ಯುದ್ಧಕ್ಕೆ ರೆಡಿ ಇರಬೇಕು ಎಂದಿದ್ದೇಕೆ ಭಾರತದ ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ?

ನವದೆಹಲಿ, ಡಿಸೆಂಬರ್ 10: ನಾವು ಮೊದಲೇ ಸಣ್ಣ ಮತ್ತು ತ್ವರಿತ ಯುದ್ಧಗಳಿಗೆ ನಮ್ಮನ್ನು ಸಿದ್ಧಪಡಿಸಿಕೊಂಡಿರುತ್ತೇವೆ, ಆದರೆ ಈಗ ಸುದೀರ್ಘ ಯುದ್ಧಗಳಿಗೆ ಸಿದ್ಧರಾಗುವ ಸಮಯ ಬಂದಿದೆ ಎಂದು ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ತಿಳಿಸಿದ್ದಾರೆ.

ಉಕ್ರೇನ್‌ಗಿಂತ ತುಲನಾತ್ಮಕವಾಗಿ ಪ್ರಬಲವಾದ ಸೈನ್ಯವನ್ನು ಹೊಂದಿದ್ದರೂ ಸಹ ನಿರ್ಣಾಯಕ ಯುದ್ಧವನ್ನು ಕಾರ್ಯಗತಗೊಳಿಸಲು ವಿಫಲವಾದ ರಷ್ಯಾದಲ್ಲಿ ಏನು ತಪ್ಪಾಗಿದೆ ಎಂಬ ಪ್ರಶ್ನೆಗೆ ಏರ್ ಚೀಫ್ ಮಾರ್ಷಲ್ ಪ್ರತಿಕ್ರಿಯೆ ನೀಡಿದ್ದಾರೆ.

ರಷ್ಯಾ-ಉಕ್ರೇನ್ ಯುದ್ಧದ ಪಾಠಗಳನ್ನು ಒತ್ತಿಹೇಳಿದ ವಾಯು ಮುಖ್ಯಸ್ಥರು ಯುದ್ಧ ವಲಯದ ಮೇಲೆ ವಾಯು ಸೇನೆಯ ಶ್ರೇಷ್ಠತೆಯನ್ನು ಹೊಂದುವ ಅವಶ್ಯಕತೆ ಮುಖ್ಯವಾಗಿದೆ ಎಂದು ಹೇಳಿದರು. ಆದರೆ ಈ ಗುರಿಯ ಆಯ್ಕೆ ಮತ್ತು ನಿರ್ವಹಣೆಯು ಯುದ್ಧದಲ್ಲಿ ಕಂಡುಬರಲಿಲ್ಲ ಎಂದು ಉಲ್ಲೇಖಿಸಿದರು.

ಈಗ ಹೇಗಿರಬೇಕು ಯುದ್ಧದ ತಯಾರಿ?

ಈಗ ಹೇಗಿರಬೇಕು ಯುದ್ಧದ ತಯಾರಿ?

ಇಪ್ಪತ್ತೊಂದನೇ ಶತಮಾನದಲ್ಲಿ ಗುರಿಯ ಆಯ್ಕೆ ಮತ್ತು ನಿರ್ವಹಣೆ, ಸಂಘರ್ಷ ಮುಕ್ತಾಯದ ಮಾನದಂಡಗಳೊಂದಿಗೆ ಯುದ್ಧವನ್ನು ಎದುರಿಸುವಂತೆ ಏರ್ ಚೀಫ್ ಹೇಳಿದರು. ಈ ಸಂದರ್ಭದಲ್ಲಿ ಸರಿಯಾದ ತಂತ್ರಗಳೊಂದಿಗೆ ತಂತ್ರಜ್ಞಾನದ ಬಳಕೆಯಂತಹ ಕೆಲವು ವಿಷಯಗಳು ನಿರ್ಣಾಯಕವಾಗಿವೆ ಎಂಬುದನ್ನು ಅವರು ಒತ್ತಿ ಹೇಳಿದರು.

