300 ಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದಲ್ಲಿ ಇತ್ತು ಬೃಹತ್ ಸಾಗರ, ಮಾಯವಾಗಿದ್ದು ಹೇಗೆ? Planet Mars
ಮಂಗಳ ಗ್ರಹ ಮನುಷ್ಯರ ಪಾಲಿಗೆ ಮತ್ತೊಂದು ಮನೆ ಇದ್ದಂತೆ, ಅಲ್ಲದೆ ಈಗ ಭೂಮಿ ಮೇಲೆ ಇರುವ ಜೀವರಾಶಿ ಕೋಟ್ಯಂತರ ವರ್ಷಗಳ ಹಿಂದೆ ಮಂಗಳ ಗ್ರಹದ ಮೂಲದಿಂದಲೇ ಬಂದಿದ್ದು ಎನ್ನುವ ಬಗ್ಗೆ ಕೂಡ ಚರ್ಚೆ ಇದೆ. ಹೀಗಿದ್ದಾಗ ಜಗತ್ತಿನಾದ್ಯಂತ ಮಂಗಳ ಗ್ರಹದ ಬಗ್ಗೆ ದೊಡ್ಡ ಮಟ್ಟದ ಸಂಶೋಧನೆ ನಡೆಯುತ್ತಲೇ ಇದೆ. ಇದೇ ರೀತಿ ಮಂಗಳ ಗ್ರಹದ ಕಣಿವೆಗಳ ಕುರಿತು ಸಂಶೋಧನೆ ನಡೆಯುವ ವೇಳೆ ಸ್ಫೋಟಕ ಸತ್ಯವೊಂದು ವಿಜ್ಞಾನಿಗಳಿಗೆ ಗೊತ್ತಾಗಿದೆ. ಅಂಗಾರಕ ಎಂದು ಕರೆಯಲಾಗುವ ಮಂಗಳನ ನೆಲದಲ್ಲಿ ನೀರು ಇತ್ತು, ಅದು ಭೂಮಿಯಲ್ಲಿ ಇರುವಂತೆಯೇ ಎಂಬುದಕ್ಕೆ ಸಾಕ್ಷ್ಯ ಸಿಗುತ್ತಿದೆ.
ಹೌದು, ಮಂಗಳ ಗ್ರಹದ ಬಗ್ಗೆ ವಿಜ್ಞಾನಿಗಳು ತಮ್ಮ ಅಧ್ಯಯನ ಇನ್ನಷ್ಟು ತೀವ್ರಗೊಳಿಸಿದ್ದಾರೆ. ಇದೇ ಮಂಗಳ ಮುಂದೆ ಮನುಷ್ಯರ ಪಾಲಿಗೆ ಮನೆ ಆಗುವುದು ಗ್ಯಾರಂಟಿ ಎಂಬ ನಂಬಿಕೆ ಕೂಡ ಗಾಢವಾಗಿ ಇದೆ. ಅದರಲ್ಲೂ ಭೂಮಿ ಬಿಟ್ಟರೆ ಇಡೀ ಬ್ರಹ್ಮಾಂಡದಲ್ಲಿ ಇದುವರೆಗೂ ಮನುಷ್ಯರಿಗೆ ವಾಸ ಯೋಗ್ಯ ಮತ್ತು ಹತ್ತಿರದಲ್ಲೇ ಇರುವ ಏಕೈಕ ಗ್ರಹವಾಗಿ ಮಂಗಳ ಗ್ರಹವನ್ನು ಗುರುತಿಸಲಾಗುತ್ತದೆ. ಹೀಗಿದ್ದಾಗ ಮಂಗಳ ಗ್ರಹಕ್ಕೆ ಮನುಷ್ಯರು ಹೋಗುವಂತೆ ಆಗಬೇಕು. ಮಂಗಳ ಗ್ರಹದ ಮೇಲೆ ಹೋಗಿ ನೇರವಾಗಿ ಮನುಷ್ಯರು ಅಧ್ಯಯನ ನಡೆಸಲು ಸಾಧ್ಯವಾದರೆ, ಭವಿಷ್ಯದಲ್ಲಿ ಭೂಮಿಯ ರೀತಿ ಸೌಲಭ್ಯ ನಿರ್ಮಾಣ ಮಾಡಬಹುದು ಎಂಬ ನಂಬಿಕೆ ಇದೆ. ಹೀಗೆ ನಡೆಯುತ್ತಿರುವ ಅಧ್ಯಯನದ ಸಮಯದಲ್ಲೇ ಮಂಗಳ ಗ್ರಹದಲ್ಲಿ ಭಾರಿ ಪ್ರಮಾಣದ ನೀರು ಇತ್ತು ಎಂಬುದು ಗೊತ್ತಾಗಿದೆ.

300 ಕೋಟಿ ವರ್ಷಗಳ ಹಿಂದೆ ಸಾಗರ ಇತ್ತು!
