Power Cut: ವಿದ್ಯುತ್ ಕಡಿತದಿಂದ ದಿಕ್ಕೆಟ್ಟ ಯೂರೋಪ್; ವಿಮಾನ ನಿಲ್ದಾಣ ಬಂದ್, ರೈಲು ಸಂಚಾರ ಸ್ಥಗಿತ

ಸೋಮವಾರ ಸ್ಪೇನ್, ಪೋರ್ಚುಗಲ್ ಮತ್ತು ದಕ್ಷಿಣ ಫ್ರಾನ್ಸ್‌ನ ಕೆಲವು ಭಾಗಗಳಲ್ಲಿ ವಿದ್ಯುತ್ ಕಡಿತದಿಂದ ಭಾರಿ ಸಮಸ್ಯೆಯಾಗಿದೆ. ವಿದ್ಯುತ್ ಕಡಿತದಿಂದ ಲಕ್ಷಾಂತರ ಜನ ಸಮಸ್ಯೆಗೆ ಸಿಲುಕಿದ್ದಾರೆ. ವಿದ್ಯುತ್ ಕಡಿತಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ವಿದ್ಯುತ್ ಮರುಪೂರೈಕೆ ಮಾಡಲು ಕನಿಷ್ಠ 6-10 ಗಂಟೆ ಸಮಯ ಬೇಕಾಗಿದ್ದು ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆ ಇದೆ.

ಸ್ಪೇನ್‌ನ ಗ್ರಿಡ್ ಆಪರೇಟರ್ ರೆಡ್ ಎಲೆಕ್ಟ್ರಿಕಾ ಡಿ ಎಸ್ಪಾನಾ (REE) ಕಾರ್ಯಾಚರಣೆಯ ಮುಖ್ಯಸ್ಥ ಎಡ್ವರ್ಡೊ ಪ್ರಿಟೊ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸ್ಪ್ಯಾನಿಷ್ ವಿದ್ಯುತ್ ಗ್ರಿಡ್‌ಗೆ ವಿದ್ಯುತ್ ಮರುಪೂರೈಕೆ ಮಾಡಲು ಇನ್ನೂ 6 ರಿಂದ 10 ಗಂಟೆ ಸಮಯ ಬೇಕಾಗುತ್ತದೆ ಎಂದು ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ.

mega power outage hits spain france portugal

ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಿದ ಪರಿಣಾಮ, ಸಂಚಾರ ದೀಪಗಳು, ವಿಮಾನ ನಿಲ್ದಾಣಗಳು ಮತ್ತು ಮ್ಯಾಡ್ರಿಡ್ ಅಂಡರ್ ಪಾಸ್‌ಗಳು ಸ್ಥಗಿತವಾಗಿವೆ. ವಿದ್ಯುತ್ ಮರುಪೂರೈಕೆ ಮಾಡಲು ಸ್ಪ್ಯಾನಿಷ್ ಗ್ರಿಡ್ ಆಪರೇಟರ್ ರೆಡ್ ಎಲೆಕ್ಟ್ರಿಕಾ ಇಂಧನ ಕಂಪನಿಗಳ ಜೊತೆ ಕೆಲಸ ಮಾಡುತ್ತಿದೆ.

ಮ್ಯಾಡ್ರಿಡ್, ಬಾರ್ಸಿಲೋನಾ ಮತ್ತು ಲಿಸ್ಬನ್‌ನ ಕೆಲವು ಭಾಗಗಳಲ್ಲಿ ಸಾರ್ವಜನಿಕ ಸಾರಿಗೆ, ಸಂಚಾರ ದೀಪಗಳು ಮತ್ತು ಫೋನ್ ಸೇವೆಗಳು ಸ್ಥಗಿತಗೊಂಡಿವೆ, ರೈಲುಗಳ ಸಂಚಾರ ಕೂಡ ಬಂದ್ ಆಗಿದೆ. ವಿದ್ಯುತ್ ಕಡಿತಕ್ಕೆ ಕಾರಣಗಳನ್ನು ತಿಳಿಯಲು ಸರ್ಕಾರ, ರೆಡ್ ಎಲೆಕ್ಟ್ರಿಕಾ ತನಿಖೆ ಮಾಡುತ್ತಿವೆ.

ಫ್ರಾನ್ಸ್‌ನಲ್ಲಿ, ಗ್ರಿಡ್ ಆಪರೇಟರ್ ರೀಸೋ ಡಿ ಟ್ರಾನ್ಸ್‌ಪೋರ್ಟ್ ಡಿ'ಎಲೆಕ್ಟ್ರಿಸಿಟ್ (RTE) ರಾಯಿಟರ್ಸ್‌ಗೆ ಅಲ್ಪಾವಧಿಯ ವಿದ್ಯುತ್ ಕಡಿತವಾಗಿದೆ ಎಂದು ಮಾಹಿತಿ ನೀಡಿತು, ಆದರೆ ನಂತರ ವಿದ್ಯುತ್ ಮರು ಪೂರೈಕೆ ಮಾಡಿದ್ದು ಘಟನೆ ಬಗ್ಗೆ ತನಿಖೆ ನಡೆಯುತ್ತಿದೆ.

