Earthquake: ಭೀಕರ ಭೂಕಂಪನ, ನಡುಗಿ ಹೋಯಿತು ಅಮೆರಿಕ ಖಂಡ...
ಭೂಮಿ ಮೇಲೆ ದಿನದಿಂದ ದಿನಕ್ಕೆ ಪ್ರಾಕೃತಿಕ ವಿಕೋಪಗಳು ಹೆಚ್ಚಾಗುತ್ತಿವೆ. ಮನುಷ್ಯರು ಭೂಮಿಯ ಮೇಲೆ ನಡೆಸುತ್ತಿರುವ ದೌರ್ಜನ್ಯದ ಪರಿಣಾಮ ಪ್ರಕೃತಿ ಕೂಡ ಸರಿಯಾಗಿ ಪಾಠ ಕಲಿಸುತ್ತಿದೆ. ಹೀಗೆಲ್ಲಾ ಇದ್ದಾಗಲೇ ದಕ್ಷಿಣ ಅಮೆರಿಕ ಸಮೀಪದ ಡ್ರೇಕ್ ಪ್ಯಾಸೇಜ್ ಪ್ರದೇಶದಲ್ಲಿ ಭೀಕರ ಘಟನೆ ನಡೆದಿದೆ. ಈ ಘಟನೆ ಇದೀಗ ಸುನಾಮಿ ಭೀತಿಯನ್ನ ಕೂಡ ಹುಟ್ಟುಹಾಕಿದ್ದು, ಡ್ರೇಕ್ ಪ್ಯಾಸೇಜ್ ಪ್ರದೇಶದಲ್ಲಿ ಇಂದು ಬೆಳ್ಳಂ ಬೆಳಗ್ಗೆ ಸಂಭವಿಸಿದ 7.5 ತೀವ್ರತೆಯ ಭೂಕಂಪನ ಸ್ಥಳೀರಲ್ಲಿ ಆತಂಕ ಹೆಚ್ಚಿಸಿದೆ.
ಅಂದಹಾಗೆ ಡ್ರೇಕ್ ಪ್ಯಾಸೇಜ್ ಪ್ರದೇಶದಲ್ಲಿ 7.5 ತೀವ್ರತೆಯ ಭೂಕಂಪನ ಸಂಭವಿಸಿದ ನಂತರ ದಿಢೀರ್ ಅಂತಾ ಚಿಲಿಯ ನೇವಿ ಹೈಡ್ರೋಗ್ರಾಫಿಕ್ ಆಂಡ್ ಓಶನೋಗ್ರಾಫಿಕ್ ಸರ್ವೀಸ್, ಚಿಲಿಯ ಅಂಟಾರ್ಕ್ಟಿಕ್ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಿತ್ತು. ಯಾವುದೇ ಕ್ಷಣದಲ್ಲಿ ಸುನಾಮಿ ಅಪ್ಪಳಿಸುವ ಭಯ ಕೂಡ ಆ ಸಮಯದಲ್ಲಿ ಕಾಡುತ್ತಿತ್ತು. ಆದರೆ, ಕೊನೆಗೂ ಪರಿಸ್ಥಿತಿ ಹಿಡಿತಕ್ಕೆ ಸಿಕ್ಕಿದೆ ಎಂಬ ಸಂದೇಶ ಸ್ಪಷ್ಟವಾದ ಹಿನ್ನೆಲೆ ಸುನಾಮಿ ಎಚ್ಚರಿಕೆ ವಾಪಸ್ ಪಡೆಯಲಾಗಿದೆ. ಪೆಸಿಫಿಕ್ ಸಾಗರದಲ್ಲಿ ಸುನಾಮಿ ಅಟ್ಟಹಾಸದ ಆತಂಕ ಇದೀಗ ಮರೆಯಾಗಿದೆ.