ನಮ್ಮ ಅಧ್ಯಯನದಲ್ಲಿ ಮಂಗಳ ಗ್ರಹದ ಮೇಲೆ ಸಾಗರ ಇತ್ತು, ಅದರಲ್ಲೂ ಮಂಗಳನ ಉತ್ತರ ಭಾಗದಲ್ಲಿ ಬೃಹತ್ ಸಾಗರ 300 ಕೋಟಿ ವರ್ಷಗಳ ಹಿಂದೆ ಇತ್ತು ಎಂಬುದಕ್ಕೆ ಪುರಾವೆಗಳು ದೊರೆತಿವೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಬಗ್ಗೆ ಸ್ವಿಟ್ಜರ್ಲೆಂಡ್ ದೇಶದ ಬರ್ನ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಮತ್ತು ಸಂಶೋಧಕರು ಮಹತ್ವದ ಪುರಾವೆ ಹುಡುಕಿದ್ದಾರೆ. ಮಂಗಳ ಗ್ರಹದ ಅತಿದೊಡ್ಡ ಕಣಿವೆ ಎಂದು ಕರೆಯಲಾಗುವ ವ್ಯಾಲೆಸ್ ಮರಿನೆರಿಸ್ ಕುರಿತು ನಡೆಸಿದ ಅಧ್ಯಯನಗಳ ಸಮಯದಲ್ಲಿ ಆಳವಾದ ವಿಚಾರ ಗೊತ್ತಾಗಿದೆ.
ನೀರು ನಾಪತ್ತೆ ಆಗಿದ್ದು ಹೇಗೆ?
ಭಾರಿ ದೊಡ್ಡ ಪ್ರಮಾಣದಲ್ಲಿ ಮಂಗಳ ಗ್ರಹದಲ್ಲಿ ನೀರು ಇತ್ತು, ಅದರಲ್ಲೂ ಬೃಹತ್ ಸಾಗರ ಮಂಗಳ ಗ್ರಹದ ನೆಲದಲ್ಲಿ ಇತ್ತು. 300 ಕೋಟಿ ವರ್ಷಗಳ ಹಿಂದೆ ಭಾರಿ ಪ್ರಮಾಣದ ನೀರಿನಿಂದ ಕಂಗೊಳಿಸಿದ್ದ ಮಂಗಳ ಗ್ರಹ ನಂತರದಲ್ಲಿ ವಾತಾವರಣ ಬದಲಾವಣೆ ಪರಿಣಾಮ ಒಣಗಿ ಬರಡಾಗಿ ಹೋಗಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಆದರೆ ಹೀಗೆ ಮಂಗಳ ಗ್ರಹದ ಮೇಲೆ ದಿಢೀರ್ ನೀರು ನಾಪತ್ತೆ ಆಗಿ ಸಾಗರವೇ ಸಂಪೂರ್ಣ ಒಣಗಿ ಹೋಗಲು ಕಾರಣ ಏನು? ಎಂಬುದು ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಹೆಚ್ಚಿನ ಅಧ್ಯಯನಗಳು ನಡೆಯುತ್ತಿವೆ.
ವ್ಯಾಲೆಸ್ ಮರಿನೆರಿಸ್ ಕಣಿವೆಯಲ್ಲಿ ಇದೀಗ ನಡೆದ ಅಧ್ಯಯನದ ಪ್ರಕಾರ, ನದಿ ಅಥವಾ ಜಲಾನಯನ ಪ್ರದೇಶ ಇತ್ತು ಎಂಬುದು ದೃಢವಾಗಿದೆ. ನೀರು ಹರಿದ ಜಾಗಗಳು ಸುಮಾರು 3,750 ಮೀಟರ್ ಎತ್ತರ ಎಂದರೆ 12,303 ಅಡಿಗಳಷ್ಟು ಎತ್ತರದಲ್ಲಿ ಇವೆ ಎಂದು ಗುರುತಿಸಲಾಗಿದೆ. ಅಲ್ಲದೆ ನೀರು ಸುಮಾರು 1 ಕಿಲೋ ಮೀಟರ್ ಆಳದವರೆಗೂ ಹರಿದಾಡಿರುವ ಕುರುಹು ಪತ್ತೆಯಾಗಿದೆ. ಹೀಗೆ ಬರೋಬ್ಬರಿ 300 ಕೋಟಿ ವರ್ಷಗಳ ಹಿಂದೆ ಮಂಗಳ ಗ್ರಹದ ಇಡೀ ಉತ್ತರ ಗೋಳಾರ್ಧ ನೀರಿನ ಅಡಿಯಲ್ಲಿ ಮುಳುಗಿ ಹೋಗಿತ್ತು ಎಂಬುದರ ಬಗ್ಗೆ ಕೂಡ ಬರ್ನ್ ವಿಶ್ವವಿದ್ಯಾಲಯದ ಸಂಶೋಧಕರು ಪುರಾವೆ ಹುಡುಕಿದ್ದಾರೆ.
-
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Bengaluru: ಲಂಬೋರ್ಗಿನಿ ಪ್ರಕರಣ; ಕಾರೇ ರಿಜಿಸ್ಟರ್ ಆಗಿಲ್ಲ ಎಂದ RTO, ಸ್ಟಂಟ್ ಅಲ್ಲ ಬ್ರೇಕ್ ಸ್ಕಿಡ್ ಎಂದ ರಿಕ್ಕಿ ರೈ












Click it and Unblock the Notifications