ಉಗಾಂಡದಲ್ಲಿ ಭೂಕುಸಿತ ಮತ್ತು ಪ್ರವಾಹಕ್ಕೆ 34 ಮಂದಿ ಬಲಿ
ಕಂಪಲಾ(ಉಗಾಂಡ), ಅಕ್ಟೋಬರ್ 13: ಉಗಾಂಡದ ಕಂಪಲಾ ಎಂಬಲ್ಲಿ ಸುರಿದ ಭಾರೀ ಮಳೆ ಮತ್ತು ಭೂಕುಸಿತದಿಂದಾಗಿ ಇದುವರೆಗೆ ಸುಮಾರು 34 ಜನ ಮೃತರಾಗಿದ್ದಾರೆ.
ಭಾರೀ ಮಳೆಯಿಂದ ಪ್ರವಾಹ ಸ್ಥಿತಿ ಉದ್ಭವವಾಗಿದ್ದು, ಎಲ್ಲೆಲ್ಲೂ ಭೂಕುಸಿತ ಉಂಟಾಗುತ್ತಿದೆ. ಮಳೆ ನೀರಿನೊಂದಿಗೆ, ಮಣ್ಣೂ ತೊಳೆದುಕೊಂಡು ಹೋಗಿ ಮಣ್ಣಿನ ಪ್ರವಾಹ ಶುರುವಾಗಿದೆ. ಇದರಿಂದಾಗಿ ಇಲ್ಲಿ ಸುಮಾರು ಆರು ಹಳ್ಳಿಗಳು ಸಂಪೂರ್ಣ ಜಲಾವೃತವಾಗಿವೆ.

ಇಲ್ಲಿನ ಸ್ಥಳೀಯ ಮಾಧ್ಯಮವೊಂದು ನೀಡಿದ ಮಾಹಿತಿ ಪ್ರಕಾರ ಸಾವಿನ ಸಂಖ್ಯೆ 40 ಕ್ಕೂ ಹೆಚ್ಚಾಗಿದೆ. ಇಲ್ಲಿನ ಬುದುದಾ ಎಂಬ ಜಿಲ್ಲೆಯಲ್ಲಿ ನದಿಯೊಂದು ತುಂಬಿ ಹರಿದ ಪರಿಣಾಮ ಸಾಕಷ್ಟು ಮನೆಗಳಿಗೆ ನೀರು ನುಗ್ಗಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ತಲುಪಿಸಲಾಗಿದೆ.
ಮಳೆಗಾಲದಲ್ಲಿ ಪ್ರವಾಹ ಮತ್ತು ಭೂಕುಸಿತ ಉಂಟಾಗುವುದು ಉಗಾಂಡದಲ್ಲಿ ಸಾಮಾನ್ಯವೆನ್ನಿಸಿದೆ. 2010 ರಲ್ಲಿ ಸಂಭವಿಸಿದ ಮಣ್ಣಿನ ಕುಸಿತದಲ್ಲಿ ಸುಮಾರು 80 ಕ್ಕೂ ಹೆಚ್ಚು ಜನ ಮೃತರಾಗಿದ್ದರು.












Click it and Unblock the Notifications