'ಕೊರೊನಾ ಚೀನಾಕ್ಕೆ ಅಲ್ಲಾಹುವಿನ ಶಾಪ' ಎಂದಿದ್ದವನಿಗೂ ಕೊರೊನಾ ಸೋಂಕು!
ಟೆಹರಾನ್, ಮಾರ್ಚ್ 13: ಜಗತ್ತಿನ ನಿದ್ದೆಗೆಡಿಸಿರುವ ಮಾಹಾಮಾರಿ ಕೊರೊನಾ ವೈರಸ್ ಕೋವಿಡ್ ದಿನದಿಂದ ದಿನಕ್ಕೆ ಆಘಾತದ ಮೇಲೆ ಆಘಾತ ನೀಡುತ್ತಿದೆ.
ಇರಾಕ್‌ನಲ್ಲಿ, "ಅಲ್ಲಾಹ್ ಕೊರೋನಾ ವೈರಸ್‌ನ್ನು ಚೀನಿಯರಿಗೆ ಕೊಟ್ಟ ಮಹಾ ಶಿಕ್ಷೆ'' ಎಂದು ಹೇಳಿದ್ದ ಇರಾಕ್‌ನ ಮುಸ್ಲಿಂ ವಿದ್ವಾಂಸನಿಗೂ ಕೊರೋನಾ ಸೋಂಕು ತಗುಲಿರುವುದು ವರದಿಯಾಗಿದೆ.

ಭಾಷಣಕಾರ ಹಡಿ ಅಲ್ ಮೊಡರೆಸಿ ಫೆಬ್ರವರಿ 28ರಂದು ವಿಡಿಯೋ ಮಾಡಿ, "20 ಮಿಲಿಯನ್ ಮುಸ್ಲಿಮರ ಜೀವನವನ್ನು ನಾಶ ಮಾಡಲು ಚೀನಾ ಮುಖಂಡರು ಯತ್ನಿಸಿದ್ದರು. ಕೊರೋನಾ ವೈರಸ್ ನ್ನು ಚೀನಾ ಜನತೆಗೆ ಅಲ್ಲಾಹ್ ನೀಡಿರುವ ಶಾಪ' ಎಂದು ಹೇಳಿದ್ದರು.
Iraqi Islamic Scholar Hadi Al-Modarresi, Prior to Being Infected with Coronavirus: The Virus Is a Divine Punishment against the Chinese pic.twitter.com/7NiQki6qBy
— MEMRI (@MEMRIReports) March 9, 2020
'ಚೀನಾದವರು ಮುಸ್ಲಿಮರನ್ನು ಬೆದರಿಸಿದ್ದರು. ಅವರ ಮಸೀದಿಗಳನ್ನು ಚೀನಾದಲ್ಲಿ ಹೊಡೆದುರುಳಿಸಲಾಗಿತ್ತು. ಪವಿತ್ರ ಗ್ರಂಥಗಳನ್ನು ಸುಟ್ಟಿದ್ದರು. ಮದ್ಯಪಾನ ಮಾಡುವುದಕ್ಕೆ ಒತ್ತಾಯಿಸಿದ್ದರು. ಯಾರೂ ತಮ್ಮನ್ನು ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಭಾವಿಸಿದ್ದರು. ಆದರೆ, ಅಲ್ಲಾಹ್ ಶಿಕ್ಷೆ ಕೊಟ್ಟಿದ್ದಾನೆ' ಎಂದು ಹಡಿ ಅಲ್ ಹೇಳಿದ್ದರು.












Click it and Unblock the Notifications