Budget 2024: ಮಾಲ್ಡೀವ್ಸ್‌ಗೆ ಗುನ್ನಾ; ಲಕ್ಷದ್ವೀಪಕ್ಕೆ ಭರ್ಜರಿ ಗಿಫ್ಟ್‌- ಇದು ನಯಾ ಭಾರತ್‌

ಭಾರತದ ವಿರುದ್ಧ ಜಗಳ ಕಾಯುತ್ತಾ, ಸರಿಯಾಗಿ ಪೆಟ್ಟು ತಿಂದಿರುವ ಮಾಲ್ಡೀವ್ಸ್‌ಗೆ ಇದೀಗ ಭಾರತದ ಬಜೆಟ್ ಕೂಡ ದೊಡ್ಡ ಆಘಾತ ನೀಡಿದೆ. ಅಂದಹಾಗೆ ಭಾರತದಲ್ಲಿ ಮಾಲ್ಡೀವ್ಸ್‌ಗೆ ಪರ್ಯಾಯ ಎಂಬಂತಿರುವ ಲಕ್ಷದೀಪ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಮಹತ್ವದ ಯೋಜನೆ ಜಾರಿಗೆ ತಂದಿದೆ. ಈ ಮೂಲಕ ಭಾರತೀಯ ಪ್ರವಾಸಿಗರಿಗೆ ಭರ್ಜರಿ ಸುದ್ದಿ ಸಿಕ್ಕಂತಾಗಿದೆ.

ಅಷ್ಟಕ್ಕೂ ಇಂದು 2024ರ ಕೇಂದ್ರ ಬಜೆಟ್ ಮಂಡನೆ ಮಾಡಿದ ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಬಡ್ಡಿ ರಹಿತ ಸಾಲ ನೀಡುವ ಯೋಜನೆ ಘೋಷಿಸಿದ್ದಾರೆ. ಅದರಲ್ಲೂ ಭಾರತದ ಲಕ್ಷದೀಪ್ ಅಭಿವೃದ್ಧಿಗೂ ಹೆಚ್ಚಿನ ಒತ್ತನ್ನ ನೀಡುವ ಬಗ್ಗೆ ತಿಳಿಸಲಾಗಿದೆ. ಇದರ ಜೊತೆಗೆ ರಾಜ್ಯಗಳಲ್ಲಿ ಟೂರಿಸಂ ಅಭಿವೃದ್ಧಿಗು ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಅವರು ತಿಳಿಸಿದ್ದಾರೆ. ಅಲ್ಲದೆ ಈ ಬಜೆಟ್‌ನಲ್ಲಿ ಅತಿಹೆಚ್ಚು ಹಣವನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಮೀಸಲು ಇಡಲಾಗಿದೆ.

Modi Government Has Been Announced Special Package To Develop The Lakshadweep In Budget 2024

75,000 ಕೋಟಿ ರೂಪಾಯಿ ಬಂಪರ್!

ಇದೇ ಮೊದಲ ಬಾರಿ ಬರೋಬ್ಬರಿ 75,000 ಕೋಟಿ ಹಣವನ್ನ ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಮೀಸಲು ಇಡಲಾಗಿದೆ. ಈ ಬಗ್ಗೆ ನಿರ್ಮಲಾ ಅವರು ಮಾಹಿತಿ ನೀಡಿದ್ದು, ಈ ಮೂಲಕ ಭಾರತದ ವಿರುದ್ಧ ಮಾತನಾಡಿದ್ದ ಮಾಲ್ಡೀವ್ಸ್‌ಗೆ ಸರಿಯಾಗಿ ಗುನ್ನಾ ಕೊಡಲಾಗಿದೆ. ಇತ್ತೀಚೆಗಷ್ಟೇ ಹೊರಬಿದ್ದಿದ್ದ ವರದಿ ಒಂದು ಮಾಲ್ಡೀವ್ಸ್‌ಗೆ ಭೇಟಿ ನೀಡುತ್ತಿರುವ ಭಾರತೀಯ ಪ್ರವಾಸಿಗರ ಸಂಖ್ಯೆ ಭಾರಿ ಪ್ರಮಾಣದಲ್ಲಿ ಕುಸಿಯುತ್ತಿರುವ ಬಗ್ಗೆ ತಿಳಿಸಿತ್ತು. ಇಷ್ಟೆಲ್ಲ ಘಟನೆ ನಡುವೆ ಇದೀಗ ಕೇಂದ್ರ ಸರ್ಕಾರ ಕೂಡ ಮಹತ್ವದ ಯೋಜನೆ ಜಾರಿಗೆ ತಂದಿದೆ.

ಭಾರತ ವಿರೋಧಿಗೆ ತಕ್ಕ ಪಾಠ?

ಮಾಲ್ಡೀವ್ಸ್ ಪ್ರವಾಸೋದ್ಯಮ ನಂಬಿ ಬದುಕುತ್ತಿದೆ. ಹೀಗಿದ್ದಾಗ ಬಹುತೇಕ ಭಾರತೀಯರು ಇಲ್ಲಿ ಪ್ರವಾಸಕ್ಕೆ ಹೋಗಿ ಮಾಲ್ಡೀವ್ಸ್ ಆರ್ಥಿಕ ಸ್ಥಿತಿಗೆ ಸಹಾಯ ಮಾಡುತ್ತಿದ್ದರು. ಆದ್ರೆ ಯಾವಾಗ ಈ ಮಾಲ್ಡೀವ್ಸ್ ಜಗಳಕ್ಕೆ ಬಂತೋ ಆಗ ಭಾರತೀಯರು ಕೂಡ ತಿರುಗಿಬಿದ್ದಿದ್ದು ಮಾಲ್ಡೀವ್ಸ್‌ಗೆ ಬುದ್ಧಿ ಕಲಿಸುತ್ತಿದ್ದಾರೆ. ಇದರ ಪರಿಣಾಮ ಈಗ ಮಾಲ್ಡೀವ್ಸ್ ಪ್ರವಾಸೋದ್ಯಮ ಕುಸಿತ ಕಾಣುತ್ತಿದೆ. ಆ ಬಗ್ಗೆ ಹೊರಬಿದ್ದಿರುವ ಅಂಕಿ & ಅಂಶಗಳು ಇಲ್ಲಿವೆ ಮುಂದೆ ಓದಿ.

