ಪೆನ್ಷನ್ ಆಸೆಗಾಗಿ ಅಮ್ಮನ ಶವದೊಂದಿಗೆ ಬದುಕುತ್ತಿದ್ದ ಪುತ್ರ!

ಮಡ್ರಿಡ್(ಸ್ಪೇನ್), ಡಿಸೆಂಬರ್ 14: ತಿಂಗಳು ತಿಂಗಳು ಬರುವ ಅಮ್ಮನ ಪಿಂಚಣಿ ಆಸೆಗಾಗಿ ತಾಯಿಯ ಶವದೊಂದಿಗೇ ಬದುಕುತ್ತಿದ್ದ ಪುತ್ರನನ್ನು ಪೊಲೀಸರು ಬಂಧಿಸಿದ ಘಟನೆ ಸ್ಪೇನ್ ನ ಮಡ್ರಿಡ್ ಎಂಬಲ್ಲಿ ಗುರುವಾರ ನಡೆದಿದೆ.

92 ವರ್ಷ ವಯಸ್ಸಿನ ತಾಯಿ ಸತ್ತು ಸುಮಾರು ಒಂದು ವರ್ಷವಾಗಿದ್ದರೂ ಆಕೆಯ ದೇಹದ ಅಂತ್ಯ ಸಂಸ್ಕಾರ ಮಾಡದ ಪುತ್ರ, ಪ್ರತಿ ತಿಂಗಳೂ ಆಕೆಗೆ ಬರುತ್ತಿದ್ದ ಪೆನ್ಷನ್ ಹಣವನ್ನು ಪಡೆದುಕೊಳ್ಳುತ್ತಿದ್ದ.

ಆದರೆ ಕೆಲ ದಿನಗಳಿಂದ ಈ ಮನೆಯಿದ ಕೆಟ್ಟ ವಾಸನೆ ಬರುತ್ತಿದ್ದರಿಂದ ಮತ್ತು ಆತನ ತಾಯಿ ಕಾಣಿಸಿಕೊಳ್ಳದ ಕಾರಣ ಅನುಮಾನ ಬಂದ ನೆರೆಹೊರೆಯವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದರು. ಪೊಲೀಸರು ಬಂದು ತನಿಖೆ ನಡೆಸಿದಾಗ, ತಾಯಿಯ ಶವ ಇರುವುದು ಕಂಡುಬಂದಿದೆ.

Man Lives With Dead Mothers Body In Spain To Collect Pension

ತಾಯಿ ವಯೋಸಹಜ ಕಾಯಿಲೆಯಿಂದ ಮೃತರಾಗಿದ್ದರು. "ಹಣದ ಅಗತ್ಯ ಇದ್ದಿದ್ದರಿಂದ ನಾನು ಅಮ್ಮನ ಸಾವನ್ನು ಮುಚ್ಚಿಟ್ಟೆ. ನನ್ನ್ ಜೀವನಕ್ಕೆ ಅವರ ಪೆನ್ಷನ್ ಹಣದ ಅಗತ್ಯ ತುಂಬಾ ಇತ್ತು ಎಂದು 62 ವರ್ಷ ವಯಸ್ಸಿನ ಆಕೆಯ ಪುತ್ರ ಪೊಲೀಸರ ಬಳಿ ಹೇಳಿಕೊಂಡಿದ್ದಾನೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+