ನಾಸಾದ ಕ್ಯೂರಿಯಾಸಿಟಿ ಕ್ಲಿಕ್ಕಿಸಿಕೊಂಡ ಮನೋಹರ 'ಪನೋರಮಾ ಸೆಲ್ಫಿ'

ವಾಷಿಂಗ್ಟನ್, ಸೆಪ್ಟೆಂಬರ್ 8: ಮೊಬೈಲ್ ಕ್ಯಾಮೆರಾ ಹಿಡಿದು ಸೆಲ್ಫಿ ಚಿತ್ರ ತೆಗೆದುಕೊಳ್ಳುವ ಕ್ರೇಜ್ ಸಾಮಾನ್ಯ ಎನಿಸಿಬಿಟ್ಟಿದೆ. ಈ ಕ್ರೇಜ್ ಭೂಮಿ ಮೇಲೆ ಮಾತ್ರವಲ್ಲ, ಮಂಗಳ ಗ್ರಹದ ಅಧ್ಯಯನಕ್ಕೆ ತೆರಳಿರುವ ನಾಸಾದ ಕ್ಯೂರಿಯಾಸಿಟಿ ರೋವರ್ ನೌಕೆಗೂ ತಗುಲಿದೆ!

ಮಂಗಳನ ಅಂಗಳದಲ್ಲಿ ಒಡಾಡುತ್ತಾ ಸಮೀಕ್ಷೆ ನಡೆಸುತ್ತಿರುವ ಕ್ಯೂರಿಯಾಸಿಟಿ ನೌಕೆ, ವೆರಾ ರೂಬಿನ್ ರಿಡ್ಜ್ ತಾಣದಲ್ಲಿ ಆಗಸ್ಟ್ 9ರಂದು 360 ಡಿಗ್ರಿ ಪನೋರಮಾ ನೋಟದ ಚಿತ್ರವನ್ನು ತೆಗೆದು ರವಾನಿಸಿದೆ.

ಈ ಪನೋರಮಾ ಚಿತ್ರ ದೂಳಿನ ಕಣಗಳಿಂದಾಗಿ ಆಗಸ ಕಪ್ಪುಗಟ್ಟಿರುವ ವಾತಾವರಣದ ದೃಶ್ಯವನ್ನು ಒಳಗೊಂಡಿದೆ. ರೋವರ್‌ನ ಮೇಲ್ಮೈ ಮೇಲೆ ಸಾಕಷ್ಟು ಪ್ರಮಾಣದ ದೂಳು ಆವರಿಸಿರುವುದು ಚಿತ್ರದಲ್ಲಿ ಕಾಣಿಸಿದೆ. ಜತೆಗೆ ರೋವರ್‌ನ ಮುಖ್ಯ ಕ್ಯಾಮೆರಾದ ಅಪರೂಪದ ನೋಟವೂ ದಕ್ಕಿದೆ.

ಕ್ಯೂರಿಯಾಸಿಟಿಯಂತೆಯೇ ಮಂಗಳದಲ್ಲಿ ಅಧ್ಯಯನ ನಡೆಸುತ್ತಿರುವ ಅಪಾರ್ಚುನಿಟಿ ರೋವರ್ ಗ್ರಹದ ಇನ್ನೊಂದು ಭಾಗದಲ್ಲಿದೆ. ಅಲ್ಲಿ ದೂಳಿನ ಕಣದ ಪ್ರಮಾಣ ಇನ್ನೂ ಹೆಚ್ಚು.

ಅಂಗಾರಕನ ಗಟ್ಟಿಯಾದ ಬಂಡೆಕಲ್ಲುಗಳ ನಡುವೆ ನೆಲವನ್ನು ಅಗೆಯುತ್ತಾ ಶೋಧನೆ ನಡೆಸುತ್ತಿರುವ ಕ್ಯೂರಿಯಾಸಿಟಿ ಅಲ್ಲಿ 2000 ದಿನಗಳನ್ನು ಕಳೆದಿದೆ.

NASAs Curiosity rover Panorama click on Mars

ಮಂಗಳ ಗ್ರಹದ ಅನೇಕ ಮಹತ್ವದ ಸಂಗತಿಗಳನ್ನು ಭೂಮಿಗೆ ರವಾನಿಸುತ್ತಿರುವ ರೋವರ್ ನೌಕೆ ಕಳುಹಿಸುತ್ತಿರುವ ಅಪರೂಪದ ಚಿತ್ರಗಳು ವಿಸ್ಮಯ ಮೂಡಿಸುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+