ಇಂಡೋನೇಷಿಯಾ ಫೆರಿಯಲ್ಲಿ ಬೆಂಕಿ, 23 ಮಂದಿ ದಹನ

ಪ್ರಯಾಣಿಕರನ್ನು ಸಾಗಿಸುತ್ತಿದ್ದ ಲಾಂಚ್ ವೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಕನಿಷ್ಠ 23 ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಭವಿಸಿದೆ. 17 ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಜಕಾರ್ತಾ, ಜನವರಿ 01: ಪ್ರಯಾಣಿಕರನ್ನು ಸಾಗಿಸುತ್ತಿದ್ದ ಲಾಂಚ್ ವೊಂದಕ್ಕೆ ಬೆಂಕಿ ಬಿದ್ದ ಪರಿಣಾಮ ಕನಿಷ್ಠ 23 ಮಂದಿ ಸಾವನ್ನಪ್ಪಿರುವ ಘಟನೆ ಭಾನುವಾರ ಸಂಭವಿಸಿದೆ. 17 ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಜಕಾರ್ತಾದ ಬಂದರು ನಗರಿ ಮೌರಾ ಅಂಗ್ಕೆಯಿಂದ ತಿಡುಂಗ್ ಗೆ ತೆರಳುತ್ತಿದ್ದ ಫೆರಿ(Ferry)ಯಲ್ಲಿ ಸುಮಾರು 230ಕ್ಕೂ ಅಧಿಕ ಮಂದಿ ಇದ್ದರು.

Many Killed after ferry catches fire in Indonesia

ಕೆಪುಲಾನ್ ಸೆರಿಬು ದ್ವೀಪದ ಬಳಿ ಸಾಗುವ ಸಮಯದಲ್ಲಿ ಫೆರಿಯ ಅರ್ಧಭಾಗಕ್ಕೆ ಬೆಂಕಿ ತಗುಲಿತು. 22 ಜನರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸುವ ವ್ಯವಸ್ಥೆ ಮಾಡಲಾಯಿತು. 20ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು, 10 ಬೋಟುಗಳನ್ನು ಬಳಸಿ ಹುಡುಕಾಟ ನಡೆಸಲಾಗುತ್ತಿದೆ.

ಇಂಡೋನೇಷಿಯಾದಲ್ಲಿ ದೋಣಿ ದುರಂತಗಳು ಸಾಮಾನ್ಯವಾಗಿದ್ದು, ಸುರಕ್ಷಿತ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಪ್ರಯಾಣಿಕರು ದೂರಿದ್ದಾರೆ. ಫೆರಿಯ ಇಂಜಿನ್ ನಲ್ಲಿ ದೋಷ ಕಂಡಿದ್ದರಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ತಿಳಿದು ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+