Afghanistan Earthquake: ಅಫ್ಘಾನಿಸ್ತಾನದಲ್ಲಿ ಭಾರಿ ಭೂಕಂಪ: ಉತ್ತರ ಭಾರತದಲ್ಲೂ ಭೂಕಂಪಿಸಿದ ಅನುಭವ

ಪಾಕಿಸ್ತಾನದ ಅಫ್ಘಾನಿಸ್ತಾನದಲ್ಲಿ ಭಾರಿ ಭೂಕಂಪವಾಗಿದ್ದು, ಉತ್ತರ ಭಾರತದಲ್ಲಿ ಭೂಕಂಪಿಸಿದ ಅನುಭವವಾಗಿದೆ.

ಅಫ್ಘಾನಿಸ್ತಾನದಲ್ಲಿ ಇಂದು (ಮಾರ್ಚ್ 21) ಭಾರಿ ಭೂಕಂಪ ಸಂಭವಿಸಿದ್ದು ಉತ್ತರಭಾರತದಲ್ಲಿ ಪ್ರಬಲ ಭೂಕಂಪನದ ಅನುಭವವಾಗಿದೆ. ಭೂಮಿ ಕಂಪಿಸಿದಾಗ ಪಾಕಿಸ್ತಾನದ ಹಲವು ನಗರಗಳಲ್ಲಿ ಜನರು ಭಯಭೀತರಾಗಿದ್ದಾರೆ. ಅಫ್ಘಾನಿಸ್ತಾನ ಸೇರಿದಂತೆ ಹಲವು ನಗರಗಳಲ್ಲಿ ಭೂಕಂಪದ ಅನುಭವವಾಗಿದೆ.

ಅಫ್ಘಾನಿಸ್ತಾನದ ಹಿಂದೂ ಕುಶ್ ಪ್ರದೇಶದಲ್ಲಿ ಇಂದು 6.6 ತೀವ್ರತೆಯ ಭೂಕಂಪ ಸಂಭವಿಸಿದೆ. ಉತ್ತರ ಭಾರತ ಮತ್ತು ಪಾಕಿಸ್ತಾನದಲ್ಲೂ ಪ್ರಬಲ ಕಂಪನದ ಅನುಭವವಾಗಿದೆ. ಆದರೆ ಯಾವುದೇ ಸಾವು ನೋವಿನ ಬಗ್ಗೆ ಇನ್ನೂ ವರದಿಯಾಗಿಲ್ಲ.

ಮಾರ್ಚ್ 21 ರಂದು ಸರಿಸುಮಾರು ರಾತ್ರಿ 10.17 ಕ್ಕೆ ದೆಹಲಿ, ನೋಯ್ಡಾ, ಗುರುಗ್ರಾಮ್ ಮತ್ತು ಇತರ ಹಲವಾರು ಹತ್ತಿರದ ಪ್ರದೇಶಗಳ ನಿವಾಸಿಗಳು ಭಯಾನಕ ಕಂಪನವನ್ನು ಅನುಭವಿಸಿದರು. ವರದಿಗಳ ಪ್ರಕಾರ, ತುರ್ಕಮೆನಿಸ್ತಾನ್, ಭಾರತ, ಕಜಕಿಸ್ತಾನ್, ಪಾಕಿಸ್ತಾನ, ತಜಕಿಸ್ತಾನ್, ಉಜ್ಬೇಕಿಸ್ತಾನ್, ಚೀನಾ, ಅಫ್ಘಾನಿಸ್ತಾನ್ ಮತ್ತು ಕಿರ್ಗಿಸ್ತಾನ್‌ನಲ್ಲಿ ಸಂಭವಿಸಿದ 6.8 ರಿಕ್ಟರ್ ಭೂಕಂಪನವು ಅಫ್ಘಾನಿಸ್ತಾನದಲ್ಲಿಯೂ ಸಂಭವಿಸಿದೆ.

ಭಾರತದಲ್ಲಿ, ಪಂಜಾಬ್, ಹಿಮಾಚಲ, ಹರಿಯಾಣ, ಉತ್ತರಾಖಂಡ ಮತ್ತು ರಾಜಸ್ಥಾನದಲ್ಲೂ ಕಂಪನದ ಅನುಭವಾಗಿದೆ. ದೆಹಲಿ, ಗುರುಗ್ರಾಮ್, ನೋಯ್ಡಾ, ಗಾಜಿಯಾಬಾದ್ ಮತ್ತು ಜಲಂಧರ್‌ನ ನಾಗರಿಕರು ಹಲವು ಪ್ರದೇಶಗಳಲ್ಲಿ 10 ಸೆಕೆಂಡ್‌ಗಳಿಗೂ ಹೆಚ್ಚು ಕಾಲ 'ದೀರ್ಘ' ನಡುಕವನ್ನು ಅನುಭವಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಭಾರತದ ವಿವಿಧ ಭಾಗಗಳಲ್ಲಿ ದೀರ್ಘವಾದ ನಡುಕವನ್ನು ಅನುಭವಿಸಿದ ಅನೇಕ ಜನರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊಗಳನ್ನು ಹಂಚಿಕೊಂಡಿದ್ದಾರೆ.

