PM Modi US Visit: ಅಮೆರಿಕ & ಭಾರತದ ನಡುವೆ ಮಹತ್ವದ ತೈಲ ಒಪ್ಪಂದಕ್ಕೆ ಅಂತಿಮ ಮುದ್ರೆ

ಪ್ರಧಾನಿ ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ಅತ್ಯಂತ ಯಶಸ್ವಿಯಾಗಿ ಮುನ್ನಡೆದಿದೆ. ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗೆ ಮಹತ್ವದ ಒಪ್ಪಂದಗಳಿಗೆ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಅಂತಿಮ ಮುದ್ರೆ ಒತ್ತಿದ್ದಾರೆ. ಇದರ ಜೊತೆಯಲ್ಲೇ ಜಾಗತಿಕ ಮಟ್ಟದಲ್ಲಿ ಅಮೆರಿಕಗೆ ಭಾರತ ಇನ್ನೊಂದು ಮಹತ್ವದ ಸ್ಥಾನಮಾನ ನೀಡಲು ಈಗ ಮುಂದಾಗಿದೆ.

ಭಾರತದ ಸಂಬಂಧ ಜಗತ್ತಿನ ಪ್ರತಿಯೊಂದು ದೇಶಕ್ಕೂ ಬಹುಮುಖ್ಯ, ಯಾಕಂದ್ರೆ ಭಾರತದ ಜೊತೆಗೆ ಯಾವುದಾದರೂ ಒಂದು ರೀತಿಯಲ್ಲಿ ಲಿಂಕ್ ಇಟ್ಟುಕೊಂಡಿರುತ್ತವೆ ಪ್ರಪಂಚದ ಪ್ರತಿ ದೇಶಗಳು. ಅದರಲ್ಲೂ ಅಮೆರಿಕ ಎಂಬ ಬೃಹತ್ ದೇಶಕ್ಕೆ ಭಾರತವನ್ನು ಬಿಟ್ಟು ಬದುಕುವ ಯಾವುದೇ ಅವಕಾಶಗಳು ಇಲ್ಲ. ಭಾರತದ ಜೊತೆಗೆ ಅಷ್ಟು ಗಟ್ಟಿಯಾಗಿದ ಸಂಬಂಧ ವೃದ್ಧಿ ಮಾಡಿಕೊಂಡು ಬಂದಿದೆ ಅಮೆರಿಕ. ಆದರೆ ಇತ್ತೀಚಿನ ಬೆಳವಣಿಗೆಗಳು ಸಾಕಷ್ಟು ಆತಂಕವನ್ನು ಸೃಷ್ಟಿ ಮಾಡಿದ್ದವು. ತೆರಿಗೆ ಯುದ್ಧದ ಭಯ ಕೂಡ ಆವರಿಸಿರುವ ಸಮಯದಲ್ಲೇ, ಇದೀಗ ಭರ್ಜರಿ ಸುದ್ದಿ ಅಮೆರಿಕದ ನೆಲದಿಂದ ಸಿಕ್ಕಿದೆ!

Modi and Trump Finalizes Deal to Position US as Leading Oil and Gas Supplier for India

ಅಮೆರಿಕ ಮೂಲಕ ಅತಿಹೆಚ್ಚು ತೈಲ ಆಮದು!

