ನಾಪತ್ತೆಯಾಗಿದ್ದ ಮೇಯರ್ ಶವವಾಗಿ ಪತ್ತೆ, ಬೆಚ್ಚಿದ ಮಹಾನಗರಿ!

ಸಿಯೋಲ್, ಜುಲೈ 10: ದಕ್ಷಿಣ ಕೊರಿಯಾದ ರಾಜಧಾನಿ ಸಿಯೋಲ್ ನ ಮೇಯರ್ ಶವವಾಗಿ ಪತ್ತೆಯಾಗಿದ್ದಾರೆ. ಲೈಂಗಿಕ ಕಿರುಕುಳ ಪ್ರಕರಣವೊಂದರಲ್ಲಿ ಸಿಲುಕಿದ್ದ ಮೇಯರ್ ಇತ್ತೀಚೆಗೆ ನಾಪತ್ತೆಯಾಗಿದ್ದರು. ಆದರೆ, ಶುಕ್ರವಾರ ಬೆಳಗ್ಗೆ ಅವರ ಶವ ಪತ್ತೆಯಾಗಿದೆ. ಇದಕ್ಕೂ ಮುನ್ನ ತನ್ನ ಮಗಳಿಗೆ ಉಯಿಲು ಪತ್ರದ ರೀತಿಯಲ್ಲಿ ಸಂದೇಶ ಕಳಿಸಿದ್ದಾರೆ.

ಸಿಯೋಲ್ ನಗರದ ಮೇಯರ್ ಪಾರ್ಕ್ ವಾನ್ ಸೂನ್ ಅವರ ಶವವನ್ನು ಉತ್ತರ ಸಿಯೋಲ್ ನ ಸಾಂಪ್ರದಾಯಿಕ ರೆಸ್ಟೋರೆಂಟ್ ಬಳಿ ಪತ್ತೆಯಾಗಿದೆ.

ಗುರುವಾರ ಮಧ್ಯಾಹ್ನದ ವೇಳೆ ತಮಗೆ ಬಂದ ಎಸ್ಎಂಎಸ್ ಬಗ್ಗೆ ಅನುಮಾನ ವ್ಯಕ್ತಪಡಿಸಿ, ಪೊಲೀಸರ ಬಳಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದರು. ಸಿಯೋಲ್ ಮೆಟ್ರೋಪಾಲಿಟನ್ ಪೊಲೀಸ್ ಏಜೆನ್ಸಿ ಇದಾದ ಬಳಿಕ ಬೃಹತ್ ಕಾರ್ಯಾಚರಣೆಗೆ ಮುಂದಾಗಿ, ಎಲ್ಲೆಡೆ ಮೇಯರ್ ಪತ್ತೆಯಾಗಿ ಶೋಧ ಕಾರ್ಯಕ್ಕೆ ನಡೆಸಿತು.

Missing Seoul mayors body found after missing report

600ಕ್ಕೂ ಅಧಿಕ ಪೊಲೀಸರು, ಅಗ್ನಿ ಶಾಮಕದಳದವರು, ಡ್ರೋನ್ , ಶ್ವಾನದಳ ಜಂಟಿಯಾಗಿ ಗುಡ್ಡಗಾಡು ಪ್ರದೇಶದಲ್ಲಿ ಹುಡುಕಾಟ ಆರಂಭಿಸಿದರು. ಕೊನೆಯ ಬಾರಿ ಸೆಲ್ ಫೋನ್ ಸಿಗ್ನಲ್ ಸಿಕ್ಕ ಪ್ರದೇಶದಲ್ಲಿ ಮೊದಲಿಗೆ ಹುಡುಕಾಟ ನಡೆಸಿದ್ದಾರೆ. ಶ್ವಾನದಳಕ್ಕೆ ಕೊನೆಗೆ ಬೆಟ್ಟದ ಬಳಿ ಶವಪತ್ತೆಯಾಗಿದೆ.

ಗುರುವಾರದಂದು ಮೆಟ್ರೋಪಾಲಿಟನ್ ಕಚೇರಿಗೆ ಪಾರ್ಕ್ ಅವರು ಬಂದಿರಲಿಲ್ಲ, ಯಾವುದೇ ಕಾರಣ ನೀಡಿರಲಿಲ್ಲ, ಅವರ ಪೂರ್ವ ನಿರ್ಧರಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿತ್ತು ಎಂದು ಅಧಿಕಾರಿ ಕಿಮ್ ಜಿ ಹ್ಯುಯಾಂಗ್ ಹೇಳಿದ್ದಾರೆ.

ಲೈಂಗಿಕ ಕಿರುಕುಳ ಕೇಸ್: ಎಬಿಎಸ್ ಟಿವಿ ವರದಿಯಂತೆ, ಪಾರ್ಕ್ ಅವರ ಕಾರ್ಯದರ್ಶಿಯೊಬ್ಬರು ಬುಧವಾರ ರಾತ್ರಿ ಪಾರ್ಕ್ ವಿರುದ್ಧ ಲೈಂಗಿಕ ಕಿರುಕುಳ ಕೇಸ್ ದಾಖಲಿಸಿದ್ದರು. 2017ರಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಈಗ ದೂರು ನೀಡಲಾಗಿದೆ. ಸಿಯೋ ಸಿಟಿ ಹಾಲ್ ನ ಸಿಬ್ಬಂದಿ ಕೂಡಾ ಇದೇ ರೀತಿ ಕೇಸ್ ದಾಖಲಿಸಿದ್ದಾರೆ ಎಂದು ಎಂಬಿಸಿ ಟೆಲಿವಿಷನ್ ವರದಿ ಮಾಡಿದೆ.

64 ವರ್ಷ ವಯಸ್ಸಿನ ಪಾರ್ಕ್ ಅವರು ಮಾನವ ಹಕ್ಕುಗಳ ವಕೀಲರಾಗಿದ್ದು, 2011ರಲ್ಲಿ ಸಿಯೋಲ್ ಮೇಯರ್ ಆಗಿ ಆಯ್ಕೆಯಾಗಿದ್ದು, 2018ರಲ್ಲಿ ಮೂರನೇ ಬಾರಿಗೆ ಮೇಯರ್ ಆಗಿ ಆಯ್ಕೆಯಾಗಿ ದಾಖಲೆ ಬರೆದಿದ್ದಾರೆ.

2022ರಲ್ಲಿ ಅಧ್ಯಕ್ಷೀಯ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಯಾಗಿ ಪಾರ್ಕ್ ಅವರ ಹೆಸರು ಪರಿಗಣಿಸಲಾಗಿತ್ತು ಎಂದು ಮೂನ್ ಜೀ ಇನ್ ಲಿಬರಲ್ ಡೆಮೊಕ್ರಾಟಿಕ್ ಪಕ್ಷದ ವಕ್ತಾರರು ಹೇಳಿದ್ದಾರೆ.

ಕೊರೊನಾವೈರಸ್ ಸೋಂಕಿನಿಂದ ಬಾಧಿತ ಸಿಯೋಲ್ ನಗರದಲ್ಲಿ ನೈಟ್ ಕ್ಲಬ್, ಚರ್ಚ್ , ಇ ಕಾಮರ್ಸ್ ವೇರ್ ಹೌಸ್ ,ಮನೆ ಮನೆ ಡೆಲಿವರಿ ಸೇವೆ ಬಂದ್ ಮಾಡಿಸಿ, ವೈರಸ್ ನಿಯಂತ್ರಣ ಅಭಿಯಾನ ಕೈಗೊಳ್ಳುವಲ್ಲಿ ಪಾರ್ಕ್ ಯಶಸ್ವಿಯಾಗಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+