Massive Earthquake in Afghanistan: Experience of Earthquake in North India

ಜನವರಿಯಲ್ಲಿ ಪಾಕಿಸ್ತಾನದಲ್ಲಿ ಭೂಕಂಪ

ಪಾಕಿಸ್ತಾನದಲ್ಲಿ ಜನವರಿಯಲ್ಲಿ 4.1 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತ್ತು. ರಾಜಧಾನಿ ಇಸ್ಲಾಮಾಬಾದ್ ಮತ್ತು ಪಂಜಾಬ್ ಪ್ರಾಂತ್ಯದಲ್ಲಿ ಈ ಭೂಕಂಪ ಸಂಭವಿಸಿತ್ತು ಎಂದು ಪಾಕಿಸ್ತಾನದ ಹವಾಮಾನ ಇಲಾಖೆ ತಿಳಿಸಿದೆ. ಭೂಕಂಪದ ಕೇಂದ್ರ ಬಿಂದು ತಜಕಿಸ್ತಾನದಲ್ಲಿದ್ದು, 150 ಕಿ.ಮೀ ಆಳವಿತ್ತು.

ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಸೆಂಟರ್ (ಎನ್‌ಎಸ್‌ಎಂಸಿ) ಪ್ರಕಾರ, ಇದುವರೆಗೆ ಯಾವುದೇ ಜೀವ ಅಥವಾ ಆಸ್ತಿ ನಷ್ಟದ ಸುದ್ದಿ ಇಲ್ಲ. ಇಸ್ಲಾಮಾಬಾದ್‌ನ ಪತ್ರಕರ್ತರೊಬ್ಬರು ಟ್ವಿಟರ್‌ನಲ್ಲಿ ಅಫ್ಘಾನಿಸ್ತಾನದಲ್ಲಿ ಭೂಕಂಪದ ತೀವ್ರ ಕಂಪನವನ್ನು ಅನುಭವಿಸಿದೆ ಎಂದು ಹೇಳಿದ್ದಾರೆ.

2022ರಲ್ಲಿ ಪಾಕಿಸ್ತಾನದಲ್ಲಿ ಭೂಕಂಪನ
ಅಫ್ಘಾನಿಸ್ತಾನದಲ್ಲಿ ಕಳೆದ ವರ್ಷ ಮಾರ್ಚ್‌ನಲ್ಲಿ ಸಂಭವಿಸಿದ ಭಯಾನಕ ಭೂಕಂಪನದಲ್ಲಿ ಕನಿಷ್ಠ 155 ಮಂದಿ ಮೃತಪಟ್ಟಿದ್ದರು. ದೇಶದ ಪೂರ್ವ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 6.1ರ ತೀವ್ರತೆಯಲ್ಲಿ ಭೂಮಿ ಕಂಪಿಸಿತ್ತು.

ಪಾಕ್ಟಿಕಾ ಪ್ರಾಂತ್ಯದಲ್ಲಿ ಅತಿ ಹೆಚ್ಚು ಸಾವು-ನೋವುಗಳು ಸಂಭವಿಸಿದ್ದವು. ಈ ಭಾಗದಲ್ಲಿ ಕನಿಷ್ಠ 100 ಮಂದಿ ಮೃತಪಟ್ಟಿದ್ದು, 250ಕ್ಕೂ ಹೆಚ್ಚು ಜನರಿಗೆ ಗಾಯಗೊಂಡಿದ್ದರು. 250ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು.

ಪೂರ್ವದ ಪ್ರಾಂತ್ಯಗಳಾದ ನಂಗರ್ಹಾರ್ ಮತ್ತು ಖೋಸ್ಟ್‌ಗಳಲ್ಲಿ ಕೂಡ ಅಪಾರ ಪ್ರಮಾಣದ ಸಾವು ನೋವುಗಳು ಸಂಭವಿಸಿದ್ದವು. ಆಗ್ನೇಯ ಭಾಗದ ನಗರ ಖೋಸ್ಟ್‌ನಿಂದ ಸುಮಾರು 44 ಕಿಮೀ ದೂರದಲ್ಲಿ ಹಾಗೂ 51 ಕಿಮೀ ಆಳದಲ್ಲಿ ಭೂಕಂಪನ ಉಂಟಾಗಿತ್ತು. ನಂಗರ್ಹಾರ್ ಪ್ರಾಂತ್ಯದಲ್ಲಿ ಐದು, ಖೋಸ್ಟ್‌ನಲ್ಲಿ 25 ಮಂದಿ ಬಲಿಯಾಗಿದ್ದರು. ಇದು ಎಷ್ಟು ಭಯಾನಕವಾಗಿತ್ತು ಅಂದರೆ ಅಪಾರ ಪ್ರಮಾಣದ ಕಟ್ಟಡಗಳು ಧರೆಗುರುಳಿದ್ದವು.

ಅಫ್ಘಾನಿಸ್ತಾನ, ಪಾಕಿಸ್ತಾನ ಮತ್ತು ಭಾರತದ ಭಾಗಗಳವರೆಗೆ ಸುಮಾರು 500 ಕಿಮೀ ಉದ್ದಕ್ಕೂ ಭೂಮಿ ಕಂಪಿಸಿದ ಅನುಭವವಾಗಿತ್ತು. ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್, ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗಳಲ್ಲಿ ಕೂಡ ಭೂಮಿ ನಡುಗಿದ ಅನುಭವವಾಗಿತ್ತು. ಪಾಕಿಸ್ತಾನದಲ್ಲಿ ಕೂಡ ತೀವ್ರತೆ ಜೋರಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+