ನೇಪಾಳದಿ ಲಕ್ಷಾಂತರ ಹೃದಯಗಳನ್ನು ಗೆದ್ದ ನರೇಂದ್ರ ಮೋದಿ

ಕಠ್ಮಂಡು, ಆ.4: 'ನಿಮ್ಮ ಸಂಸತ್ತಿನಲ್ಲಿ ಮಾತನಾಡುತ್ತಿರುವ ಮೊದಲ ಆಹ್ವಾನಿತ ನಾನು. ಇದು 120 ಕೋಟಿ ಭಾರತೀಯರಿಗೆ ನೀವು ತೋರಿಸಿದ ಗೌರವಾದರ,'' ಎಂದೇ ಭಾಷಣ ಆರಂಭಿಸಿದ ಮೋದಿ, ಭಾರತ ಮತ್ತು ನೇಪಾಳ ಸಂಬಂಧ ಗಂಗಾ ನದಿ, ಹಿಮಾಲಯದಷ್ಟೇ ಹಳೆಯದು ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಸಂಸತ್ತಿನಲ್ಲಿ ತಮ್ಮ ಭಾಷಣದಲ್ಲಿ ಹೇಳಿದರು.

ಹಿಮಾಲಯದ ತಪ್ಪಲಿನ ನೇಪಾಳ ದೇಶಕ್ಕೆ ಭರಪೂರ ಯೋಜನೆ, ನೆರವುಗಳನ್ನು ಘೋಷಿಸುವ ಮೂಲಕ ಪ್ರಧಾನಿ ಮೋದಿ ಅವರು ಅಲ್ಲಿನ ರಾಜತಾಂತ್ರಿಕರಲ್ಲದೆ, ಜನಮನ ಗೆದ್ದಿದ್ದಾರೆ. ಸೋಮವಾರ ಐದನೇ ಶತಮಾನ ಕಾಲದ ಭಾಗ್ ಮತಿ ನದಿ ತಟದಲ್ಲಿರುವ ಪಶುಪತಿನಾಥ ದೇಗುಲಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆ ಸಲ್ಲಿಸಿ ಧನ್ಯತೆ ಅನುಭವಿಸಿದರು.[ಹೆತ್ತವರ ಜತೆ ಮೋದಿ 'ಪುತ್ರ' ನ ಪುನರ್ಮಿಲನ]

ವ್ಯಾಪಾರ ಹಾಗೂ ಹೂಡಿಕೆ, ಜಲವಿದ್ಯುತ್, ಕೃಷಿ, ಪರಿಸರ, ಪ್ರವಾಸೋದ್ಯಮ, ಶಿಕ್ಷಣ, ಸಂಸ್ಕೃತಿ ಹಾಗೂ ಕ್ರೀಡೆ ಸೇರಿದಂತೆ ಹಲವು ಪ್ರಮುಖ ವಿಷಯಗಳಿಗೆ ಸಂಬಂಧಿಸಿ ದ್ವಿಪಕ್ಷೀಯ ಸಹಕಾರವನ್ನು ಬಲಗೊಳಿಸಲು ನೇಪಾಳದ ನಾಯಕತ್ವದೊಂದಿಗೆ ಶ್ರಮಿಸಲು ತಾವು ಬಯಸುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಮೋದಿ ಅವರ ನೇಪಾಳ ಭೇಟಿ ವಿವರಗಳು ಹಾಗೂ ಚಿತ್ರಗಳು ನಿಮ್ಮ ಮುಂದೆ...

ನೇಪಾಳಕ್ಕೆ 1 ಶತಕೋಟಿ ಡಾಲರ್

ನೇಪಾಳಕ್ಕೆ 1 ಶತಕೋಟಿ ಡಾಲರ್

ನೇಪಾಳಕ್ಕೆ ಸರಿ ಸುಮಾರು 6100 ಕೋಟಿ ರು ಸಾಲ ನೀಡುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ.ಈ ನಿಧಿಯನ್ನು ರಸ್ತೆ ನಿರ್ಮಾಣ ಮತ್ತು ಜಲವಿದ್ಯುತ್ ಯೋಜನೆಗಳಿಗೆ ಬಳಸಿಕೊಳ್ಳಲಾಗುವುದು ಎಂದು ನೇಪಾಳದ ವಿತ್ತ ಸಚಿವ ರಾಮ್ ಶರಣ್ ಮಹಾತ್ ಹೇಳಿದ್ದಾರೆ.

ನೆರೆ ರಾಷ್ಟ್ರ ಸಂಬಂಧ ಇನ್ನೂ ಬದಲಾಗುತ್ತದೆ

ನೆರೆ ರಾಷ್ಟ್ರ ಸಂಬಂಧ ಇನ್ನೂ ಬದಲಾಗುತ್ತದೆ

'ಭಾರತದ ಪ್ರಧಾನಿಯೊಬ್ಬರು ಇಲ್ಲಿಗೆ ಭೇಟಿ ನೀಡಲು 17 ವರ್ಷಗಳೇ ಆಗಿವೆ. ಆದರೆ ಸಾರ್ಕ್ ಶೃಂಗಕ್ಕೆ ನಾನು ಮತ್ತೆ ಇಲ್ಲಿಗೆ ಬರಲಿದ್ದೇನೆ. ದ್ವಿಪಕ್ಷೀಯ ಮಾತುಕತೆ, ನೆರೆ ರಾಷ್ಟ್ರಗಳ ಜತೆ ಸಂಬಂಧ ಇನ್ಮುಂದೆ ಬದಲಾಗಲಿದೆ' ಎಂದರು. 1997ರಲ್ಲಿ ಆಗಿನ ಪ್ರಧಾನಿ ಐ ಕೆ ಗುಜ್ರಾಲ್ ಅವರ ನೇಪಾಳ ಪ್ರವಾಸದ ಬಳಿಕ ಅಲ್ಲಿಗೆ ಭೇಟಿ ನೀಡುತ್ತಿರುವ ಮೊದಲ ಪ್ರಧಾನಿ ಮೋದಿ ಅವರಾಗಿದ್ದಾರೆ.

 ಯುದ್ಧದ ಬದಲು ಬುದ್ಧನನ್ನು ಒಪ್ಪಿಕೊಳ್ಳಿ

ಯುದ್ಧದ ಬದಲು ಬುದ್ಧನನ್ನು ಒಪ್ಪಿಕೊಳ್ಳಿ

ಮಾವೋವಾದಿಗಳನ್ನು ಬದಲಿಸಿ ಪ್ರಜಾಪ್ರಭುತ್ವಕ್ಕೆ ಮರಳುತ್ತಿರುವ ನೇಪಾಳವನ್ನು ಸ್ವಾಗತಿಸಿದ ಮೋದಿ ಅವರು ಯುದ್ಧದ ಬದಲಾಗಿ ಬುದ್ಧನನ್ನು ಒಪ್ಪಿಕೊಳ್ಳಿ ಎಂದಿದ್ದಾರೆ.

ನೇಪಾಳದಲ್ಲಿ ದಾಲ್ ಬಾತ್ ಊಟ

ನೇಪಾಳದಲ್ಲಿ ದಾಲ್ ಬಾತ್ ಊಟ

ಭಾರತ ಮೂಲದ ಅಡುಗೆಗಾರ ನಂದಕುಮಾರ್ ಅವರ ಮಾರ್ಗದರ್ಶನದಲ್ಲಿ ತರಕಾರಿ ಸಾಂಬಾರಿನ ಊಟ, ದಾಲ್ ಬಾತ್, ಸೊಪ್ಪಿನ ಪಲ್ಯ, ತರಕಾರಿ, ಹಣ್ಣುಗಳನ್ನು ಮೋದಿ ತಮ್ಮ ಪ್ರವಾಸದ ವೇಳೆ ಸೇವಿಸಿದರು. ಹೋಟೆಲ್ ಹಯಾತ್ ನಲ್ಲಿ ಮೋದಿ ಅವರಿಗೆ ನೇಪಾಳ ಪ್ರಧಾನಿ ಕೊಯಿರಾಲಾ ಅವರು ಔತಣ ಕೂಟ ಏರ್ಪಡಿಸಿದ್ದರು. ವ್ಯಾಪಾರ ವ್ಯವಹಾರದ ಬಗ್ಗೆ ಮಾತುಕತೆ ಕೂಡಾ ಇಲ್ಲೆ ನಡೆದಿದ್ದು ವಿಶೇಷ.

ನೇಪಾಳಿ ಭಾಷೆಯಲ್ಲಿ ಭಾಷಣ

ನೇಪಾಳಿ ಭಾಷೆಯಲ್ಲಿ ಭಾಷಣ

ನೇಪಾಳದ ಸಂಸತ್ತಿನಲ್ಲಿ ಭಾಷಣ ಮಾಡಿದ ಮೋದಿ ಅವರು ನೇಪಾಳಿ ಭಾಷೆಯಲ್ಲಿ ಮಾತನಾಡಿ ಅಚ್ಚರಿ ಮೂಡಿಸಿದರು.

601 ಸದಸ್ಯರ ನೇಪಾಳದ ಸಂಸತ್ತು ಮೇಜು ಕುಟ್ಟಿ ಸಂಭ್ರಮಿಸಿತು. ಬಳಿಕ ಹಿಂದಿಯಲ್ಲಿ ಮಾತನಾಡಿದ ಮೋದಿ, 45 ನಿಮಿಷಗಳ ಕಾಲ ಭಾಷಣ ಮಾಡಿದರು. ನೇಪಾಳದ ಸಂಸತ್ತನ್ನು ಉದ್ದೇಶಿಸಿ ಭಾಷಣ ಮಾಡುತ್ತಿರುವ ವಿದೇಶಿ ನಾಯಕರ ಪೈಕಿ ಮೋದಿ ಎರಡನೆಯವರು. 1990ರಲ್ಲಿ ಜರ್ಮನಿಯ ಅಂದಿನ ಛಾನ್ಸೆಲರ್ ಹೆಲ್ಮಟ್ ಕೋಲ್ ಅವರು ಮೊದಲ ಬಾರಿಗೆ ಉಪನ್ಯಾಸ ಕೊಟ್ಟಿದ್ದರು.
ಜನಪರ ಯೋಜನೆಗಳಿಗೆ ಒತ್ತು ನೀಡಿದ ಮೋದಿ

ಜನಪರ ಯೋಜನೆಗಳಿಗೆ ಒತ್ತು ನೀಡಿದ ಮೋದಿ

ಅಯೋಡಿನ್ ಕೊರತೆಯಿಂದ ಉಂಟಾಗುವ ರೋಗಗಳನ್ನು ತಡೆಗಟ್ಟುವ ಕ್ರಮವಾಗಿ ನೇಪಾಳಕ್ಕೆ ಅಯೋಡಿನ್ ಯುಕ್ತ ಉಪ್ಪು ಪೂರೈಸುವ 69 ದಶಲಕ್ಷ ನೇಪಾಳಿ ರೂಪಾಯಿ ಮೊತ್ತದ ಯೋಜನೆಯ ಒಪ್ಪಂದವೂ ಅವುಗಳಲ್ಲಿ ಒಳಗೊಂಡಿದೆ.

ಮೋದಿ ಧನ್ಯತೆ ಅನುಭವಿಸಿದ ಕ್ಷಣ

ಮೋದಿ ಧನ್ಯತೆ ಅನುಭವಿಸಿದ ಕ್ಷಣ

ಮೋದಿ ಅವರು ತಮ್ಮ ಸಾಕು ಪುತ್ರ, ಧರ್ಮಪುತ್ರ ಜೀತ್ ಬಹದ್ದೂರ್ ನನ್ನು ಆತನ ಹೆತ್ತವರೊಡನೆ ಸೇರಿಸಿ ಧನ್ಯತೆ ಅನುಭವಿಸಿದ್ದಾರೆ. ಜೀತ್ ಕುಟುಂಬಕ್ಕೆ ಉಡುಗೊರೆಗಳನ್ನು ನೀಡಿ ಮನ ಗೆದ್ದಿದ್ದಾರೆ. ನೇಪಾಳಿಗಳು ಮೋದಿ ಅವರು ತುಂಬು ಹೃದಯದಿಂದ ಹಾರೈಸಿದ್ದಾರೆ.[ಇನ್ನಷ್ಟು ಚಿತ್ರಗಳನ್ನು ನೋಡಿ]

ನೇಪಾಳದಲ್ಲಿ ಸಂವಿಧಾನ ರಚನೆಯಾಗಬೇಕಿದೆ

ನೇಪಾಳದಲ್ಲಿ ಸಂವಿಧಾನ ರಚನೆಯಾಗಬೇಕಿದೆ

ನೇಪಾಳದ ಶಾಂತಿ ಪ್ರಕ್ರಿಯೆ ಹಾಗೂ ಸಂವಿಧಾನ ರಚನೆ ಮತ್ತು ಆರ್ಥಿಕ ಸಮಸ್ಯೆಗಳು ಸೇರಿದಂತೆ ಹಲವು ವಿಷಯಗಳ ಕುರಿತು ಉಭಯ ನಾಯಕರು ಚರ್ಚೆ ನಡೆಸಿದರು. ಪರಸ್ಪರ ಸಂಬಂಧಗಳ ವಿವಿಧ ಮುಖಗಳು ಹಾಗೂ ಸಮಾನ ಹಿತಾಸಕ್ತಿಯ ವಿವಿಧ ವಿಚಾರಗಳ ಬಗ್ಗೆಯೂ ಮೋದಿ ಮಾತುಕತೆ ನಡೆಸಿದರು.

ಸಾಮಾನ್ಯ ಜನತೆಯೊಂದಿಗೆ ಮೋದಿ

ಸಾಮಾನ್ಯ ಜನತೆಯೊಂದಿಗೆ ಮೋದಿ

ಈ ನಡುವೆ ನೇಪಾಳದ ಸಾಮಾನ್ಯ ಜನತೆಯೊಂದಿಗೂ ಮೋದಿ ಮಾತುಕತೆ ನಡೆಸಿದ್ದು, ಜನರಿಗೆ ಮೋದಿ ಬಗ್ಗೆ ಇನ್ನಷ್ಟು ಹೆಚ್ಚಿನ ಗೌರವ ಹುಟ್ಟಿಸಿತು.

ಮೋದಿಗೆ ಭವ್ಯ ಸ್ವಾಗತ, ನೇಪಾಳದಲ್ಲಿ ಸಂಭ್ರಮ

ಮೋದಿಗೆ ಭವ್ಯ ಸ್ವಾಗತ, ನೇಪಾಳದಲ್ಲಿ ಸಂಭ್ರಮ

ನರೇಂದ್ರ ಮೋದಿ ಅವರಿಗೆ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಕ್ಕ ಭವ್ಯ ಸ್ವಾಗತ ಕಠ್ಮಂಡುವಿನ ಎಲ್ಲೆಡೆ ಎರದು ದಿನ ಮುಂದುವರೆಯಿತು. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ನೇಪಾಳಿಗಳು ನಿಂತು ಮೋದಿ ಅವರನ್ನು ಕಣ್ತುಂಬಿಸಿಕೊಂಡರು.

ಪಶುಪತಿನಾಥನ ಸನ್ನಿಧಿಯಲ್ಲಿ ಮೋದಿ

ಪಶುಪತಿ ನಾಥ ದೇವರ ದರ್ಶನ ಪಡೆದುಕೊಂಡ ಸಂತಸದಲ್ಲಿ ಮೋದಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+