ನ್ಯೂಯಾರ್ಕ್ ಸ್ಫೋಟ : 29 ಮಂದಿಗೆ ತೀವ್ರ ಗಾಯ

Posted By:
Subscribe to Oneindia Kannada

ನ್ಯೂಯಾರ್ಕ್, ಸೆ. 18: ನ್ಯೂಯಾರ್ಕಿನ ಚೆಲ್ಸಿಯಾ ನಗರದಲ್ಲಿ ಶನಿವಾರ ತಡರಾತ್ರಿ ನಡೆದ ಸ್ಫೋಟದ ಪರಿಣಾಮ 29 ಮಂದಿ ಸಾರ್ವಜನಿಕರು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಫೋಟದ ಬಗ್ಗೆ ಎನ್ ವೈ ಪಿಡಿ ತೀವ್ರ ತನಿಖೆ ನಡೆಸುತ್ತಿದೆ.

ಈ ಘಟನೆಗೆ ಏನು ಕಾರಣ? ಉಗ್ರ ಕೈವಾಡವಿದೆಯೆ? ಘಟನಾ ಸ್ಥಳದಲ್ಲಿ ಬೇರೆ ಸ್ಫೋಟಕಗಳಿವೆಯೆ? ಎಂಬುದರ ಬಗ್ಗೆ ತನಿಖೆ ನಡೆದಿದೆ.

29 injured in New York explosion

ಪ್ರೆಷರ್ ಕುಕ್ಕರ್ ಬಾಂಬ್ ಇಟ್ಟು ಸ್ಫೋಟಿಸಲು ಸಂಚು ರೂಪಿಸಿರುವ ಅನುಮಾನ ಕಂಡು ಬಂದಿದೆ. ಮೊದಲಿಗೆ ವೆಸ್ಟ್ 23 ಸ್ಟ್ರೀಟ್ ನಲ್ಲಿ ಸ್ಫೋಟದ ಸದ್ದು ಕೇಳಿ ಬಂದಿದೆ.

ಮತ್ತೊಂದು ಸ್ಫೋಟದ ಬಗ್ಗೆ ಸೂಚನೆ ಸಿಕ್ಕಿದೆ. ತನಿಖೆ ಮುಂದುವರೆದಿದೆ ಎಂದು ಮೇಯರ್ ಬಿಲ್ ಡಿ ಬ್ಲಾಸಿಯೋ ಹೇಳಿದ್ದಾರೆ.


ನ್ಯೂಜೆರ್ಸಿಯ ಕಸದ ತೊಟ್ಟಿಯಲ್ಲಿ ಪೈಪ್ ಬಾಂಬ್ ಗಳು ಪತ್ತೆಯಾದ ಬಳಿಕ ನ್ಯೂಯಾರ್ಕಿನ ಚೆಲ್ಸಿಯಾ ನಗರದ ರಸ್ತೆಯ ಬಳಿ ಸ್ಫೋಟ ಸಂಭವಿಸಿದೆ.

ಸೋಮವಾರ ವಿಶ್ವಸಂಸ್ಥೆಯ ಪ್ರಧಾನ ಸಭೆ ನಡೆಯಲಿದ್ದು, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಸೇರಿದಂತೆ ವಿಶ್ವದ 190ಕ್ಕೂ ಅಧಿಕ ನಾಯಕರು ಪಾಲ್ಗೊಳ್ಳಲಿದ್ದಾರೆ. ಈ ದುರ್ಘಟನೆ ನಂತರ ಅಮೆರಿಕದ ಭದ್ರತಾ ಪಡೆ ಮುಖ್ಯಸ್ಥರು ತುರ್ತು ಸಭೆ ನಡೆಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Twenty-nine persons were injured in an explosion in New York city on Saturday night, the incident the mayor said was not linked to terrorism but appeared to have been an "intentional act".
Please Wait while comments are loading...