ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನವನಾಜಿಗಳ ನಿರ್ಮೂಲನೆಯನ್ನು ಮಾಡೇ ಮಾಡುತ್ತೇವೆ ಎಂದ ರಷ್ಯಾ

|
Google Oneindia Kannada News

ಮಾಸ್ಕೋ, ಮಾರ್ಚ್ 04: ನವನಾಜಿಗಳ ನಿರ್ಮೂಲನೆ ಶತಃ ಸಿದ್ಧ ಎಂದು ಘೋಷಣೆ ಮಾಡಿರುವ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಭಾರತೀಯರನ್ನು ಮಾನವ ಗುರಾಣಿಗಳಾಗಿ ಉಕ್ರೇನ್ ಬಳಕೆ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಉಕ್ರೇನ್ ಕಾಲೇಜುಗಳಲ್ಲಿ ಓದುತ್ತಿರುವ ಸಾವಿರಾರು ವಿದ್ಯಾರ್ಥಿಗಳಿಂದ ವಿದೇಶಿ ನಾಗರಿಕರನ್ನು ಒತ್ತೆಯಾಳುಗಳಾಗಿ ತೆಗೆದುಕೊಳ್ಳುತ್ತಿದ್ದಾರೆ. ಶಿಶುವಿಹಾರಗಳಿಂದ, ಆಸ್ಪತ್ರೆಗಳಿಂದ, ಅವರು ತಮ್ಮ ಬಂದೂಕುಗಳು, ಟ್ಯಾಂಕ್‌ಗಳು, ಫಿರಂಗಿಗಳ ಬಳಕೆ ಮಾಡುತ್ತಿದ್ದಾರೆ.

ರಷ್ಯಾದ ಅಧ್ಯಕ್ಷನನ್ನು ಹಿಡಿಯಿರಿ ಬಹುಮಾನ ಪಡೆಯಿರಿ ಎಂದ ಉದ್ಯಮಿರಷ್ಯಾದ ಅಧ್ಯಕ್ಷನನ್ನು ಹಿಡಿಯಿರಿ ಬಹುಮಾನ ಪಡೆಯಿರಿ ಎಂದ ಉದ್ಯಮಿ

ಸುಮಾರು 3000 ಭಾರತೀಯ ವಿದ್ಯಾರ್ಥಿಗಳನ್ನು ಉಕ್ರೇನಿಯನ್ 'ನವ-ನಾಜಿಸ್' ಘಟಕಗಳು ಒತ್ತೆಯಾಳುಗಳಾಗಿ ತೆಗೆದುಕೊಂಡಿವೆ. ಅವರು ಸುಮಿಯಲ್ಲಿ 576 ಜನರನ್ನು ಒಳಗೊಂಡಂತೆ 3,000 ಕ್ಕೂ ಹೆಚ್ಚು ಭಾರತೀಯ ನಾಗರಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ. ನವ-ನಾಜಿಗಳು ಖಾರ್ಕಿವ್ ತೊರೆಯಲು ಬಯಸಿದ ಚೀನಾದ ವಿದ್ಯಾರ್ಥಿಗಳ ಮೇಲೆ ಗುಂಡು ಹಾರಿಸಿದ್ದಾರೆ. ಅವರಲ್ಲಿ ಇಬ್ಬರು ಗಾಯಗೊಂಡಿದ್ದಾರೆ ಎಂದು ಪುಟಿನ್ ಆರೋಪಿಸಿದ್ದಾರೆ.

Neo-Nazis In Ukraine Using Indians As Human Shields: Putin

ಉಕ್ರೇನ್ ಮೇಲಿನ ರಷ್ಯಾ ಸೇನಾ ದಾಳಿ ಮುಂದುವರೆದಿದ್ದು, ಏತನ್ಮಧ್ಯೆ ರಾಷ್ಟ್ರೀಯ ಭದ್ರತಾ ಮಂಡಳಿ ಸಭೆಯನ್ನು ಟೆಲೀಕೃತ ವಿಧಾನದ ಮೂಲಕ ಉದ್ಘಾಟಿಸಿದ ಪುಟಿನ್ ಅವರು, ರಷ್ಯನ್ನರು ಮತ್ತು ಉಕ್ರೇನಿಯನ್ನರು ಒಂದೇ ಎಂಬ ನಿಲುವನ್ನು ಬಿಡುವ ಪ್ರಶ್ನೆಯೇ ಇಲ್ಲ. ನವನಾಜಿಗಳ ನಿರ್ಮೂಲನೆ ಶತಃ ಸಿದ್ಧ ಎಂದು ಹೇಳಿದ್ದಾರೆ.

ರಷ್ಯಾದ ರಾಷ್ಟ್ರೀಯ ಭದ್ರತಾ ಹಿತಾಸಕ್ತಿಯಲ್ಲಿ ಯಾವುದೇ ರಾಜಿ ಇಲ್ಲದ ಹೋರಾಟವನ್ನು ರಾಷ್ಟ್ರೀಯವಾದಿ ಸಶಸ್ತ್ರ ಗುಂಪುಗಳ ವಿರುದ್ಧ ಮುಂದುವರಿಸಲು ರಷ್ಯಾ ಉದ್ದೇಶಿಸಿದೆ. ನಾವು ನವ-ನಾಜಿಗಳೊಂದಿಗೆ ಹೋರಾಡುತ್ತಿದ್ದೇವೆ ಎಂಬ ಅಂಶವು ಹಗೆತನ ಹೇಗೆ ನಡೆಯುತ್ತಿದೆ ಎಂಬುದರ ಮೂಲಕ ಸಾಬೀತಾಗಿದೆ, ರಾಷ್ಟ್ರೀಯತಾವಾದಿ ನವ-ನಾಜಿಯ ಘಟಕಗಳು ಮಧ್ಯಪ್ರಾಚ್ಯದಿಂದ ವಿದೇಶಿ ಕೂಲಿ ಸೈನಿಕರನ್ನು ಬಳಸುತ್ತಿವೆ. ಅಲ್ಲದೆ, ಅವರು ನಾಗರಿಕರನ್ನು ಮಾನವ ಗುರಾಣಿಗಳಂತೆ ಬಳಸುತ್ತಿದ್ದಾರೆ.