ಸ್ಪೇನ್‌ನಲ್ಲಿ ಜನ ಜೀವನ ಅಸ್ತವ್ಯಸ್ಥ

ಸ್ಪೇನ್‌ನಲ್ಲಿ ವಿದ್ಯುತ್ ಕಡಿತದಿಂದಾಗಿ ದೇಶಾದ್ಯಂತ ರೈಲು ಸಂಚಾರ ಸ್ಥಗಿತಗೊಂಡಿದೆ ಎಂದು ಸ್ಪೇನ್ ರೈಲ್ವೆ ಆಪರೇಟರ್ ತಿಳಿಸಿರುವುದಾಗಿ ಎಎಫ್‌ಪಿ ವರದಿ ಮಾಡಿದೆ. ಸ್ಪೇನ್ ರಾಜಧಾನಿಯಲ್ಲಿ ವಿದ್ಯುತ್ ಕಡಿತದ ಬಳಿಕ ಸೋಮವಾರ ಮ್ಯಾಡ್ರಿಡ್ ಓಪನ್ ಪಂದ್ಯಗಳನ್ನು ರದ್ದು ಮಾಡಲಾಗಿದೆ.

ವಿದ್ಯುತ್ ಪೂರೈಕೆ ಸ್ಥಗಿತವಾಗಿದ್ದರಿಂದ ಫೋನ್ ನೆಟವರ್ಕ್‌ ಮೇಲೂ ಪರಿಣಾಮ ಬೀರಿತ್ತು. ಅನೇಕ ಮಂದಿ ಸುದ್ದಿ ತಿಳಿಯಲು ರೇಡಿಯೋಗಳ ಮೊರೆ ಹೋಗಿದ್ದಾರೆ. ದೇಶದ ಪರಿಸ್ಥಿತಿಯ ಕುರಿತು ಸುದ್ದಿ ನವೀಕರಣಗಳಿಗಾಗಿ ರೇಡಿಯೊದ ಕಡೆಗೆ ತಿರುಗಿದರು.

ಹಲವಾರು ಟ್ರಾಫಿಕ್ ದೀಪಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದವು, ಅಪಘಾತಗಳನ್ನು ತಪ್ಪಿಸಲು ವಾಹನಗಳು ನಿಧಾನವಾಗಿ ಚಲಿಸಿದವು. ಮೆಟ್ರೋಗಳು ಮತ್ತು ರೈಲುಗಳ ಸಂಚಾರ ಬಂದ್ ಆಗಿತ್ತು. ಸ್ಪೇನ್‌ನ ರಾಷ್ಟ್ರೀಯ ರಸ್ತೆ ಪ್ರಾಧಿಕಾರ ಡಿಜಿಟಿ ಚಾಲಕರು ರಸ್ತೆಗಳನ್ನು ಬಳಸದಂತೆ ಮನವಿ ಮಾಡಿದರು.

ಸ್ಪ್ಯಾನಿಷ್ ಪ್ರಧಾನಿ ಪೆಡ್ರೊ ಸ್ಯಾಂಚೆಜ್ ಅವರು ತುರ್ತು ಪರಿಸ್ಥಿತಿಯ ಕುರಿತು ಕ್ಷಣ ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ಸ್ಪೇನ್‌ನ ರೆಡ್ ಎಲೆಕ್ಟ್ರಿಕಾ ದೇಶದ ಉತ್ತರ ಮತ್ತು ದಕ್ಷಿಣ ಪ್ರದೇಶಗಳಲ್ಲಿ ವಿದ್ಯುತ್ ಮರುಪೂರೈಕೆ ಮಾಡಿದ್ದರೂ ಸಮಸ್ಯೆ ಸಂಪೂರ್ಣವಾಗಿ ಬಗೆಹರಿದಿಲ್ಲ ಎನ್ನಲಾಗಿದೆ.

ಪೋರ್ಚುಗಲ್‌ನಲ್ಲಿ ವಿದ್ಯುತ್ ಕಡಿತ

ಸುಮಾರು 10.6 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ಪೋರ್ಚುಗಲ್‌ನಲ್ಲಿ, ರಾಜಧಾನಿ ಲಿಸ್ಬನ್, ಅದರ ಸುತ್ತಮುತ್ತಲಿನ ಪ್ರದೇಶಗಳು ಮತ್ತು ದೇಶದ ಉತ್ತರ ಮತ್ತು ದಕ್ಷಿಣ ಎರಡೂ ಪ್ರದೇಶಗಳ ಮೇಲೆ ವ್ಯಾಪಕ ಪರಿಣಾಮ ಬೀರಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+