ಢಾಕಾ ವಿಮಾನ ನಿಲ್ದಾಣ ರಸ್ತೆಯಲ್ಲಿ ಆತ್ಮಹತ್ಯಾ ಬಾಂಬ್ ದಾಳಿ

ಢಾಕಾ, ಮಾರ್ಚ್ 24: ಶುಕ್ರವಾರ (ಮಾರ್ಚ್ 24) ರಾತ್ರಿ 7.40ರ ಸುಮಾರಿಗೆ ಉತ್ತರ ಢಾಕಾದ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಪೊಲೀಸ್ ಕಮೀಷನರ್ ಕಚೇರಿಯ ಮುಂಭಾಗದಲ್ಲಿದ್ದ ಪೊಲೀಸ್ ಚೌಕಿ ಬಳಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ.

ನಗರದ ಉತ್ತರ ಭಾಗದಲ್ಲಿರುವ ಉತ್ತರಾ ಟ್ರಾಫಿಕ್ ಝೋನ್ ನ ಕಮೀಷನರ್ ಕಚೇರಿಯನ್ನು ಗುರಿಯಾಗಿಸಿ ಈ ಸ್ಫೋಟ ನಡೆದಿದೆ ಎನ್ನಲಾಗಿದೆ.

ಟ್ರಾವೆಲ್ ಬ್ಯಾಗ್ ಧರಿಸಿ ಪ್ರವಾಸಿಗನಂತೆ ಕಾಣುತ್ತಿದ್ದ, ಸುಮಾರು 30 ವರ್ಷದ ಆಸುಪಾಸಿನ ಅಪರಿಚಿತ ವ್ಯಕ್ತಿಯೊಬ್ಬ ಈ ದಾಳಿ ನಡೆಸಿದ್ದಾನೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸ್ಫೋಟಿಸಿಕೊಂಡ ವ್ಯಕ್ತಿಯ ಸಾವಿನ ಹೊರತಾಗಿ ಸದ್ಯದ ಮಟ್ಟಿಗೆ ಮತ್ಯಾವ ಸಾವು ನೋವುಗಳ ಬಗ್ಗೆ ವರದಿಯಾಗಿಲ್ಲ.

(ಈ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ...)

ಎರಡನೇ ಘಟನೆ: ಈ ವಾರದಲ್ಲಿ ನಡೆದ ಎರಡನೇ ಘಟನೆ ಇದಾಗಿದೆ. ಕೆಲ ದಿನಗಳ ಹಿಂದೆ ಢಾಕಾದಲ್ಲಿರುವ ಸೇನಾ ನೆಲೆಯ ಮುಂಭಾಗದಲ್ಲಿ ಇದೇ ರೀತಿ ವ್ಯಕ್ತಿಯೊಬ್ಬ ಆತ್ಮಹತ್ಯಾ ದಾಳಿ ನಡೆಸಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+