ಕಾನ್ಫಿರೆನ್ಸ್ ಗೆಂದು ಥೈಲ್ಯಾಂಡ್ ಗೆ ತೆರಳಿದ್ದ ಭಾರತೀಯ ಟೆಕ್ಕಿ ದುರ್ಮರಣ
ಭೋಪಾಲ್, ಅಕ್ಟೋಬರ್ 11: ಥೈಲ್ಯಾಂಡ್ ನಲ್ಲಿ ಸಮಾವೇಶವೊಂದರಲ್ಲಿ ಭಾಗಿಯಾಗಿದ್ದ ಭಾರತೀಯ ಮೂಲದ ಸಾಫ್ಟ್ ವೇರ್ ಎಂಜಿನಿಯರ್ ಪ್ರಗ್ಯಾ ಪಾಲಿವಾಲ್ ಎಂಬುವವರು ರಸ್ತೆ ಅಪಘಾತವೊಂದರಲ್ಲಿ ದುರ್ಮರಣಕ್ಕೀಡಾಗಿದ್ದಾರೆ.
29 ವರ್ಷ ವಯಸ್ಸಿನ ಟೆಕ್ಕಿ ಪ್ರಗ್ಯಾ ಅವರು ಮಧ್ಯಪ್ರದೇಶದವರಾಗಿದ್ದು, ಫುಕೆಟ್ ನಲ್ಲಿ ಹಾಂಗ್ ಕಾಂಗ್ ಮೂಲದ ಸಂಸ್ಥೆಯೊಂದು ನಡೆಸಿದ್ದ ಕಾನ್ಫಿರೆನ್ಸ್ ನಲ್ಲಿ ಭಾಗಿಯಾಗಲು ತೆರಳಿದ್ದರು.

ಆದರೆ ಬುಧವಾರ ಅವರು ಅಪಘಾತದಲ್ಲಿ ದುರ್ಮರಣ ಹೊಂದಿದ್ದು, ಈ ವಿಷಯವನ್ನು ಆಕೆಯ ರೂಮ್ ಮೇಟ್ ಕುಟುಂಬಕ್ಕೆ ತಿಳಿಸಿದ್ದರು. ಆಕೆಯ ಮೃತದೇಹವನ್ನು ಪಡೆಯಲು ಕುಟುಂಬ ವರ್ಗ ಪ್ರಯತ್ನಿಸುತ್ತಿದ್ದು, ಕುಟುಂದ ಯಾವೊಬ್ಬ ಸದಸ್ಯರ ಬಳಿಯೂ ಪಾಸ್ ಪೋರ್ಟ್ ಇಲ್ಲದ ಕಾರಣ ಕುಟುಂಬ ವಿದೇಶಾಂಗ ಸಚಿವಾಲಯದ ನೆರವು ಬೇಡಿದೆ.
ಪ್ರಗ್ಯಾ ಮಧ್ಯಪ್ರದೇಶದ ಛತಾರ್ಪುರ ಜಿಲ್ಲೆಯವರಾಗಿದ್ದು, ಅವರ ಮೃತಶರೀರನ್ನು ಸ್ವದೇಶಕ್ಕೆ ತರಲು ಸ್ಥಳೀಯ ಶಾಸಕರು ಮುಖ್ಯಮಂತ್ರಿ ಕಮಲ್ ನಾಥ್ ಮತ್ತು ಕೇಂದ್ರ ಸರ್ಕಾರದ ಮೊರೆ ಹೋಗಿದ್ದಾರೆ.
ಕುಟುಂಬಕ್ಕೆ ಮೃತದೇಹ ವಾಪಸ್ ಪಡೆಯಲು ಎಲ್ಲ ರೀತಿಯ ಸಹಕಾರ ನೀಡುತ್ತೇವೆ ಎಂದು ಕಮಲ್ ನಾಥ್ ಭರವಸೆ ನೀಡಿದ್ದಾರೆ.












Click it and Unblock the Notifications