Ukraine War: ಉಕ್ರೇನ್ ಡ್ರೋನ್ ಅಟ್ಯಾಕ್- ರಷ್ಯಾ ರಾಜಧಾನಿಯಲ್ಲಿ ವಿಮಾನ ನಿಲ್ದಾಣಗಳೇ ಬಂದ್!

ಉಕ್ರೇನ್ ಇದೀಗ ಮತ್ತೆ ಡೆಡ್ಲಿ ಡ್ರೋನ್ ಅಟ್ಯಾಕ್ ಶುರು ಮಾಡಿದ್ದು, ಭೀಕರ ದಾಳಿಯಿಂದ ಬೆಚ್ಚಿ ಬಿದ್ದಿರುವ ರಷ್ಯಾ ತನ್ನ ವಿಮಾನ ನಿಲ್ದಾಣಗಳನ್ನೇ ಬಂದ್ ಮಾಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಉಕ್ರೇನ್ ತನ್ನ ಬಳಿ ಇರುವ ಅತ್ಯಾಧುನಿಕ ಡ್ರೋನ್ ತಂತ್ರಜ್ಞಾನ ಬಳಕೆ ಮಾಡ್ತಿದ್ದು, ನೇರವಾಗಿ ರಷ್ಯಾ ರಾಜಧಾನಿಗೆ ನುಗ್ಗುತ್ತಿದೆ. ಈಗಾಗಲೇ ರಷ್ಯಾದ ರಾಜಧಾನಿಯಲ್ಲಿ ಸಾಕಷ್ಟು ದೊಡ್ಡ ಪ್ರಮಾಣದ ಹಾನಿಯೂ ಆಗಿದೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣ ಬಂದ್ ಮಾಡಲಾಗಿದೆ.

ರಷ್ಯಾ ರಾಜಧಾನಿ ಮಾಸ್ಕೋ ಮೂಲಕ ಪ್ರತಿದಿನ ಸಾವಿರಾರು ವಿಮಾನಗಳು ಪ್ರಯಾಣವನ್ನ ಮಾಡುತ್ತವೆ. ಲಕ್ಷಾಂತರ ಪ್ರಯಾಣಿಕರು ಕೂಡ ವಿಮಾನಗಳ ಮೂಲಕ ತಮ್ಮ ತಮ್ಮ ಗುರಿ ತಲುಪುತ್ತಾರೆ. ಆದರೆ ಉಕ್ರೇನ್ ಮಿಲಿಟರಿ ಸಾಲು ಸಾಲು ಡ್ರೋನ್ ಅಟ್ಯಾಕ್ ಶುರು ಮಾಡಿ ಭಯ ಹುಟ್ಟುಹಾಕಿದೆ. ಅಲ್ಲದೆ ಅಕಸ್ಮಾತ್ ಉಕ್ರೇನ್ ಡ್ರೋನ್ ದಾಳಿಯಿಂದ ವಿಮಾನ ಅಪಘಾತ ಸಂಭವಿಸಿದರೆ ಭಾರಿ ದೊಡ್ಡ ಮಟ್ಟದಲ್ಲಿ ಜೀವಹಾನಿ ಆಗುವುದು ಗ್ಯಾರಂಟಿ. ಇದನ್ನ ಲೆಕ್ಕ ಹಾಕಿಯೇ ಇದೀಗ ರಷ್ಯಾ ತನ್ನ ವಿಮಾನ ನಿಲ್ದಾಣದ ಕಾರ್ಯಾಚರಣೆ ಬಂದ್ ಮಾಡಿದೆ, ಎಂಬ ಸುದ್ದಿ ಹರಿದಾಡುತ್ತಿದೆ.

Moscow Airports Closed for Second Day After Ukraine Drone Strike

ರಷ್ಯಾ ಸೇನೆಯಿಂದ ಡೆಡ್ಲಿ ಅಟ್ಯಾಕ್?

ಉಕ್ರೇನ್ ಇದೀಗ ಮಾಸ್ಕೋ ಮೇಲೆ ಡ್ರೋನ್ ಅಟ್ಯಾಕ್ ಮಾಡಿರುವುದು ಸ್ವತಃ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನೇ ಕೋಪಗೊಳ್ಳುವಂತೆ ಮಾಡಿದೆ. ಅಲ್ಲದೆ ಈ ವಿಚಾರದಲ್ಲಿ ಈಗ ಉಕ್ರೇನ್‌ಗೆ ಬುದ್ಧಿ ಕಲಿಸಬೇಕು ಎಂಬ ಪಣತೊಟ್ಟು, ಶೀಘ್ರದಲ್ಲೇ ಉಕ್ರೇನ್ ಮೇಲೆ ದೊಡ್ಡ ದಾಳಿ ನಡೆಸಲು ರಷ್ಯಾ ಮಿಲಿಟರಿ ತಯಾರಿ ಆರಂಭಿಸಿದೆ ಎಂಬ ಸುದ್ದಿ ಹಬ್ಬಿದೆ. ಆದರೆ ಈ ವಿಚಾರ ಉಕ್ರೇನ್‌ಗೆ ಕೂಡ ಗೊತ್ತಿದ್ದು, ಉಕ್ರೇನ್ ಸೇನೆ ತನ್ನ ರಾಜಧಾನಿಯ ರಕ್ಷಣೆಗೆ ಮತ್ತೆ ಹೊಸ ತಂತ್ರ ಹೂಡುತ್ತಿದೆ. ಹೀಗೆ ಎರಡೂ ದೇಶಗಳ ಜಗಳ ತೀವ್ರವಾಗುತ್ತಿರುವ ಕಾರಣಕ್ಕೆ, ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹಾಯುದ್ಧದ ಭೀತಿ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+