Meta Threads: 'ಮೆಟಾ'ದಿಂದ ಟ್ವಿಟ್ಟರ್ ಪ್ರತಿ ಸ್ಪರ್ಧಿ 'ಥ್ರೆಡ್' ಬಿಡುಗಡೆ: 2ಗಂಟೆಯಲ್ಲಿ ಮಿಲಿಯನ್ ಮಂದಿ ಲಾಗಿನ, ಏನಿದು? ನೋಡಿ
ಬೆಂಗಳೂರು, ಜಲೈ 06: ಫೇಸ್‌ಬುಕ್ ಮಾಲೀಕತ್ವದ ಮೆಟಾ ಕಂಪನಿಯು ಬಧವಾರ ರಾತ್ರಿ ಭಾರತವನ್ನೂ ಒಳಗೊಂಡಂತೆ ವಿವಿಧ ದೇಶಗಳಲ್ಲಿ 'ಥ್ರೆಡ್' ಎಂಬ ಮೈಕ್ರೋಬ್ಲಾಗಿಂಗ್ ಮೊಬೈಲ್ ಆಪ್ ಅನ್ನು ಜಾಗತಿಕವಾಗಿ ಬಿಡುಗಡೆ ಗೊಳಿಸಿದೆ.
ಈ ಹೊಸ ಅಪ್ಲಿಕೇಶನ್ ಆಂಡ್ರೈಡ್ ಮೊಬೈಲ್ ಬಳಕೆದಾರರು (Android) ಗೂಗಲ್ ಪ್ಲೇಸ್ಟೋರ್‌ನಲ್ಲಿ ಮತ್ತು ಆಪಲ್ ಐಫೋನ್ ಬಳಕೆದಾರರು ಆಪಲ್ ಸ್ಟೋರ್‌ನಿಂದ ಉಚಿತವಾಗಿ ಡೌನ್‌ಲೋಡ್ ಮಾಡಿಕೊಂಡು ಲಾಗಿನ್ ಆಗಿ ಬಳಕೆ ಮಾಡಬಹುದಾಗಿದೆ. ಲಾಗಿನ್ ವೇಳೆ ನೀವು ಇನ್ಸ್ಟಾಗ್ರಾಮ್ ಸಕ್ರಿಯವಾಗಿದ್ದ, ಅದರದ್ದ ಹೆಸರು, ಫ್ರೊಫೈಲ್ ಕೇಳುತ್ತದೆ. ಅದಕ್ಕೆ ಸಮ್ಮತಿ ಸೂಚಿಸಿ ಲಾಗಿನ್ ಆಗಬಹುದು.

ಮೆಟಾ ಕಂಪನಿಯು ಈ 'ಥ್ರೆಡ್' ಮೊಬೈಲ್ ಅಪ್ಲಿಕೇಶನ್ ಅನ್ನು ಇನ್ಸ್ಟಾಗ್ರಾಮ್ (Instagram) ಜೊತೆ ಸಹಭಾಗಿತ್ವ ಹೊಂದಿದೆ ಎನ್ನಲಾಗಿದೆ. ಈ ಥ್ರೆಡ್ ಆಪ್ ಪ್ರತಿಸ್ಪರ್ಧಿ ಟ್ವಿಟ್ಟರ್‌ಗೆ ನೇತ ಪೈಪೋಟಿ ಒಡ್ಡಲಿದೆ. ಈಗಾಗಲೇ ಮೈಕ್ರೋ ಬ್ಲಾಗಿಂಗ್ ಆಪ್ಲಿಕೇಷನ್ ಆಗಿರುವ ಟ್ವಿಟ್ಟರ್ ನಂತೆಯೆ ಇದು ಕಾರ್ಯ ನಿರ್ವಹಿಸುತ್ತದೆ. ಅದರ ನಕಲು ಆಪ್ ನಂತೆ ಇದ್ದು, ಸಾಮಾಜಿಕ ಜಾಲತಾಣಗಳಲ್ಲಿ ಥ್ರೆಡ್ ಸ್ವತಂತ್ರ ವೇದಿಕೆ ಆಗಿದೆ.
ಬಳಕೆದಾರರು Twitter ಥ್ರೆಡ್‌ಗಳಂತೆಯೇ ಪ್ರೇರಿತವಾಗಿ ಇಷ್ಟದ ಪೋಸ್ಟ್‌ಗಳ ಸರಣಿಯನ್ನು 'ಥ್ರೆಡ್' ನಲ್ಲೂ ಪ್ರಕಟಿಸಬಹುದು. ಮಟಾ ಕಂಪನಿಯು Instagram ಗ್ರಾಹಕರನ್ನು ಸೆಳೆಯಲು ಅವರ ಸಹಯೋಗದಲ್ಲಿ ಹೆಚ್ಚು ಜನರನ್ನು ತಲುಪಲು ಗುರಿ ಇಟ್ಟುಕೊಂಡಿದೆ. ಈ ಆಪ್ ನಲ್ಲೂ ಟ್ವೀಟ್ಟರ್‌ನಂತೆ ನೀಲಿ ಟಿಕ್ ಸಹ ಬರಲಿದೆ.
2 ಗಂಟೆಗಳಲ್ಲಿ 2 ಮಿಲಿಯನ್ ಡೌನ್‌ಲೋಡ್
ಭಾರತ, ಅಮೆರಿಕ, ಬ್ರಿಟನ್, ಕೆನಡಾ, ಆಸ್ಟ್ರೇಲಿಯಾ, ಜಪಾನ್ ಸೇರಿದಂತೆ ಇನ್ನಿತರ ಒಟ್ಟು 100 ದೇಶಗಳಲ್ಲಿ ಜಾಗತಿಕವಾಗಿ ಏಕಕಾಲಕ್ಕೆ ಈ ಥ್ರೇಡ್ ಆಪ್ ಅನ್ನು ಮೆಟಾ ಕಂಪನಿ ಬಿಡುಗಡೆ ಮಾಡಿದೆ. ಬಿಡುಗಡೆಯಾದ 2 ಗಂಟೆಗಳಲ್ಲಿ 2 ಮಿಲಿಯನ್ (20 ಲಕ್ಷ) ಜನ ಈ ಆಪ್ ಡೌನ್‌ಲೋಡ್ ಮಾಡಿಕೊಂಡಿ ಸೈನ್ ಆಪ್ ಆಗಿದ್ದಾರೆ.