ಮಾನವರಹಿತ ವೈಮಾನಿಕ ದಾಳಿ ಬಗ್ಗೆ ಉಲ್ಲೇಖ

ಮಾನವರಹಿತ ವೈಮಾನಿಕ ದಾಳಿ ಬಗ್ಗೆ ಉಲ್ಲೇಖ

ಮಾನವರಹಿತ ವೈಮಾನಿಕ ವಾಹನಗಳ (UAV) ಬಗ್ಗೆ ಕೇಳಿದ ಸಂದರ್ಭದಲ್ಲಿ ವಾಯು ಮುಖ್ಯಸ್ಥರು ಉತ್ತರ ನೀಡಿದರು. ಡ್ರೋನ್‌ಗಳಂತಹ ಯುಎವಿಗಳು ಕ್ಷಿಪಣಿಗಳಿಂದ ತಪ್ಪಿಸಿಕೊಳ್ಳುವಲ್ಲಿ ತೊಂದರೆಗಳನ್ನು ಎದುರಿಸಬಹುದು. ಈ ಪೈಪೋಟಿಯ ವಾಯು ರಕ್ಷಣಾ ಪ್ರದೇಶಗಳಲ್ಲಿ ಕಡಿಮೆ ಉಪಯುಕ್ತವಾಗಿರುತ್ತದೆ ಎಂದು ಹೇಳಿದರು. ಆದಾಗ್ಯೂ, ವಾಯುಪಡೆಯು ಆತ್ಮ ನಿರ್ಭರ್ ಭಾರತ್ ಅಡಿಯಲ್ಲಿ ಡ್ರೋನ್‌ಗಳನ್ನು ಸೇರಿಸಲಿದೆ ಎಂದರು.

ವಾಯುಪಡೆ ಸಾಮರ್ಥ್ಯ ಕಡಿಮೆ ಆಗುವುದು ಯಾವಾಗ?

ವಾಯುಪಡೆ ಸಾಮರ್ಥ್ಯ ಕಡಿಮೆ ಆಗುವುದು ಯಾವಾಗ?

"ಯುದ್ಧ ವಿಮಾನಗಳನ್ನು ನಿರಂತರವಾಗಿ ತೆಗೆದುಹಾಕುವುದರಿಂದ ವಾಯುಪಡೆಯ ಒಟ್ಟಾರೆ ಸಾಮರ್ಥ್ಯವು ಕಡಿಮೆಯಾಗುತ್ತಿದೆ. ಆದರೆ ಇನ್ನೂ, ನಾವು ತಂತ್ರಜ್ಞಾನ ಮತ್ತು ಸಾಮರ್ಥ್ಯದ ಅಂತರದಲ್ಲಿ ರಾಜಿ ಮಾಡಿಕೊಳ್ಳದೆ ದೇಶೀಯ ಉತ್ಪಾದನೆಯ ಮೇಲೆ ನಿರಂತರ ಗಮನವನ್ನು ಮುಂದುವರಿಸುತ್ತೇವೆ," ಎಂದು ವಾಯುಪಡೆಯ ಮುಖ್ಯಸ್ಥ ಮಾರ್ಷಲ್ ವಿಆರ್ ಚೌಧರಿ ಹೇಳಿದರು.

ಬಾಹ್ಯಾಕಾಶ ಅಪ್ಲಿಕೇಶನ್‌ನ ಸಹಾಯದಿಂದ ವಾಯು ಶಕ್ತಿ

ಬಾಹ್ಯಾಕಾಶ ಅಪ್ಲಿಕೇಶನ್‌ನ ಸಹಾಯದಿಂದ ವಾಯು ಶಕ್ತಿ

ನ್ಯಾವಿಗೇಷನ್, ಸ್ಥಾನ ಮತ್ತು ಸಮಯದ ಮ್ಯಾಪಿಂಗ್‌ನಲ್ಲಿ ಸಾಕಷ್ಟು ಉಪಯುಕ್ತವಾದ ಬಾಹ್ಯಾಕಾಶ ಅಪ್ಲಿಕೇಶನ್‌ನ ಸಹಾಯದಿಂದ ವಾಯು ಶಕ್ತಿಯನ್ನು ಏರೋಸ್ಪೇಸ್ ಶಕ್ತಿಯನ್ನಾಗಿ ಪರಿವರ್ತಿಸಲು ನಾವು ಪ್ರತಿಪಾದಿಸುತ್ತೇವೆ ಎಂದು ಏರ್ ಚೀಫ್ ಮಾರ್ಷಲ್ ವಿಆರ್ ಚೌಧರಿ ಹೇಳಿದ್ದಾರೆ. ಉಕ್ರೇನ್ ನೆಲದ ಮೇಲೆ ರಷ್ಯಾ ನಡೆಸುತ್ತಿರುವ ನಿರಂತರ ದಾಳಿ ಮತ್ತು ಯುದ್ಧದಿಂದಾಗಿ ನಾವು ಪಾಠ ಕಲಿಯಬೇಕಾಗಿದೆ. ಯಾವೆಲ್ಲ ರೀತಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದನ್ನು ಉಲ್ಲೇಖಿಸಿ ಮಾತನಾಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+