ಶೆಲ್ ದಾಳಿ: ಪಾಕಿಸ್ತಾನದಲ್ಲಿ ಒಂದೇ ಕುಟುಂಬದ 7 ಮಂದಿ ದುರ್ಮರಣ
ಪೇಶಾವರ, ಫೆಬ್ರವರಿ.02: ಅಫ್ಘಾನಿಸ್ತಾನ್ ನಡೆಸಿದ ಮೋಟಾರ್ ಶೆಲ್ ದಾಳಿಯಲ್ಲಿ ಒಂದೇ ಕುಟುಂಬದ ಏಳು ಮಂದಿ ಪ್ರಾಣ ಬಿಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ವಾಯುವ್ಯ ಭಾಗದ ಖೈಬರ್ ಪಖ್ತುಂಕ್ವಾ ಪ್ರದೇಶದ ಮೇಲೆ ದಾಳಿ ನಡೆದಿರುವುದಾಗಿ ವರದಿಯಾಗಿದೆ.
ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನ್ ಗಡಿ ಭಾಗದಲ್ಲಿರುವ ಬಾತ್ವಾರ್ ಬಾಂಗ್ರೋ ಗ್ರಾಮದ ಮನೆ ಮೇಲೆ ಮೋಟಾರ್ ಶೆಲ್ ದಾಳಿ ನಡೆಸಲಾಗಿದ್ದು, ಘಟನೆಯಲ್ಲಿ ನಾಲ್ವರು ಪುಟ್ಟ ಮಕ್ಕಳು ಸೇರಿದಂತೆ ಒಂದು ಕುಟುಂಬದ ಏಳು ಮಂದಿ ಬಲಿಯಾಗಿದ್ದಾರೆ.
ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ ಇಮ್ರಾನ್ ಖಾನ್Morter Shell Attack From Afghanistan 7 Peoples Killed Pakistan.
ಮೋಟಾರ್ ಶೆಲ್ ದಾಳಿ ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಭದ್ರತಾ ಪಡೆ, ರಕ್ಷಣಾ ಸಿಬ್ಬಂದಿ, ಆಂಬುಲೆನ್ಸ್ ಹಾಗೂ ಜಿಲ್ಲಾಡಳಿತದ ಅಧಿಕಾರಿಗಳು ದೌಡಾಯಿಸಿದ್ದು, ಮೃತದೇಹಗಳನ್ನು ಅಲ್ಲಿಂದ ಸ್ಥಳಾಂತರಗೊಳಿಸಲಾಗುತ್ತಿದೆ.

ಶೆಲ್ ದಾಳಿಗೆ ಮನೆ ಸಂಪೂರ್ಣ ಹಾನಿ:
ಇನ್ನು, ಮೋಟಾರ್ ಶೆಲ್ ದಾಳಿಯಲ್ಲಿ ಗಡಿಭಾಗದಲ್ಲಿನ ಮನೆ ಸಂಪೂರ್ಣ ಹಾನಿಯಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಗಡಿ ಪ್ರದೇಶದ ಜನರಲ್ಲಿ ಮತ್ತೆ ಯಾವಾಗ ಏನಾಗುತ್ತೋ ಎಂಬ ಭೀತಿ ಕಾಡುತ್ತಿದೆ. ಅಫ್ಘಾನಿಸ್ತಾನ್ ದ ಕುನಾಲ್ ಪ್ರದೇಶದಿಂದ ಈ ಮೋಟಾರ್ ಶೆಲ್ ದಾಳಿ ನಡೆದಿರುವ ಬಗ್ಗೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.












Click it and Unblock the Notifications