'ಥ್ರೆಡ್' ಸೈನ್ ಅಪ್ ಹೇಗೆ?
ಮೆಟಾದ 'ಥ್ರೆಡ್' ಬಳಕೆ ಮಾಡಲು ಇಚ್ಚಿಸುವವರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ನೀಮ್ಮ Instagram ID ಅನ್ನು ಬಳಸಿ ಈ ಥ್ರೆಡ್‌ನಲ್ಲಿ ಲಾಗ್ ಇನ್ ಆಗಬಹುದಾಗಿದೆ. ನೀವು ಈಗಾಗಲೇ Instagram ನಲ್ಲಿ ಲಾಗ್ ಇನ್ ಆಗಿದ್ದರೆ, ಥ್ರೆಡ್‌ಗಳು ಅನುಮತಿಯನ್ನು ಮಾತ್ರ ಕೇಳುತ್ತವೆ, ಅಂದರೆ ನೀವು ಮತ್ತೆ ಲಾಗಿನ್ ವಿವರಗಳನ್ನು ಸೇರಿಸುವ ಅಗತ್ಯವಿಲ್ಲ ಎಂದು ಮೆಟಾ ತಿಳಿಸಿದೆ.
ಥ್ರೆಡ್ಗಳನ್ನು ಹೇಗೆ ಬಳಸುವುದು
ಇದು ಸಹ ಟ್ವಿಟ್ಟರ್ ಅನ್ನು ಹೋಲುವ ಮೈಕ್ರೋಬ್ಲಾಗಿಂಗ್ ಆಗಿದ್ದು, ಮಲ್ಟಿಮೀಡಿಯಾ ವೇದಿಕೆ ಎಂದರೆ ತಪ್ಪಾಗಲಾರದು. ಪ್ರತಿ ಪೋಸ್ಟ್ 500 ಅಕ್ಷರಗಳವರೆಗೆ ಉದ್ದವಾಗಿ ಬರೆಯಬಹುದು. ಜೊತೆಗೆ ಲಿಂಕ್‌ಗಳು, ಫೋಟೋಗಳು (ಪ್ರತಿ ಪೋಸ್ಟ್‌ಗೆ ಹತ್ತು) ಶೇರ್ ಮಾಡಿಕೊಲ್ಳಬಹುದು. 5 ನಿಮಿಷಗಳ ಉದ್ದದ ವೀಡಿಯೊಗಳನ್ನು ಇಲ್ಲಿ ಹಂಚಿಕೊಳ್ಳಬಹುದು.
ಸಂಭಾಷಣೆ/ವಿಷಯವನ್ನು ಸರಣಿಯಾಗಿ ಇಲ್ಲಿ ಬರೆಯಲು ಅವಕಾಶ ಇದರಲ್ಲಿದೆ.
ಥ್ರೆಡ್ ಪೋಸ್ಟ್‌ಗೆ ಕಾಮೆಂಟ್‌ಗಳಿಗೆ ಪ್ರತ್ಯುತ್ತರ ನೀಡಬಹುದು, ಅವುಗಳನ್ನು ನಿಯಂತ್ರಿಸಲು ಅವಕಾಶ ನೀಡಲಾಗಿದೆ. ಮೂರು-ಡಾಟ್ ಮೆನು ಆಯ್ಕೆ ಮೂಲಕ ನೀವು ಥ್ರೆಡ್‌ಗಳಲ್ಲಿ ಪ್ರೊಫೈಲ್ ಬ್ಲಾಕ್ ಮಾಡಬಹುದು, ಅನುಮತಿ, ನಿರಾಕರಣೆ ನಿರ್ಬಂಧಅನ್ನು ಅನುಸರಿಸುವುದನ್ನು ರದ್ದುಗೊಳಿಸಬಹುದು, ನಿರ್ಬಂಧಿಸಬಹುದು, (Hide, Block, Report) ಆಯ್ಕೆಗೆ ಅವಕಾಶ ನೀಡಲಾಗಿದೆ. ಸ್ವಯಂ ಆಗಿ 'ಥ್ರೆಡ್' ನಿಯಂತ್ರಿಸಬಹುದಾಗಿದೆ.
ಡೌನ್‌ಲೋಡ್ ಮಾಡಿಕೊಂಡ ಗ್ರಾಹಕರು,ಫೇಸ್‌ಬುಕ್ ಒಡೆತನದ ಮೆಟಾ ಮಾಲೀಕ ಮಾರ್ಕ್ ಜುಕರ್ ಬರ್ಗ್ ಅವರ ಸದರಿ 'ಥ್ರೆಡ್' ಎಲಾನ್ ಮಸ್ಕ್ ಒಡೆತನದ ಟ್ವಿಟರ್ ಗೆ ಹೋಲುವಂತಿದೆ. ಹಳೆಯ ಟ್ವಿಟ್ಟರ್ ಆವೃತ್ತಿ ಹೋಲುವಂತಿದೆ ಎಂದು ಬಳಕೆದಾರರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ.












Click it and Unblock the Notifications