ಅವರ ಬೆನ್ನಿನ ಹಿಂದೆ ಅವರು ಅಡಗಿಕೊಳ್ಳುತ್ತಿದ್ದಾರೆ. ಉಕ್ರೇನಿಯನ್ ಪಡೆಗಳು ಅವರನ್ನು ಒತ್ತೆಯಾಳಾಗಿ ತೆಗೆದುಕೊಳ್ಳುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಉಕ್ರೇನ್‌ನ ಸಂಘರ್ಷ ವಲಯಗಳಲ್ಲಿ ಸಿಲುಕಿರುವ ಮಾಸ್ಕೋ ಮತ್ತು ಕೀವ್ ನಾಗರಿಕರನ್ನ ಸುರಕ್ಷಿತವಾಗಿ ಸ್ಥಳಾಂತರಿಸಲು ಎರಡು ದೇಶಗಳು 'ಮಾನವೀಯ ಕಾರಿಡಾರ್‌ಗಳನ್ನು' ಸ್ಥಾಪಿಸಿದ್ದು, ಯುದ್ಧದ ಸ್ಥಳಗಳಿಗೆ ಔಷಧಗಳು ಮತ್ತು ಆಹಾರವನ್ನು ತಲುಪಿಸಲು ಮಾನವೀಯ ಕಾರ್ಯ ಸಾಗುತ್ತಿದೆ ಎಂದು ಉಕ್ರೇನ್​ ನಿಯೋಗದ ಸದಸ್ಯ ಮಿಖಾಯಿಲ್ ಪೊಡೊಲ್ಯಾಕ್ ಹೇಳಿದ್ದಾರೆ.

ಉಕ್ರೇನ್​ನಲ್ಲಿ ಸಾರ್ವಜನಿಕರ ಸ್ಥಳಾಂತರ ಕಾರ್ಯ ನಡೆಯುತ್ತಿರುವ ವಲಯಗಳಲ್ಲಿ ತಾತ್ಕಾಲಿಕವಾಗಿ ಕದನ ವಿರಾಮ ಜಾರಿಯಾಗುವ ಸಾಧ್ಯತೆ ಇದೆ ಎಂದು ಆರ್‌ಟಿ ವರದಿ ಮಾಡಿದೆ. ಪೊಡೊಲ್ಯಾಕ್ ನೀಡಿರುವ ಮಾಹಿತಿ ಪ್ರಕಾರ, ಕೀವ್ ಮತ್ತು ಮಾಸ್ಕೋದ ಪ್ರತಿನಿಧಿಗಳ ನಡುವಿನ ಮಾತುಕತೆಯ ಸಮಯದಲ್ಲಿ ಮಾನವೀಯ ಅಂಶಗಳ ಕುರಿತು ವಿವರವಾಗಿ ಚರ್ಚಿಸಲಾಗಿದೆ. ಜೊತೆಗೆ ಇಲ್ಲಿನ ಜನರಿಗೆ ಮಾನವೀಯ ಕಾರಿಡಾರ್‌ಗಳ ಕುರಿತು ತಿಳಿವಳಿಕೆ ಕೂಡಾ ನೀಡಲಾಗುತ್ತಿದೆ .

Recommended Video

ಒಂದು ವಾರ ಕಳೆದ್ರೂ ಉಕ್ರೇನ್ ವಶಪಡಿಸಿಕೊಳ್ಳೋಕೆ ರಷ್ಯಾಗೆ ಸಾಧ್ಯವಾಗ್ತಿಲ್ಲ,ಯಾಕೆ ಗೊತ್ತಾ? | Oneindia Kannada

ರಷ್ಯಾ ಮತ್ತು ಉಕ್ರೇನಿಯನ್ ನಿಯೋಗಗಳ ನಡುವೆ ನಡೆದ ಮಾತುಕತೆಯಲ್ಲಿ ಮೂರು ವಿಷಯಗಳ ಬಗ್ಗೆ ವಿವರವಾಗಿ ಚರ್ಚಿಸಿದ್ದೇವೆ, ಮಿಲಿಟರಿ ಸಮಸ್ಯೆ, ಅಂತಾರಾಷ್ಟ್ರೀಯ ಮಾನವೀಯತೆ ಮತ್ತು ಭವಿಷ್ಯದ ರಾಜಕೀಯ ಇತ್ಯರ್ಥದ ಕುರಿತು ಚರ್ಚಿಸಲಾಗಿದೆ ಎಂದು ರಷ್ಯಾದ ನಿಯೋಗದ ಮುಖ್ಯಸ್ಥ ವ್ಲಾಡಿಮಿರ್ ಮೆಡಿನ್ಸ್ಕಿ ಹೇಳಿದ್ದಾರೆ.

English summary
Amid heavy fighting with Ukrainian forces, Russian President Vladimir Putin on Friday said that nationalist 'neo-Nazis' units of Ukraine are preventing foreigners, including Indians from leaving the war zone and are using them as human shields.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X