ಮಂಗಳನಲ್ಲಿಗೆ ತೆರಳಲು 'ಹೆಸರು' ನೋಂದಾಯಿಸಿದ್ದೀರಾ!?
ನ್ಯೂಯಾರ್ಕ್, ಅ. 9: ಮಂಗಳಯಾನದ ದೃಶ್ಯಗಳನ್ನು ಕೇವಲ ಟಿವಿ, ಪತ್ರಿಕೆ ಮತ್ತು ಅಂತರ್ಜಾಲ ತಾಣಗಳಲ್ಲಿ ನೋಡಿದಾಗ ನಮಗೂ ಅಲ್ಲಿಗೊಮ್ಮೆ ಹೋಗಿ ಬರಬೇಕು ಎಂದು ಅನ್ನಿಸಿಯೇ ಅನ್ನಿಸಿರುತ್ತೆ. ಸದ್ಯ ನಮಗೆ ಅಲ್ಲಿಗೆ ಹೋಗಲು ಸಾಧ್ಯವಾಗದ್ದಿದರೆ ಏನಾಯಿತು? ನಮ್ಮ ಹೆಸರನ್ನಾದರೂ ಅಲ್ಲಿಗೆ ಕಳಿಸುವ ಅವಕಾಶ ಸಿಕ್ಕರೆ ಹೇಗೆ?
ಹೌದು.. ಇಂಥದ್ದೊಂದು ಅವಕಾಶವನ್ನು ನಾಸಾ ನಿಮ್ಮ ಮುಂದೆ ಇಟ್ಟಿದೆ. ಬರುವ ಡಿಸೆಂಬರ್ 4 ರಂದು ಮಂಗಳನೆಡೆಗೆ ತೆರಳಲಿರುವ ಬಾಹ್ಯಾಕಾಶ ನೌಕೆ 'ಒರಿಯನ್' ನಿಮ್ಮ ಹೆಸರನ್ನು ಕೊಂಡೊಯ್ಯಲಿದೆ.[ಮಂಗಳಯಾನದಿಂದ ಮತ್ತೊಂದು ಚಿತ್ರ ಬಂತು]

ನೀವು ಮಾಡಬೇಕಾದ್ದು ಇಷ್ಟೇ?
ಡಿಸೆಂಬರ್ 4 ರಂದು ತೆರಳಲಿರುವ 'ಒರಿಯನ್' ನಿಮ್ಮ ಹೆಸರನ್ನು ಕೊಂಡೊಯ್ಯಲಿದೆ. ಆದರೆ ನಾಸಾದ ಅಂತರ್ಜಾಲ ತಾಣಕ್ಕೆ ತೆರಳಿ ನಿಮ್ಮ ಹೆಸರನ್ನು ದಾಖಲಿಸಿರಬೇಕು. ಅದು ಕೇಳುವ ಕೆಲವು ಮೂಲಭೂತ ಮಾಹಿತಿ ನೀಡಬೇಕು. ನಂತರ ವೆಬ್ ಸೈಟ್ ಒಂದು ಡಿಜಿಟಲ್ ಬೋರ್ಡಿಂಗ್ ಪಾಸ್ ನೀಡುತ್ತದೆ.
ಗಮನಿಸಿ, ಹೆಸರು ದಾಖಲಿಸಲು ಅಕ್ಟೋಬರ್ 31 ಕೊನೆ ದಿನ. ಈಗಾಗಲೇ 95 ಸಾವಿರ ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ನಾಸಾ ತಿಳಿಸಿದೆ. ಅಲ್ಲದೇ ನಿಮಗೆ ಒಂದು ಸಂದೇಶ ಕೂಡಾ ತಲುಪುತ್ತದೆ. ಮಂಗಳನ ಮೇಲೆ ನಿಮ್ಮ ಹೆಸರು ರಾರಾಜಿಸಲಿದೆ ಎಂಬ ಮೆಸೇಜ್ ನಿಮಗೆ ತಲುಪಲಿದೆ.[ಅಮೆರಿಕ-ಭಾರತ ಜಂಟಿ ಮಂಗಳಯಾನ]
ಹೆಸರುಗಳು ಮಂಗಳನ ಅಂಗಳ ತಲುಪೋದು ಹೇಗೆ?
ಎಲ್ಲ ಹೆಸರುಗಳನ್ನು ಮೈಕ್ರೋಚಿಫ್ ವೊಂದರಲ್ಲಿ ಸಂಗ್ರಹಿಸಲಾಗುತ್ತದೆ. ನಂತರ ಅದನ್ನು ಬಾಹ್ಯಾಕಾಶ ನೌಕೆಯಲ್ಲಿರಿಸಿ ಮಂಗಳನಲ್ಲಿಗೆ ಕಳುಹಿಸಿಕೊಡಲಾಗುತ್ತದೆ.
ನಾಸಾ ಮಂಗಳನಲ್ಲಿಗೆ ಮಾನವನನ್ನು ಕಳಿಸಲು ಯೋಜಿಸಿದೆ. ಹೆಸರು ನೋಂದಾಯಿಸದವರೆಲ್ಲ ಯೋಜನೆಯ ಭಾಗವಾದಂತೆ. ಮುಂದಿನ ದಿನಗಳಲ್ಲಿ ಇವರಿಗೆಲ್ಲ ಮಂಗಳನಲ್ಲಿಗೆ ಹಾರಲು ಅವಕಾಶ ಒದಗಿ ಬಂದರೂ ಆಶ್ಚರ್ಯವಿಲ್ಲ ಎಂದು ಒರಿಯನ್ ಯೋಜನೆಯ ಪ್ರೋಗ್ರಾಮ್ ಮ್ಯಾನೇಜರ್ ಮಾರ್ಕ್ ಗೀಯರ್ ತಿಳಿಸಿದ್ದಾರೆ.
ಹೆಸರು ನೋಂದಾಯಿಸಲು ಇಲ್ಲಿಗೆ ಭೇಟಿ ನೀಡಿ...












Click it and Unblock the Notifications