ಶುರುವಾಗಬೇಕಿದ್ದ ಸ್ಪೇನ್ ಪ್ರೇಮಕಥೆಗೆ ಪರ್ವತವೇ ವಿಲನ್
ನವದೆಹಲಿ, ಜ. 30: ಆಕೆಯ ಸೌಂದರ್ಯಕ್ಕೆ ಆತ ಮನಸೋತಿದ್ದ. ತನ್ನ ಪ್ರೀತಿಯನ್ನು ವ್ಯಕ್ತಪಡಿಸಲು ಆಕೆಯನ್ನು ಪರ್ವತದ ತುದಿಗೆ ಕರೆದುಕೊಂಡು ಹೋಗಿದ್ದ. ಪಕ್ಕಾ ಬಾಲಿವುಡ್ ಸಿನಿಮಾದಂಥೆಯೇ ಪ್ರಫೋಸ್ ಸಹ ಮಾಡಿದ. ಆಕೆಗೂ ಅದೇ ಬೇಕಿತ್ತು, ಅವಳು ಒಪ್ಪಿಕೊಂಡಳು, ಕುಣಿದಾಡಿದಳು. ಆದರೆ ಈ ಸಂಭ್ರಮ ಕೆಲವೇ ಕ್ಷಣದಲ್ಲಿ ದುರಂತವಾಗಿ ಬದಲಾಯಿತು.
ಗೆಳೆಯ ಪ್ರಫೋಸ್ ಮಾಡಿದ್ದನ್ನು ಕೇಳಿ ಆನಂದಿಂದ ಕುಣಿದಾಡಿದ ಆಕೆ ಕಾಲು ಜಾರಿ ಪ್ರಪಾತಕ್ಕೆ ಬಿದ್ದಳು. ಅಷ್ಟೇ ಶುರುವಾಗಬೇಕಿದ್ದ ಪ್ರೇಮ ಕತೆ ದುರಂತ ಅಂತ್ಯ ಕಂಡಿತು. ಸ್ಪೇನ್ ನ ಸುಂದರ ನಡುಗಡ್ಡೆಯಲ್ಲಿ ಇಂಥ ದುರಂತವೊಂದು ಸಂಭವಿಸಿದೆ.[ಪ್ರಿಯಕರನಿಗಾಗಿ ಸಬ್ಇನ್ಸಪೆಕ್ಟರ್ ವೇಷ ತೊಟ್ಟ ಯುವತಿ]

ಬಲ್ಗೇರಿಯಾದ ಹುಡುಗಿ 29 ವರ್ಷದ ಡಿಮಿಟ್ರಿನಾ ಡಿಮಿಟ್ರೋವಾ ಬಳಿ ಆಕೆಯ ಗೆಳೆಯ ಪ್ರೀತಿ ತೋಡಿಕೊಂಡಿದ್ದ. ಇದನ್ನು ಕೇಳಿ ಸಂತಸದಿಂದ ಕುಣಿದಾಡಿದ ಡಿಮಿಟ್ರೋವಾ ಆಯತಪ್ಪಿ 65 ಅಡಿ ಆಳದ ಪ್ರಪಾತಕ್ಕೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಸ್ಥಳಿಯ ಪತ್ರಿಕೆಯೊಂದು ವರದಿ ಮಾಡಿದೆ.
ಕಳೆದ ಬುಧವಾರ ದುರ್ಘಟನೆ ಸಂಭವಿಸಿದ್ದು ಕೆಳಕ್ಕೆ ಬೀಳುವಾಗಲೇ ಹೃದಯಾಘಾತವಾಗಿದೆ. ಚಿಕಿತ್ಸೆ ನೀಡಲು ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ.ಇಬಿಜಾ ಪ್ರಾಂತ್ಯದಲ್ಲಿ ವಾಸವಾಗಿದ್ದ ತನ್ನ ಗೆಳೆಯನ್ನು ಎರಡು ದಿನಗಳ ಹಿಂದೆ ನೋಡಲು ಬಂದಿದ್ದ ಡಿಮಿಟ್ರೋವಾ ದುರಂತ ಅಂತ್ಯ ಕಂಡಿದ್ದಾಳೆ.












Click it and Unblock the Notifications