ಕ್ಲಿಂಟನ್ ಎನ್ನುತ್ತಲೇ ಸಂದರ್ಶನದಿಂದ ಎದ್ದುಹೋದ ಮೋನಿಕಾ ಲೆವಿನ್ ಸ್ಕಿ

ಒಂದು ಕಾಲಕ್ಕೆ ಜಗತ್ಪ್ರಸಿದ್ಧಿ ಪಡೆದಿದ್ದ ಮೋನಿಕಾ ಲೆವಿನ್ ಸ್ಕಿ ಎಂಬ ಸುಂದರಿ, ಮೊನ್ನೆ ಸೋಮವಾರ ಟಿವಿ ಸಂದರ್ಶನ ನಡೆಯುವಾಗ ಪ್ರಶ್ನೆಯೊಂದರಿಂದ ಮುಜುಗರವಾಗಿ ಎದ್ದು ಹೋಗಿದ್ದಾರೆ. ಅಮೆರಿಕದ ವೈಟ್ ಹೌಸ್ ನಲ್ಲಿ ನಡೆದಿದ್ದ ಲೈಂಗಿಕ ಹಗರಣದ ಮೂಲಕ ಮೋನಿಕಾ ಜಗತ್ತಿನಾದ್ಯಂತ ಪರಿಚಿತರಾಗಿದ್ದರು.

ಅಮೆರಿಕ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್ ರಿಂದ ವೈಯಕ್ತಿಕ ಕ್ಷಮೆಯನ್ನು ಈಗಲೂ ನಿರೀಕ್ಷೆ ಮಾಡ್ತೀರಾ ಎಂದು ಆಕೆಯನ್ನು ಕೇಳುತ್ತಿದ್ದಂತೆ ಸಂದರ್ಶನದಿಂದ ಮೋನಿಕಾ ಎದ್ದು ನಡೆದಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದ ಹಾಗೆ ಯಾವುದೇ ಪ್ರಶ್ನೆ ಇರಬಾರದು ಎಂದು ಮುಂಚೆಯೇ ಹೇಳಿದ್ದರೂ ಹೀಗೆ ಮಾಡಿದ್ದಾರೆ ನೋಡಿ.

"ನಾನು ಅಲ್ಲಿಂದ ಎದ್ದು ಬರಲು ಕಾರಣ ಏನೆಂದರೆ, ಯಾವುದೇ ಮಹಿಳೆಗೆ ತನ್ನ ಪರವಾಗಿ ನಿಲ್ಲುವುದು ಮತ್ತು ಬೇರೆಯವರು ತಮಗೆ ಬೇಕಾದಂತೆ ವ್ಯಾಖ್ಯಾನ ಮಾಡಲು ಬಿಡಬಾರದು ಎಂಬುದು ಕೂಡ ಅಷ್ಟೇ ಮುಖ್ಯ" ಎಂದು ಲೆವಿನ್ ಸ್ಕಿ ಹೇಳಿದ್ದಾರೆ.

Monica Lewinsky walks out of live TV interview over Bill Clinton question

ಇಸ್ರೇಲ್ ನ ಜೆರುಸಲೇಂನಲ್ಲಿ ಚಾನೆಲ್ 2ರ ಕಡೆಯಿಂದ ಸಂದರ್ಶನ ನಡೆಯುತ್ತಿತ್ತು. ಯೊನಿತ್ ಲೆವಿ ಸಂದರ್ಶಕರಾಗಿದ್ದರು. ಕ್ಲಿಂಟನ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದಂತೆ, ನನ್ನನ್ನು ಕ್ಷಮಿಸಿ, ನನ್ನಿಂದ ಇದು ಮಾಡಲು ಸಾಧ್ಯವಿಲ್ಲ ಎಂದು ಮೈಕ್ ತೆಗೆದಿಡುವ ಮುಂಚೆ ಲೆವಿನ್ ಸ್ಕಿ ಹೇಳಿದ್ದಾರೆ.

ಆದರೆ, ಇದಕ್ಕಾಗಿ ಚಾನಲ್ ಕಡೆಯಿಂದ ಕ್ಷಮೆಯೇನೂ ಕೇಳಿಲ್ಲ. ಆಕೆ ಭಾಗವಹಿಸಿದ್ದಕ್ಕೆ ಧನ್ಯವಾದಗಳು. ಅವರ ಸೂಕ್ಷ್ಮತೆಗೆ ಗೌರವ ನೀಡುತ್ತೇವೆ ಮತ್ತು ಅವರಿಗೆ ಒಳ್ಳೆಯದಾಗಲಿ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+