ದೇಶಗಳು ಹೊಸ ವರ್ಷವನ್ನು ಸ್ವಾಗತಿಸಲು ಕಾದಿವೆ. ಅದಕ್ಕೂ ಮುನ್ನ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ದೇಶಗಳು ಚಿತ್ತಾಕರ್ಷಕ ಪಟಾಕಿಗಳನ್ನು ಸಿಡಿಸುವ ಮೂಲಕ ಹೊಸ ವರ್ಷವನ್ನು ಬರಮಾಡಿಕೊಂಡಿವೆ.
ಅಕ್ಲಂಡ್ ಮತ್ತು ಸಿಡ್ನಿಗಳಲ್ಲಿ ಆಕರ್ಷಕ ಪಟಾಕಿ ಸಿಡಿಮದ್ದುಗಳು ಹಾಗೂ ರಂಗುರಂಗಿನ ಬೆಳಕಿನ ಪ್ರದರ್ಶನಗಳ ಮೂಲಕ 2021ರ ಆಗಮನದ ಸಂಭ್ರಮಾಚರಣೆಗಳು ನಡೆದವು. ದಕ್ಷಿಣ ಪೆಸಿಫಿಕ್ನ ದ್ವೀಪ ಸಮಾವೊ ಹೊಸ ವರ್ಷಕ್ಕೆ ಮೊದಲು ಕಾಲಿಟ್ಟರೆ, ಅದರ ಬಳಿಕ ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯಾಗಳು ಹೊಸ ವರ್ಷವನ್ನು ಸ್ವಾಗತಿಸಿದವು.

ಕೊರೊನಾ ವೈರಸ್ ನಿಯಂತ್ರಿಸುವುದರಲ್ಲಿ ಯಶಸ್ವಿ ದೇಶ ಎನಿಸಿರುವ ನ್ಯೂಜಿಲೆಂಡ್ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಜೋರಾಗಿದೆ. ಸ್ಕೈಸಿಟಿ ಸಿಡಿಮದ್ದು ಮತ್ತು ಆಕ್ಲಂಡ್ ಹಾರ್ಬರ್ ಸೇತುವೆ ಮೇಲಿನ ವೆಕ್ಟರ್ ಬೆಳಕಿನ ಚಿತ್ತಾರದ ಮೂಲಕ ಹೊಸ ವರ್ಷ ಆಚರಿಸಲಾಯಿತು.
#WATCH | New Zealand rings in the New Year with fireworks show pic.twitter.com/1Pf2PTUmwj
— ANI (@ANI) December 31, 2020
ನ್ಯೂಜಿಲೆಂಡ್ ನಂತರ ಆಸ್ಟ್ರೇಲಿಯಾದಲ್ಲಿಯೂ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಇಲ್ಲಿ ಕೂಡ ಕೊರೊನಾ ವೈರಸ್ ನಿರ್ಬಂಧಗಳು ಕಡಿಮೆ ಇರುವುದರಿಂದ ಸಂಭ್ರಮ ಜೋರಾಗಿತ್ತು.
#WATCH | Australia welcomes the New Year with fireworks show; visuals from Sydney
— ANI (@ANI) December 31, 2020
(Courtesy: Reuters) pic.twitter.com/vaOq5l7zdQ
ಸಿಡ್ನಿಯ ಹಾರ್ಬರ್ ಸೇತುವೆ ಮತ್ತು ದೋಣಿಗಳ ಮೇಲೆ ಪಟಾಕಿಗಳನ್ನು ಸಿಡಿಸಲಾಯಿತು. ಆಕ್ಲಂಡ್ನಲ್ಲಿ ಜನರು ಕಿಕ್ಕಿರಿದು ತುಂಬಿದ್ದರೆ, ಸಿಡ್ನಿಯಲ್ಲಿ ಗುಂಪುಗಳಿಲ್ಲದೆ ಸಿಡಿಮದ್ದು ಪ್ರದರ್ಶನ ನಡೆಯಿತು.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications