Modi - Trump: ಫೆಬ್ರವರಿ 13ರಂದು ನರೇಂದ್ರ ಮೋದಿ - ಡೊನಾಲ್ಡ್ ಟ್ರಂಪ್ ಭೇಟಿ ಸಾಧ್ಯತೆ

ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಗೆ ಮುಹೂರ್ತ ಫಿಕ್ಸ್ ಆಗಿದೆ. ಫೆಬ್ರವರಿ 13ರಂದು ಪ್ರಧಾನಿ ನರೇಂದ್ರ ಮೋದಿ ವಾಷಿಂಗ್ಟ್‌ನ್ ಡಿಸಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಪ್ರಧಾನಿ ಮೋದಿ ಭೇಟಿಯ ಸಮಯದಲ್ಲಿ ಟ್ರಂಪ್‌ ಮೋದಿ ಅವರಿಗೆ ಭೋಜನಕೂಟ ಆಯೋಜಿಸುವ ಸಾಧ್ಯತೆ ಇದೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್‌ಗೆ ಭೇಟಿ ನೀಡಲಿದ್ದು ಅದು ಮುಗಿದ ಬಳಿಕ ಫೆಬ್ರವರಿ 12 ಸಂಜೆ ವಾಷಿಂಗ್ಟ್ ಡಿಸಿಗೆ ತೆರಳುವ ನಿರೀಕ್ಷೆ ಇದ್ದು, ಫೆಬ್ರವರಿ 14 ರವರೆಗೆ ಅಮೆರಿದ ರಾಜಧಾನಿ ವಾಷಿಂಗ್ಟನ್‌ನಲ್ಲಿ ವಾಸ್ತವ್ಯ ಹೂಡಲಿದ್ದು ಹಲವು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

narendra modi donald trump meeting february 13 dinner host

ಜನವರಿ 20ರಂದು ಡೊನಾಲ್ಡ್ ಟ್ರಂಪ್ ಅಮೆರಿಕದ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅಧಿಕಾರ ಸ್ವೀಕರಿಸಿದ ಬಳಿಕ ಮೋದಿ ಮತ್ತು ಟ್ರಂಪ್‌ ಫೋನ್‌ನಲ್ಲಿ ಮಾತನಾಡಿದ್ದಾರೆ. ಫೆಬ್ರವರಿಯಲ್ಲಿ ನರೇಂದ್ರ ಮೋದಿ ಯುಎಸ್‌ಗೆ ಆಗಮಿಸುವ ಸಾಧ್ಯತೆ ಇದೆ ಎಂದು ಟ್ರಂಪ್ ಹೇಳಿದ್ದರು.

ಇಬ್ಬರು ನಾಯಕರ ಭೇಟಿಯು ಹಲವು ಕಾರಣದಿಂದ ಸಾಕಷ್ಟು ಕುತೂಹಲ ಕೆರಳಿಸಿದೆ. ಅದರಲ್ಲೂ ಟ್ರಂಪ್ ವಲಸಿಗರ ವಿಚಾರದಲ್ಲಿ ಕಠಿಣವಾಗಿದ್ದು, ಈ ಬಗ್ಗೆ ನರೇಂದ್ರ ಮೋದಿ ಅವರ ಜೊತೆ ಚರ್ಚೆ ನಡೆಸುತ್ತಾರಾ ಎನ್ನುವ ಕುತೂಹಲವಿದೆ.

ವ್ಯಾಪಾರ ಸಂಬಂಧ ಸುಧಾರಣೆ

ಈ ಭೇಟಿಯಲ್ಲಿ ಉಭಯ ನಾಯಕರು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ಅಮೆರಿಕದಲ್ಲಿ ತಯಾರಾದ ಭದ್ರತಾ ಸಾಧನಗಳನ್ನು ಖರೀದಿ ಮಾಡಲು ಭಾರತ ಒಪ್ಪಂಡ ಮಾಡಿಕೊಳ್ಳುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಕೆನಡಾ, ಮೆಕ್ಸಿಕೊ ಮತ್ತು ಚೀನಾದ ಮೇಲೆ ಟ್ರಂಪ್ ವಿಧಿಸಿದ ಸುಂಕಗಳ ನಂತರ, ಈ ವ್ಯಾಪಾರ ಒಪ್ಪಂದ ಇನ್ನಷ್ಟು ಮಹತ್ವ ಪಡೆದುಕೊಂಡಿದೆ.

ಭಾರತದಲ್ಲಿ ಅಮೆರಿಕದ ವಾಣಿಜ್ಯ ಹಿತಾಸಕ್ತಿಗಾಗಿ ಕೆಲಸ ಮಾಡಲು ಟ್ರಂಪ್ ನಿರ್ಧರಿಸಿದ್ದಾರೆ ಎನ್ನಲಾಗಿದ್ದು, ಭಾರತವು ಯುಎಸ್‌ನಿಂದ ಹೆಚ್ಚಿನ ಇಂಧನವನ್ನು ಖರೀದಿ ಮಾಡಲು ಆಸಕ್ತಿ ತೋರಿಸಿದ್ದಾರೆ. ಅಮೆರಿಕದ ಕಂಪನಿಗಳಿಗೆ ಪ್ರಯೋಜನವಾಗಬಹುದಾದ ಪ್ರಮುಖ ವಸ್ತುಗಳ ಮೇಲಿನ ಕಸ್ಟಮ್ಸ್ ಸುಂಕಗಳನ್ನು ಕಡಿಮೆ ಮಾಡಿದ್ದು, ಅಮೆರಿಕದ ಏಳಿಗೆಗಾಗಿ ಟ್ರಂಪ್ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ.

ಭಾರತದಿಂದ ಅಕ್ರಮವಾಗಿ ಯುಎಸ್‌ಗೆ ತೆರಳಿರುವವರನ್ನು ವಾಪಸ್ ಪಡೆಯಲು ಭಾರತ ಸಿದ್ದವಿದೆ ಎಂದು ಹೇಳಿದೆ. ಹೆಚ್ಚಿನ ಸಂಖ್ಯೆಯ ಅಕ್ರಮ ವಲಸಿಗರು ಗುಜರಾತ್‌ನಿಂದ ತೆರಳಿದವರು ಎಂದು ವರದಿಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+