ಬ್ರುಸೆಲ್ಸ್: ನಾಪತ್ತೆಯಾಗಿದ್ದ ಇನ್ಫಿ ಟೆಕ್ಕಿ ಗಣೇಶನ್ ಶವವಾಗಿ ಪತ್ತೆ

Posted By:
Subscribe to Oneindia Kannada

ನವದೆಹಲಿ, ಮಾರ್ಚ್ 28 : ಬ್ರುಸೆಲ್ಸ್ ನಲ್ಲಿ ನಡೆದ ಅವಳಿ ಸ್ಫೋಟದ ನಂತರ ನಾಪತ್ತೆಯಾಗಿದ್ದಾರೆ ಎನ್ನಲಾದ ಇನ್ಫೋಸಿಸ್ ಉದ್ಯೋಗಿ ರಾಘವೇಂದ್ರ ಗಣೇಶ್ ಅವರು ಶವವಾಗಿ ಪತ್ತೆಯಾಗಿದ್ದಾರೆ. ಬ್ರುಸೆಲ್ಸ್ ನ ಮೆಟ್ರೋ ಸ್ಟೇಷನ್ ಬಳಿ ಸೋಮವಾರ ಗಣೇಶ್ ಅವರ ಶವ ಪತ್ತೆಯಾಗಿರುವುದನ್ನು ಭಾರತೀಯ ರಾಯಭಾರಿ ಕಚೇರಿ ದೃಢಪಡಿಸಿದೆ.

Raghavendra Ganeshan

ಮಾರ್ಚ್ 22 ರಂದು ನಡೆದ ಅವಳಿ ಸ್ಫೋಟ ಹಾಗೂ ಮೆಲ್ ಬ್ರೇಕ್ ಮೆಟ್ರೋ ಸ್ಟೇಷನ್ ಬಳಿ ಸ್ಫೋಟ ಸಂಭವಿಸಿತ್ತು. ಈ ದುರ್ಘಟನೆಯಲ್ಲಿ 35 ಕ್ಕೂ ಅಧಿಕ ಮಂದಿ ಸಾವನ್ನಪ್ಪಿ, ನೂರಾರು ಜನ ಗಾಯಗೊಂಡಿದ್ದರು. ಪ್ರತಿನಿತ್ಯ ಮೆಟ್ರೋ ಸ್ಟೇಷನ್ ಮೂಲಕ ಕಚೇರಿಗೆ ತೆರಳುತ್ತಿದ್ದ 31 ವರ್ಷ ವಯಸ್ಸಿನ ಗಣೇಶನ್ ಅವರು ಆತ್ಮಾಹುತಿ ದಾಳಿಗೆ ಬಲಿಯಾಗಿದ್ದಾರೆ.[ಇನ್ಫಿ ಟೆಕ್ಕಿ ರಾಘವೇಂದ್ರ ನಾಪತ್ತೆ, ತಾಯಿಯ ಅಳಲು]

ಘಟನೆ ನಡೆದ ದಿನ ಕಚೇರಿಗೆ ತೆರಳುವುದಕ್ಕೂ ಮುನ್ನ ಮುಂಬೈಯಲ್ಲಿರುವ ತನ್ನ ತಾಯಿ ಅನ್ನಪೂರ್ಣೆ ಅವರಿಗೆ ಕರೆ ಮಾಡಿ ಮಾತನಾಡಿದ್ದರು. ಆದರೆ, ನಂತರ ಗಣೇಶನ್ ಇರುವಿಕೆ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಸುಮಾರು ಆರು ದಿನಗಳ ನಂತರ ಗಣೇಶನ್ ಅವರ ಶವ ಪತ್ತೆಯಾಗಿದೆ. ಇನ್ಫೋಸಿಸ್ ಕಚೇರಿ ಸಿಬ್ಬಂದಿ, ಗಣೇಶನ್ ಅವರ ಸೋದರ ಹಾಗೂ ಸ್ಥಳೀಯ ಪೊಲೀಸರು ಕಳೆದ 48 ಗಂಟೆಗಳಲ್ಲಿ ತೀವ್ರ ಶೋಧ ನಡೆಸಿದ ಮೇಲೆ ಗಣೇಶನ್ ಅವರ ಶವ ಪತ್ತೆಯಾಗಿದೆ.[ಬ್ರುಸೆಲ್ಸ್ ನಂತರ ಇನ್ನಷ್ಟು ದಾಳಿ ಮಾಡ್ತೇವೆ: ಐಎಸ್ಐಎಸ್]

ಬೆಂಗಳೂರು ಮೂಲದ ಇನ್ಫೋಸಿಸ್ ಸಂಸ್ಥೆ ಸೇರಿದ ಸಾಫ್ಟ್ ವೇರ್ ಇಂಜಿನಿಯರ್ ರಾಘವೇಂದ್ರ ಅವರು ಮೊದಲಿಗೆ ಪುಣೆಯಲ್ಲಿ ನಾಲ್ಕು ವರ್ಷ ಕಾರ್ಯನಿರ್ವಹಿಸಿದ್ದರು. ನಂತರ ಬ್ರುಸೆಲ್ಸ್ ಗೆ ಬಂದು ನಾಲ್ಕು ವರ್ಷವಾಗಿತ್ತು. ಕಳೆದ ತಿಂಗಳು ತಮ್ಮ ನವಜಾತ ಶಿಶುವನ್ನು ನೋಡಲು ಚೆನ್ನೈಗೆ ಬಂದು ಹೋಗಿದ್ದರು.ಗಣೇಶನ್ ಅವರು ಪತ್ನಿ, ಒಂದೂವರೆ ತಿಂಗಳ ಮಗು, ತಾಯಿ, ಸೋದರ ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Infosys employee Raghavendra Ganesh, who was missing after Brussels attacks, is confirmed killed in the terror strike. The minister for external affairs had said a few days back that the last call Ganesh had made was from the metro station in Brussels. He had called his mother last.
Please Wait while comments are loading...