ಎದೆಹಾಲು ಕುಡಿಸುತ್ತಿದ್ದ ಅಮ್ಮನ ಸ್ಲಟ್ ಎಂದ ದಂಪತಿ

ಲಂಡನ್, ಜೂ. 7 : ಹನ್ನೊಂದು ತಿಂಗಳ ಆ ಮುದ್ದು ಕಂದಮ್ಮನನ್ನು ಎತ್ತಿಕೊಂಡಿದ್ದ ಆ ಮಾತೆಯನ್ನು ಅರವತ್ತಿನ ಆಸುಪಾಸಿನ ಆ ದಂಪತಿಗಳು ಎಗ್ಗುಸಿಗ್ಗಿಲ್ಲದೆ ಹೀಯಾಳಿಸುತ್ತಿದ್ದರೆ, ಅಮ್ಮನ ಕಣ್ಣಲ್ಲಿ ಬಳಬಳನೆ ನೀರು ಸುರಿಯುತ್ತಿತ್ತು. ಏಕೆಂದರೆ, ಇಪ್ಪತ್ತೇಳು ವರ್ಷದ ಆ ಮಹಿಳೆಯನ್ನು ಅವರಿಬ್ಬರು ಹಿರಿಯರು 'ನಡತೆಗೆಟ್ಟ ಹೆಂಗಸು' ಎಂದು ಜರಿದಿದ್ದರು.

ಇಷ್ಟಕ್ಕೂ ಆ ಮಹಿಳೆ ಮಾಡಿದ ತಪ್ಪೇನೆಂದರೆ, ಕಾಫಿ ಶಾಪ್ ನಲ್ಲಿ ಸಾರ್ವಜನಿಕವಾಗಿ ತನ್ನ ಹನ್ನೊಂದು ತಿಂಗಳ ಮಗುವಿಗೆ ಎದೆಹಾಲನ್ನು ಕುಡಿಸಿದ್ದು. ಆಗ ತಾನೆ ನಿದ್ದೆಯಿಂದ ಎದ್ದಿದ್ದ ಕಂದಮ್ಮನನ್ನು ಸಂತೈಸಲು ಎದೆಯ ಹಾಲಿನ ಪಾನ ಮಾಡಿಸದೆ ಆ ಮಹಿಳೆಗೆ ಬೇರೆ ದಾರಿಯಿರಲಿಲ್ಲ. ಆದರೆ, ಇದು ಆ ವೃದ್ಧರಿಗೆ ಅಸಭ್ಯವಾಗಿ ಕಂಡಿತ್ತು.

Mother called slut for breast feeding baby in public

ಅಕೌಂಟ್ಸ್ ಮ್ಯಾನೇಜರ್ ಆಗಿರುವ 27 ವರ್ಷದ ರಿಯಾ ಹೋಲಿ ಎಂಬ ಮಹಿಳೆ ತನ್ನ ಮಗು ಮತ್ತು ಸ್ನೇಹಿತೆಯ ಜೊತೆ ಲಂಡನ್ನಿನಲ್ಲಿನ ಕೋಸ್ಟಾ ಕಾಫಿಗೆ ಬಂದಿದ್ದಳು. ಅಮ್ಮನ ಮಡಿಲಲ್ಲಿ ಮಗು ತಣ್ಣಗೆ ನಿದ್ರಿಸುತ್ತಿತ್ತು. ಅವರಿಬ್ಬರು ತಮಗಾಗಿ ಕೇಕ್ ಮತ್ತು ಕೋಕ್ ಆರ್ಡರ್ ಮಾಡಿದ್ದರು. ಅಷ್ಟರಲ್ಲಿ ಮಗು ಎಚ್ಚೆತ್ತು ವರಾತ ತೆಗೆಯಿತು.

ರಿಯಾ ಹೋಲಿ ತನ್ನ ಮಗುವಿಗೆ ಅಲ್ಲಿಯೇ ಸ್ತನ್ಯಪಾನ ಮಾಡಿಸಹತ್ತಿದಳು. ಅದನ್ನು ನೋಡಿದ್ದೇ ದಂಪತಿಗಳು ಉರಿದುಕೊಂಡಿದ್ದಾರೆ. "ಥೂ ಅಸಹ್ಯ" ಅಂತ ಅಂದಿದ್ದಲ್ಲದೆ, ಎದೆ ಹಾಲು ಕುಡಿಸುತ್ತಿದ್ದ ರಿಯಾಳನ್ನು "ನಡತೆಗೆಟ್ಟ ಹೆಂಗಸು" ಎಂದು ವಾಚಾಮಗೋಚರವಾಗಿ ಬೈಯಲು ಆರಂಭಿಸಿದ್ದಾರೆ. [ಹೀಗೊಂದು ಎದೆಹಾಲಿನ ಸ್ವಗತ]

ಈ ಅತಿರೇಕದ ಹೀಯಾಳಿಕೆಯಿಂದ ಅವಮಾನದಿಂದ ಕುಗ್ಗಿಹೋದ ರಿಯಾ ಹೋಲಿ ಬಿಕ್ಕಳಿಸಲು ಆರಂಭಿಸಿದ್ದಾಳೆ. ಇದಕ್ಕೂ ನಿಲ್ಲದ ದಂಪತಿಗಳು, "ಮಗುವಿಗೆ ಎಷ್ಟೊತ್ತಿಗೆ ಸ್ತನ್ಯಪಾನ ಮಾಡಿಸಬೇಕೆಂದು ಗೊತ್ತಿಲ್ಲವೆ? ತಡೆದುಕೊಳ್ಳಲು ಆಗದಿದ್ದರೆ ಮನೆಗೆ ಹೋಗಿ ಹಾಲೂಡಿಸಬಹುದಿತ್ತು. ಇಲ್ಲದಿದ್ದರೆ, ಕೆಫೆಯ ಟಾಯ್ಲೆಟ್ಟಿಗೆ ಹೋಗಿ ಮಗುವಿನ ಹೊಟ್ಟೆ ತುಂಬಿಸಬಹುದಿತ್ತು" ಎಂದೆಲ್ಲ ರೇಗಾಡಿದ್ದಾರೆ. [ತಾಯಿಯ ಹಾಲೇ ಸರ್ವಶ್ರೇಷ್ಠ]

"ಇಂಥ ಅವಮಾನ ನನ್ನ ಜೀವನದಲ್ಲಿ ಎಂದೂ ಆಗಿಲ್ಲ" ಎಂದು ರಿಯಾ ಹೋಲಿ ತನ್ನ ವೈಯಕ್ತಿಕ ಬ್ಲಾಗ್ ನಲ್ಲಿ ಕಣ್ಣೀರಿಟ್ಟು ಬರೆದಿದ್ದಾಳೆ. ಆದರೆ, ತನ್ನ ಸಹಾಯಕ್ಕೆ ಬಂದ, ಹಿರಿಯ ದಂಪತಿಗಳನ್ನು ತರಾಟೆಗೆ ತೆಗೆದುಕೊಂಡ ಕೋಸ್ಟಾ ಕಾಫಿಯ ಸಿಬ್ಬಂದಿಗಳನ್ನು ರಿಯಾ ಶ್ಲಾಘಿಸಿದ್ದಾಳೆ. ತೀರ ಅಗತ್ಯಬಿದ್ದಾಗ ಸಾರ್ವಜನಿಕವಾಗಿ ಹಸುಳೆಗೆ ಎದೆಯ ಹಾಲನ್ನು ಕುಡಿಸುವುದು ತಪ್ಪೆ? ಎಂದು ಪ್ರಶ್ನಿಸಿದ್ದಾಳೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+