ಫ್ರಾನ್ಸ್‌ನ ನೂತನ ಪ್ರಧಾನಿಯಾಗಿ ಜೀನ್ ಕ್ಯಾಸ್ಟೆಕ್ಸ್ ನೇಮಕ
ಪ್ಯಾರೀಸ್, ಜುಲೈ 4: ಜೀನ್ ಕ್ಯಾಸ್ಟಕ್ಸ್ ಅವರು ಫ್ರಾನ್ಸ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.
2022 ರ ಚುನಾವಣೆಗೆ ಮುಂಚಿತವಾಗಿ ತನ್ನ ಅಧ್ಯಕ್ಷ ಸ್ಥಾನವನ್ನು ಗಟ್ಟಿಗೊಳಿಸುವ ಮತ್ತು ಕೊರೊನಾವೈರಸ್ ಬಿಕ್ಕಟ್ಟಿನಿಂದ ಆರ್ಥಿಕ ಚೇತರಿಕೆ ಪ್ರಾರಂಭಿಸುವ ಉದ್ದೇಶದಿಂದ ಫ್ರಾನ್ಸ್‌ನ ಅಧ್ಯಕ್ಷ ಮ್ಯಾಕ್ರೊನ್ ಲಾಕ್‌ಡೌನ್ ತಜ್ಞ ಜೀನ್ ಕ್ಯಾಸ್ಟೆಕ್ಸ್ ಅವರನ್ನು ಫ್ರಾನ್ಸ್ ನ ನೂತನ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ.
ಮೂರ್ನಾಲ್ಕು ವರ್ಷಗಳಿಂದ ಫ್ರಾನ್ಸ್ ತೀವ್ರ ತರದ ಸಮಸ್ಯೆಗಳನ್ನು ಎದುರಿಸುತ್ತಿದ್ದು ಇದಕ್ಕಾಗಿಯೇ ಪ್ರಧಾನಿ ಸ್ಥಾನದಲ್ಲಿ ಬದಲಾವಣೆ ತರಲಾಗಿದೆ.

ಅಧ್ಯಕ್ಷ ಮ್ಯಾಕ್ರೊನ್ ಆಡಳಿತ ಸುಧಾರಣೆ ಮಾಡಲು ಮುಂದಾಗಿದ್ದು ನೂತನ ಪ್ರಧಾನ ಮಂತ್ರಿ ಶೀಘ್ರವೇ ಸಂಪುಟ ರಚನೆ ಮಾಡಲಿದ್ದಾರೆ ಎಂದು ವರದಿಯಾಗಿದೆ.
ಕೊರೊನಾವೈರಸ್ ಲಾಕ್‌ಡೌನ್‌ನಿಂದ ಫ್ರಾನ್ಸ್‌ನ ಆರ್ಥಿಕ ಕುಸಿತವನ್ನು ನಿಭಾಯಿಸಲು ಏಪ್ರಿಲ್‌ನಲ್ಲಿಮ್ಯಾಕ್ರೊನ್ ಎಡ್ವರ್ಡ್ ಫಿಲಿಫ್ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಕ್ಯಾಸ್ಟೆಕ್ಸ್ ಅವರ ಹೆಸರು ಸೂಚಿಸಿದ್ದಾರೆ.
ಜುಲೈ 3 ರಂದು ನಡೆದ ಸಮಾರಂಭದಲ್ಲಿ ಫಿಲಿಫ್ ಕ್ಯಾಸ್ಟೆಕ್ಸ್ ಅವರಿಗೆ ಪ್ರಧಾನಿ ಸ್ಥಾನವನ್ನು ವರ್ಗಾಯಿಸಿದ್ದಾರೆ. ಈ ವೇಳೆ ಮಾತನಾಡಿದ ನೂತನ ಪ್ರಧಾನಿ ಕ್ಯಾಸ್ಟೆಕ್ಸ್ ಕೊನಾವೈರಸ್ ಆತಂಕ ಇನ್ನೂ ಬಗೆಹರಿದಿಲ್ಲ, ಆರ್ಥಿಕ ಮತ್ತು ಸಾಮಾಜಿಕ ಬಿಕ್ಕಟ್ಟು ಸಾಕಷ್ಟು ಜಟಿಲವಾಗಿದೆ, ಅಲ್ಲದೆ ಈ ಬಿಕ್ಕಟ್ಟನ್ನು ಎದುರಿಸಲು ಒಗ್ಗಟ್ಟಿನಿಂದ ಹೋರಾಡಬೇಕಿದೆ ಎಂದು ಹೇಳಿದ್ದಾರೆ.












Click it and Unblock the Notifications