Miss India Worldwide 2024: ಕಿರೀಟ ಮುಡಿಗೇರಿಸಿಕೊಂಡ ಧ್ರುವಿ ಪಟೇಲ್ ಯಾರು?
ಈ ಬಾರಿಯ ಮಿಸ್ ಇಂಡಿಯಾ ವರ್ಲ್ಡ್ ವೈಡ್-2024 (Miss India Worldwide) ಪ್ರಶಸ್ತಿ ಘೋಷಣೆಯಾಗಿದೆ. ಭಾರತೀಯ ಮೂಲದ ಧ್ರುವಿ ಪಟೇಲ್ ಈ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಅಮೇರಿಕಾದಲ್ಲಿ ನೆಲೆಸಿರುವ ಇವರು ಈ ಜಾಗತಿಕ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಇಂಡಿಯನ್ ಫೆಸ್ಟಿವಲ್ ಕಮಿಟಿಯು ಈ ಮಿಸ್ ಇಂಡಿಯಾ ವರ್ಲ್ಡ್ ವೈಡ್ ಸ್ಪರ್ಧೆಯನ್ನು ಪ್ರತಿ ವರ್ಷ ಆಯೋಜನೆ ಮಾಡುತ್ತದೆ. ಹೊರದೇಶಗಳಲ್ಲಿ ನೆಲೆಸಿರುವ ಭಾರತೀಯ ಪ್ರತಿಭೆಗಳನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ. ಅಮೇರಿಕಾದ ನ್ಯೂಜೆರ್ಸಿಯಲ್ಲಿ ಮಿಸ್ ಇಂಡಿಯಾ ವರ್ಲ್ಡ್ ವೈಡ್ ಕಾರ್ಯಕ್ರಮ ನಡೆಯಿತು. ವಿಜೇತರನ್ನಾಗಿ ಧ್ರುವಿ ಪಟೇಲ್ ಅವರ ಹೆಸರನ್ನು ಘೋಷಿಸಲಾಯಿತು.

ಧ್ರುವಿ ಪಟೇಲ್ ಅವರು ಗುಜರಾತ್ ಮೂಲದವರು. ಆದರೆ, ಸದ್ಯ ಅವರು ಅಮೇರಿಕಾದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಬಾಲಿವುಡ್‌ನಲ್ಲಿ ನಟಿಸಬೇಕು ಎನ್ನುವ ಇಂಗಿತವನ್ನೂ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಧ್ರುವಿ, ನನಗೆ ಇದು ಜಾಗತಿಕವಾಗಿ ಸಿಕ್ಕಿರುವ ಗೌರವ ಎಂದು ಭಾವಿಸಿದ್ದೇನೆ. ಈ ಮಿಸ್ ಇಂಡಿಯಾ ವರ್ಲ್ಡ್ ವೈಡ್ ಟೈಟಲ್ ಗೆದ್ದಿರುವುದು ತುಂಬಾ ಖುಷಿ ನೀಡಿದೆ. ನನ್ನ ಪ್ರಕಾರ ಈ ಪ್ರಶಸ್ತಿಯು ಮಿಸ್ ವರ್ಲ್ಡ್‌ಗೂ ಮೀರಿದ ಗೌರವ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಧ್ರುವಿ ಅವರಿಗೆ ಬಾಲಿವುಡ್ ನಟಿಯಾಗುವ ಹಾಗೂ UNICEF ರಾಯಭಾರಿಯಾಗುವ ಆಸೆಯಿದೆ ಎಂದು ಹೇಳಿದ್ದಾರೆ. ಧ್ರುವಿ ಅವರು ಕ್ವಿನ್ನಿಪಿಯಾಕ್ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಇನ್ಫರ್ಮೇಷನ್ ಸಿಸ್ಟಂ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅಲ್ಲದೆ ಧ್ರುವಿ ಅವರು ಇನ್‌ಸ್ಟಾಗ್ರಾಂನಲ್ಲೂ ಸಖತ್ ಆಕ್ಟಿವ್ ಇದ್ದು, ಈಗಾಗಲೇ ಹೆಚ್ಚು ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ಈ ಹಿಂದೆ ಕಳೆದ ವರ್ಷವೇ ಧ್ರುವಿ ಅವರು ಮಿಸ್ ಇಂಡಿಯಾ ನ್ಯೂ ಇಂಗ್ಲೆಂಡ್ ಎಂಬ ಬಿರುದನ್ನು ಸಹ ಪಡೆದಿದ್ದರು ಎಂದು ವರದಿಯಾಗಿದೆ.
ಮಿಸ್ ಇಂಡಿಯಾ ವರ್ಲ್ಡ್ ವೈಡ್ ರೇಸ್‌ನಲ್ಲಿ ಲಿಸಾ ಅಬ್ಡೋಲ್ಹಾಕ್ ಮೊದಲ ರನ್ನರ್ ಅಪ್ ಆದರು. ನೆದರ್ಲೆಂಡ್ಸ್‌ನ ಮಾಳವಿಕಾ ಶರ್ಮಾ ಅವರು ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು.

ಹಲವು ವಿಭಾಗಗಳಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿತ್ತು. ಶ್ರೀಮತಿ ವಿಭಾಗದಲ್ಲಿ ಸುಆನ್ ಮೌಟೆಟ್ ವಿಜೇತರಾದರು. ಸ್ನೇಹಾ ನಂಬಿಯಾರ್ ಮತ್ತು ಯುನೈಟೆಡ್ ಕಿಂಗ್‌ಡಮ್ (ಯುಕೆ) ಪವನ್‌ದೀಪ್ ಕೌರ್ ರನ್ನರ್ ಅಪ್ ಆದರು. ಹದಿಹರೆಯದ ವಿಭಾಗದಲ್ಲಿ ಗ್ವಾಡೆಲೋಪ್‌ನ ಸಿಯೆರಾ ಸುರೆಟ್ ಮಿಸ್ ಟೀನ್ ಇಂಡಿಯಾ ವರ್ಲ್ಡ್‌ವೈಡ್ ಕಿರೀಟವನ್ನು ಮುಡಿಗೇರಿಸಿಕೊಂಡರು. ನೆದರ್ಲೆಂಡ್ಸ್‌ನ ಶ್ರೇಯಾ ಸಿಂಗ್ ಮತ್ತು ಶ್ರಧಾ ಟೆಡ್ಜೋ ಮೊದಲ ಮತ್ತು ಎರಡನೇ ರನ್ನರ್ ಅಪ್ ಆದರು.












Click it and Unblock the Notifications