ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಡೆರ್ನಾ ಲಸಿಕೆಯು ಎಷ್ಟು ವರ್ಷಗಳ ಕಾಲ ಕೊರೊನಾವೈರಸ್‌ನಿಂದ ರಕ್ಷಣೆ ನೀಡಬಹುದು?

|
Google Oneindia Kannada News

ಪ್ಯಾರಿಸ್, ಜನವರಿ 08: ಮಾಡೆರ್ನಾ ಲಸಿಕೆ ಪಡೆದುಕೊಂಡರೆ, ಲಸಿಕೆಯ ಪ್ರಭಾವ ಎಷ್ಟು ವರ್ಷಗಳ ಕಾಲ ನಮ್ಮ ದೇಹದಲ್ಲಿ ಇರಬಹುದು ಎನ್ನುವ ಪ್ರಶ್ನೆ ಸಾಕಷ್ಟು ಮಂದಿಯನ್ನು ಕಾಡುತ್ತಿದೆ.

ಕೊರೊನಾ ಲಸಿಕೆಯು ವೈರಸ್ ವಿರುದ್ಧ ಶಾಶ್ವತ ಪರಿಣಾಮವನ್ನು ಬೀರುತ್ತದೆಯೇ, ರೋಗ ಬಾರದಂತೆ ಬಹಳ ವರ್ಷಗಳ ಕಾಲ ಇದು ನಮಗೆ ರಕ್ಷಣೆ ನೀಡುತ್ತದೆಯೇ ಎಂಬುದು ಪ್ರಮುಖ ಪ್ರಶ್ನೆಯಾಗಿದೆ.

ಕರ್ನಾಟಕದಲ್ಲಿ ಎರಡನೇ ಸುತ್ತಿನ ಲಸಿಕೆ ಡ್ರೈ ರನ್; ಏನೆಲ್ಲಾ ತಯಾರಿಯಾಗಿದೆ?ಕರ್ನಾಟಕದಲ್ಲಿ ಎರಡನೇ ಸುತ್ತಿನ ಲಸಿಕೆ ಡ್ರೈ ರನ್; ಏನೆಲ್ಲಾ ತಯಾರಿಯಾಗಿದೆ?

ಮಾಡೆರ್ನಾ ಲಸಿಕೆಯು ಒಂದೆರೆಡು ವರ್ಷಗಳವರೆಗೆ ರಕ್ಷಣೆ ನೀಡುವ ಸಾಧ್ಯತೆ ಇದೆ ಎಂದು ಅದರ ಮುಖ್ಯ ಕಾರ್ಯನಿರ್ವಾಹಕ ಹೇಳಿದ್ದಾರೆ. ಯುಎಸ್ ಬಯೋಟೆಕ್ ಕೊರೊನಾವೈರಸ್ ವಿರುದ್ಧ ಸಮರ ಸಾರಲು ಮುಂದಿನ ಕೆಲವು ವಾರಗಳಲ್ಲಿ ಲಸಿಕೆಯನ್ನು ಬಿಡುಗಡೆ ಮಾಡುತ್ತಿದೆ. ಯುರೋಪಿಯನ್ ಕಮಿಷ ನ್‌ನಿಂದ ಒಪ್ಪಿಗೆ ದೊರೆತಿದೆ.

Moderna CEO Says Vaccine Likely To Protect For Couple Of Years

ಲಸಿಕೆ ಅಭಿವೃದ್ಧಿಗೆ ಸಾಮಾನ್ಯವಾಗಿ ಕೆಲವು ವರ್ಷಗಳು ಬೇಕಾಗುತ್ತದೆ, ಲಸಿಕೆಯ ಪರಿಣಾಮ ಎಷ್ಟು ವರ್ಷಗಳ ಕಾಲ ಇರುತ್ತದೆ ಎನ್ನುವುದು ವಿಜ್ಞಾನಿಗಳಿಗೂತಲೆನೋವಾಗಿ ಪರಿಣಮಿಸಿದೆ.

ಇನ್ನು ಕೆಲವೆಡೆ ಲಸಿಕೆಯು ಕೇವಲ ಎರಡರಿಂದ ಮೂರು ತಿಂಗಳ ಕಾಲ ಲಸಿಕೆಯ ಪರಿಣಾಮ ಇರಲಿದೆ ಎನ್ನುವ ಮಾತು ಸುಳ್ಳು ಕನಿಷ್ಠ ಒಂದೆರೆಡು ವರ್ಷಗಳ ಕಾಲ ಇರಲಿದೆ.

ಬ್ರಿಟನ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ರೂಪಾಂತರಿ ಕೊರೊನಾ ಸೋಂಕಿನ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿದೆ ಎಂಬುದು ಸಾಬೀತಾಗಿದೆ. ಇರುವ ಸೌಲಭ್ಯದಲ್ಲೇ ಹೆಚ್ಚು ಜನರನ್ನು ತಲುಪುವ ಸಲುವಾಗಿ ಅಮೆರಿಕ ಸರ್ಕಾರಪ್ರತಿಯೊಬ್ಬರಿಗೂ ಈಗ ನಿಗದಿಪಡಿಸಿದ ಅರ್ಧದಷ್ಟು ಡೋಸ್ ಕೊರೊನಾ ಲಸಿಕೆ ನೀಡುವ ಸಾಧ್ಯತೆ ಇದೆ.

ಸದ್ಯ ಅಮೆರಿಕದಲ್ಲಿ ಒಬ್ಬ ವ್ಯಕ್ತಿಗೆ ಎರಡು ಇಂಜೆಕ್ಷನ್ ಮಾಡೆರ್ನಾ ಲಸಿಕೆ ನೀಡಬೇಕೆಂದು ನಿರ್ಧರಿಸಲಾಗಿತ್ತು. ಆದರೆ,ಅದರ ಅರ್ಧದಷ್ಟು ಅಂದರೆ ಒಂದು ಇಂಜೆಕ್ಷನ್ ಮಾತ್ರ ನೀಡುವ ಕುರಿತು ಕೆಲ ತಜ್ಞರು ಸಲಹೆ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಅಮೆರಿಕದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಅನುಮತಿ ಗಿಟ್ಟಿಸಿಕೊಂಡಿರುವ ಮಾಡೆರ್ನಾ ಸಂಸ್ಥೆ ಮತ್ತು ಅಲ್ಲಿನ ಆಹಾರ ಮತ್ತು ಔಷಧ ನಿಯಂತ್ರಣ ಮಂಡಳಿ ಜತೆ ಚರ್ಚೆ ನಡೆಯುತ್ತಿದೆ.

English summary
Moderna's COVID-19 mRNA vaccine is likely to offer protection of up to a couple of years, its chief executive said on Thursday, even though more data is still needed to make a definitive assessment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X