11 ಕಿ.ಮೀ. ಆಳದಲ್ಲಿ ಕಂಪಿಸಿದ ಭೂಮಿ
ಅಂದಹಾಗೆ ಆರಂಭದಲ್ಲಿ ಈ ಭೂಕಂಪನ ತೀವ್ರತೆ 8.0 ಇತ್ತು ಎನ್ನಲಾಗಿತ್ತು, ಆದರೆ ಆ ನಂತರದಲ್ಲಿ ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಪರಿಶೀಲನೆ ನಂತರ ಭೂಕಂಪನದ ತೀವ್ರತೆ 7.5ಕ್ಕೆ ಇಳಿಸಿದ್ದಾರೆ. ಇನ್ನು ಈ ಭೂಕಂಪನ ಭೂಮಿ ಅಡಿಯಲ್ಲಿ ಕೇವಲ 11 ಕಿಲೋಮೀಟರ್ ಅಂದರೆ 7 ಮೈಲಿ ಆಳದಲ್ಲಿ ಸಂಭವಿಸಿದೆ ಅಂತಾ ಅಮೆರಿಕದ ಭೂವೈಜ್ಞಾನಿಕ ಸಮೀಕ್ಷೆ ಮಾಹಿತಿ ನೀಡಿದೆ. ಮತ್ತೊಂದು ಕಡೆಯಲ್ಲಿ ಭೂಕಂಪದ ಕೇಂದ್ರ ಬಿಂದು ಅರ್ಜೆಂಟಿನಾದ ದಕ್ಷಿಣದಲ್ಲಿರುವ ಉಶುಯಾ ನಗರದಿಂದ ಸುಮಾರು 700 ಕಿಲೋ ಮೀಟರ್ ಆಗ್ನೇಯಕ್ಕೆ ಇತ್ತು ಎಂದು ವರದಿಯಾಗಿದೆ. ಇದೇ ಉಶುಯಾ ನಗರದಲ್ಲಿ ಸುಮಾರು 57,000 ಜನಸಂಖ್ಯೆ ಇದ್ದು, ಭೀಕರ ದುರಂತ ಸ್ವಲ್ಪದರಲ್ಲೇ ತಪ್ಪಿ ಹೋಗಿದೆ.
ಹಲವು ಪ್ರದೇಶಗಳಲ್ಲಿ ಪರಿಹಾರ ಕಾರ್ಯಾಚರಣೆ
ಭೂಕಂಪ ಸಂಭವಿಸಿದ ಪ್ರದೇಶದಲ್ಲಿ ಇದೀಗ ಪರಿಹಾರ ಕಾರ್ಯಾಚರಣೆ ಅಬ್ಬರದಿಂದ ಸಾಗಿದ್ದು, ಈ ರೀತಿ ಭೂಕಂಪನದ ತೀವ್ರತೆಗೆ ಉರುಳಿ ಬಿದ್ದಿರುವ ಕಟ್ಟಡ & ಮನೆಗಳ ಅವಶೇಷಗಳ ಅಡಿ ಸಿಲುಕಿದ ಜನರನ್ನ ರಕ್ಷಣೆ ಮಾಡಲಾಗುತ್ತಿದೆ. ಮತ್ತೊಂದು ಕಡೆ ಈ ಭಾಗದಲ್ಲಿ ತೀವ್ರ ಎಚ್ಚರಿಕೆ ವಹಿಸಲಾಗಿದ್ದು, ಯಾವ ಕ್ಷಣದಲ್ಲಿ ಮತ್ತೆ ಭೂಮಿ ಕಂಪಿಸಿ ಸಮಸ್ಯೆ ಆಗುತ್ತೋ ಅಂತಾ ಜನರು ಚಿಂತೆ ಮಾಡುತ್ತಿದ್ದಾರೆ. ಮೊದಲೇ ತೀವ್ರ ಬಡತನದಲ್ಲಿ ನರಳುತ್ತಿರುವ ಈ ಭಾಗಗಳಲ್ಲಿ ಇದೀಗ ಭೂಂಕಪನ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.












Click it and Unblock the Notifications