ಮಾಲ್ದೀವ್ಸ್‌ & ಭಾರತದ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಆರಂಭವಾದ ಬಳಿಕ ದ್ವೀಪರಾಷ್ಟ್ರಕ್ಕೆ ಭೇಟಿ ನೀಡುವ ಭಾರತದ ಪ್ರವಾಸಿಗರ ಸಂಖ್ಯೆ ಕುಸಿಯುತ್ತ ಸಾಗಿದೆ. ಮಾಲ್ದೀವ್ಸ್‌ಗೆ ಹೋಗುತ್ತಿದ್ದ ವಿದೇಶಿಯರ ಪೈಕಿ ಭಾರತದ ಪ್ರವಾಸಿಗರು ಮೊದಲ ಸ್ಥಾನದಲ್ಲಿ ಇದ್ದರು. ಹೀಗಿದ್ದಾಗ ಭಾರತದ ಜೊತೆಗೆ ಮಾಲ್ಡೀವ್ಸ್ ಕಿರಿಕ್ ಶುರುವಾಗಿತ್ತು. ಕಳೆದ 1 ತಿಂಗಳ ಅವಧಿಯಲ್ಲಿ ಭಾರಿ ಕುಸಿತ ಕಂಡಿದೆ ಭಾರತೀಯ ಪ್ರವಾಸಿಗರ ಸಂಖ್ಯೆ. ಮೊದಲನೆ ಸ್ಥಾನದಿಂದ ಈಗ 5ನೇ ಸ್ಥಾನಕ್ಕೆ ಭಾರತ ಮೂಲದ ಪ್ರವಾಸಿಗರ ಸಂಖ್ಯೆ ಕುಸಿತ ಕಂಡಿದೆಯಂತೆ.

Modi Government Has Been Announced Special Package To Develop The Lakshadweep In Budget 2024

ಮಾಲ್ಡೀವ್ಸ್ ಬೇಡ ಅಂತಿದ್ದಾರೆ ಇಂಡಿಯನ್ಸ್

ಅಷ್ಟಕ್ಕೂ 2024ರ ಜನವರಿ 1ರಿಂದ 28ರವರೆಗೂ ಒಟ್ಟಾರೆ 1.74 ಲಕ್ಷ ಪ್ರವಾಸಿಗರು ಮಾಲ್ದೀವ್ಸ್‌ಗೆ ಪ್ರವಾಸಕ್ಕೆ ಬಂದಿದ್ದಾರೆ. ಇವರಲ್ಲಿ ಭಾರತೀಯರ ಸಂಖ್ಯೆ 13,989. ಈ ಮೂಲಕ ಮಾಲ್ಡೀವ್ಸ್‌ಗೆ ಆಘಾತ ಎದುರಾಗಿದೆ. ಮಾಲ್ದೀವ್ಸ್‌ಗೆ ಭೇಟಿ ನೀಡಿರುವ ಪ್ರವಾಸಿಗರಲ್ಲಿ ರಷ್ಯ ಮೂಲದ ಪ್ರಜೆಗಳು 18,561 ಮೂಲಕ ಮೊದಲ ಸ್ಥಾನದಲ್ಲಿದ್ದಾರೆ. ಇಟಲಿಯವರು 18111, ಚೀನಾ ಮೂಲದವ್ರು 16,529 & ಬ್ರಿಟನ್‌ ಮೂಲದ 14,588 ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರಂತೆ.

2023ರಲ್ಲಿ 17 ಲಕ್ಷಕ್ಕೂ ಹೆಚ್ಚು ಪ್ರವಾಸಿಗರು ಮಾಲ್ಡೀವ್ಸ್ ಪ್ರವಾಸ ಮಾಡಿದ್ರು. ಈ ಪೈಕಿ, ಭಾರತ ಮೂಲದ 2,09,198 ಪ್ರವಾಸಿಗರು ಮಾಲ್ಡೀವ್ಸ್‌ಗೆ ಭೇಟಿ ನೀಡಿದ್ದರು. ರಷ್ಯಾ ಮೂಲದ 2 ಲಕ್ಷ 09 ಸಾವಿರ 146 & ಚೀನಾದಿಂದಲೇ 1,87,118 ಪ್ರವಾಸಿಗರು ತೆರಳಿದ್ದರಂತೆ. ಆದರೆ ಈ ಬಾರಿ ಸರಿಯಾದ ಪೆಟ್ಟು ಬೀಳುವುದು ಗ್ಯಾರಂಟಿ ಎನ್ನಲಾಗಿದೆ. ಇದೇ ಸಮಯಕ್ಕೆ ಭಾರತ ಕೂಡ ಈ ದೇಶಕ್ಕೆ ಗುನ್ನಾ ಕೊಡಲು ಮುಂದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+