ರಷ್ಯಾದಲ್ಲಿ ತನ್ನ ಎಲ್ಲಾ 850 ಅಂಗಡಿಗಳನ್ನು ಮುಚ್ಚಿದ ಮೆಕ್‌ಡೊನಾಲ್ಡ್

ಕೀವ್, ಮಾರ್ಚ್ 8: ಉಕ್ರೇನ್‌ನ ಮೇಲೆ ಕ್ರೌರ್ಯ ತೋರುತ್ತಿರುವ ರಷ್ಯಾದ ವಿರುದ್ಧ ಹಲವು ರಾಷ್ಟ್ರಗಳು ಈಗಾಗಲೇ ಆರ್ಥಿಕ ನಿರ್ಬಂಧಗಳನ್ನು ಹೇರುತ್ತಿವೆ. ಇದರ ಮಧ್ಯೆ ರಷ್ಯಾದಲ್ಲಿರುವ ತನ್ನ ಎಲ್ಲಾ 850 ರೆಸ್ಟೋರೆಂಟ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚುವುದಾಗಿ ಮೆಕ್‌ಡೊನಾಲ್ಡ್ ಮಂಗಳವಾರ ಹೇಳಿದೆ.

ಬರ್ಗರ್ ದೈತ್ಯ ಕಂಪನಿಯು ರಷ್ಯಾದಲ್ಲಿ ತನ್ನ 62,000 ಉದ್ಯೋಗಿಗಳಿಗೆ "ನಮ್ಮ ಮೆಕ್‌ಡೊನಾಲ್ಡ್ಸ್ ಬ್ರ್ಯಾಂಡ್‌ನ ಕಡೆಯಿಂದ ವೇತನ ಪಾವತಿಯನ್ನು ಮಾಡಲಾಗುತ್ತದೆ ಎಂದು ಹೇಳಿದೆ. ತನ್ನ ಉದ್ಯೋಗಿಗಳಿಗೆ ಬರೆದ ಪತ್ರದಲ್ಲಿ, ಮೆಕ್‌ಡೊನಾಲ್ಡ್ಸ್ ಅಧ್ಯಕ್ಷ ಮತ್ತು ಸಿಇಒ ಕ್ರಿಸ್ ಕೆಂಪ್‌ಕಿನ್ಸ್ಕಿ ಆ ಮಳಿಗೆಗಳನ್ನು ಸದ್ಯಕ್ಕೆ ಮುಚ್ಚುವುದು ಸರಿಯಾದ ನಿರ್ಧಾರೆ ಎಂದು ಹೇಳಿದ್ದಾರೆ.

McDonalds says temporarily closing all 850 restaurants in Russia

"ಉಕ್ರೇನ್‌ನಲ್ಲಿ ಅನಾವಶ್ಯಕವಾದ ಮನುಷ್ಯರನ್ನು ಸಂಕಷ್ಟಕ್ಕೆ ದೂಡುತ್ತಿರುವುದನನ್ನು ನಿರ್ಲಕ್ಷಿಸಲಾಗುವುದಿಲ್ಲ ಎನ್ನುವುದೇ ನಮ್ಮ ಮೌಲ್ಯಗಳಾಗಿವೆ," ಎಂದು ಕೆಂಪ್‌ಜಿನ್ಸ್ಕಿ ಹೇಳಿದರು. ಅಲ್ಲದೇ ಕಂಪನಿಯು ತನ್ನ ಮಳಿಗೆಗಳನ್ನು ಮತ್ತೆ ಯಾವಾಗ ತೆರೆಯುತ್ತದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದರು.

ಉಕ್ರೇನ್‌ನಲ್ಲಿ 100 ರೆಸ್ಟೋರೆಂಟ್‌ಗಳು ಬಂದ್:
ಮೆಕ್‌ಡೊನಾಲ್ಡ್ಸ್ ಉಕ್ರೇನ್‌ನಲ್ಲಿ 100 ರೆಸ್ಟೋರೆಂಟ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಿದೆ. ಅದಾಗ್ಯೂ, ಸಂಸ್ಥೆಯು ತನ್ನ ಉದ್ಯೋಗಿಗಳಿಗೆ ವೇತನ ಪಾವತಿಸುವುದನ್ನು ಮುಂದುವರೆಸಿದೆ.
ಮೆಕ್‌ಡೊನಾಲ್ಡ್ಸ್‌ ಮುಚ್ಚುವಿಕೆಯಿಂದಾಗಿ ದೊಡ್ಡ ಆರ್ಥಿಕ ಹೊಡೆತ ಬೀಳಬಹುದು. ಇತ್ತೀಚಿನ ನಿಯಂತ್ರಕ ಫೈಲಿಂಗ್‌ನಲ್ಲಿ, ಚಿಕಾಗೋ ಮೂಲದ ಕಂಪನಿಯು ರಷ್ಯಾ ಮತ್ತು ಉಕ್ರೇನ್‌ನಲ್ಲಿರುವ ತನ್ನ ರೆಸ್ಟೋರೆಂಟ್‌ಗಳು ತನ್ನ ವಾರ್ಷಿಕ ಆದಾಯದ ಶೇ.9ರಷ್ಟು ಅಥವಾ ಸುಮಾರು $2 ಶತಕೋಟಿ ಕೊಡುಗೆ ಆಗಿ ನೀಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+