ಭಾರತ & ಅಮೆರಿಕ ನಡುವೆ ಹಲವು ರೀತಿ ವ್ಯಾಪಾರ ಹಾಗೂ ವ್ಯವಹಾರ ನಡೆಯುತ್ತಿದೆ. ಈ ಪೈಕಿ ಶಸ್ತ್ರಾಸ್ತ್ರಗಳ ಮಾರಾಟ ಸೇರಿದಂತೆ ಐಟಿ & ಬಿಟಿ ಉದ್ಯಮದಲ್ಲಿ ಕೂಡ ಎರಡೂ ದೇಶಗಳ ನಡುವೆ ಅತ್ಯುತ್ತಮ ಸಂಬಂಧ ಇದೆ. ಇದರ ಜೊತೆಗೆ ಈಗ ಅಮೆರಿಕಗೆ ಮತ್ತೊಂದು ಮಹತ್ವದ ಸ್ಥಾನಮಾನ ನೀಡಲು ಭಾರತ ಮುಂದಾಗಿದೆ. ಭಾರತದ ಜೊತೆಯಲ್ಲಿ ಕೈಜೋಡಿಸಿದ ಟ್ರಂಪ್ ಅವರು ಪ್ರಧಾನಿ ಮೋದಿ ಜೊತೆಗೆ ಮಹತ್ವದ ತೈಲ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಈ ಮೂಲಕ ಇನ್ನುಮುಂದೆ ಭಾರತದ ಪ್ರಮುಖ ತೈಲ ಹಾಗೂ ಗ್ಯಾಸ್ ಪೂರೈಕೆದಾರ ದೇಶವಾಗಿ ಅಮೆರಿಕ ಗುರುತಿಸಿಕೊಳ್ಳಲಿದೆ.

500 ಬಿಲಿಯನ್ ಡಾಲರ್‌ಗೆ ಏರಿಕೆ

ತೈಲ ಕ್ಷೇತ್ರ ಮಾತ್ರವಲ್ಲದೆ, ಭಾರತದ ನ್ಯೂಕ್ಲಿಯರ್ ಎನರ್ಜಿ ಅಂದರೆ ಪರಮಾಣು ಆಧರಿತ ವಿದ್ಯುತ್ ಉದ್ಪಾತದನಾ ಕ್ಷೇತ್ರಕ್ಕೆ ಅಮೆರಿಕ ಎಂಟ್ರಿ ಕೊಡಲು ಬೇಕಾದ ಕಾನೂನು ತಿದ್ದುಪಡಿ ಮಾಡಲು ಇದೀಗ ಭಾರತ ಒಪ್ಪಿಗೆ ಸೂಚಿಸಿದೆ. ಇದರ ಜೊತೆಗೆ ಭಾರತ & ಅಮೆರಿಕ ನಡುವೆ ವ್ಯಾಪಾರದ ಒಟ್ಟು ಮೊತ್ತವನ್ನು 2030ರ ಒಳಗೆ 500 ಬಿಲಿಯನ್ ಡಾಲರ್‌ಗೆ ಏರಿಕೆ ಮಾಡಲು ಎರಡೂ ದೇಶಗಳು ಒಪ್ಪಿಗೆ ಸೂಚಿವೆ. ಇದರ ಜೊತೆಗೆ F-35 ಜೆಟ್ ಖರೀದಿ ಬಗ್ಗೆ ಕೂಡ ಈ ಸಮಯದಲ್ಲಿ ಅಂತಿಮ ಒಪ್ಪಂದಕ್ಕೆ ಬರಲಾಗಿದೆ.

ಒಟ್ನಲ್ಲಿ ಭಾರತ ಮತ್ತು ಅಮೆರಿಕ ನಡುವೆ ಮಹತ್ವದ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಇದರ ಜೊತೆಗೆ ತೆರಿಗೆ ಯುದ್ಧದ ಭೀತಿಯಿಂದ ಭಾರತ ಬಚಾವ್ ಆಗಿದೆಯಾ? ಎಂಬ ಮಾತು ಕೇಳಿಬಂದಿದೆ. ಮತ್ತೊಂದು ಕಡೆ ಎರಡೂ ದೇಶಗಳ ಈ ಮಾತುಕತೆ ಜಗತ್ತಿನ ಗಮನ ಸೆಳೆದಿದೆ. ಹಾಗೇ ಭಾರತದ ಮಾರುಕಟ್ಟೆಗಳಲ್ಲಿ ದೊಡ್ಡ ಅಲೆ ಏಳುವ ಸಾಧ್ಯತೆ ಇದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+