ಬಾಹ್ಯಾಕಾಶದಿಂದ ಹಿಂತಿರುಗಿದ ಪೆಗ್ಗಿ ವಿಟ್ಸನ್ ದು ಎಷ್ಟೊಂದು ದಾಖಲೆ!
Recommended Video

ಪೆಗ್ಗಿ ವಿಟ್ಸನ್ ಶನಿವಾರ ಭೂಮಿಗೆ ಹಿಂತಿರುಗಿದ್ದಾರೆ. ಇಷ್ಟು ದಿನ ಎಲ್ಲಿದ್ದರು ಅನ್ನುವುದನ್ನು ಈಗಾಗಲೇ ನೀವು ಊಹಿಸಿರುತ್ತೀರಿ. ಹೌದು, ಅವರು ಬಾಹ್ಯಾಕಾಶದಲ್ಲಿದ್ದರು. 288 ದಿನಗಳ ಕಾಲ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸ್ಟೇಷನ್ ನಲ್ಲಿ ಕಳೆದಿರುವ ಆಕೆ ಹೊಸ ದಾಖಲೆ ಬರೆದಿದ್ದಾರೆ.
ನಾಸಾದ ಗಗನಯಾತ್ರಿ ಹಾಗೂ ಬಯೋಕೆಮಿಸ್ಟ್ ಆದ ವಿಟ್ಸನ್ ಒಟ್ಟಾರೆ ಲೆಕ್ಕದಲ್ಲಿ ಬಾಹ್ಯಾಕಾಶದಲ್ಲಿ ಅತಿ ಹೆಚ್ಚು ಸಮಯ ಕಳೆದ ಮಹಿಳೆ ಹಾಗೂ ಅಷ್ಟೇ ಏಕೆ ಈ ಭೂ ಮಂಡಲದಿಂದ ತೆರಳಿದ ಮಹಿಳೆಯರ ಪೈಕಿಯೇ ಅತಿ ಹೆಚ್ಚು ಸಮಯ ಬಾಹ್ಯಾಕಾಶದಲ್ಲಿ ಕಳೆದ ದಾಖಲೆ ಅವರದು.

ವಿಟ್ಸನ್ ಒಟ್ಟಾರೆಯಾಗಿ 665 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ. 2002, 2007-08ರಲ್ಲಿ ಕೂಡ ಅವರು ಬಾಹ್ಯಾಕಾಶಕ್ಕೆ ತೆರಳಿದ್ದರು. ಅತಿ ಹೆಚ್ಚು ಸಮಯ ಬಾಹ್ಯಾಕಾಶದಲ್ಲಿ ಕಳೆದ ಈ ಹಿಂದಿನ ದಾಖಲೆ ಜೆಫ್ ವಿಲಿಯಮ್ಸನ್ ಹೆಸರಲ್ಲಿದೆ. ಅವರು 534 ದಿನಗಳನ್ನು ಕಳೆದಿದ್ದರು.

ಜಾಗತಿಕ ದಾಖಲೆ ಗಮನಿಸಿದರೆ ವಿಟ್ಸನ್ ಗೆ ಎಂಟನೆ ಸ್ಥಾನ. ಮೊದಲ ಸ್ಥಾನದಲ್ಲಿರುವುದು ರಷ್ಯಾದ ಗೆನಡಿ ಪಡಲ್ಕ. ಅವರು 879 ದಿನ ಭೂಮಿಯಿಂದ ಹೊರಗಿದ್ದರು. ಅಂದಹಾಗೆ ಐವತ್ತೇಳು ವರ್ಷದ ವಿಟ್ಸನ್ ಅತ್ಯಂತ ಹಿರಿಯ ಬಾಹ್ಯಾಕಾಶ ಮಹಿಳೆ.












Click it and Unblock the Notifications