ದುಬೈ: ಮುಂಬೈ ಫ್ಯಾಶನ್ ಡಿಸೈನರ್ ಮೇಲೆ ಗ್ಯಾಂಗ್ ರೇಪ್

ಒಳ್ಳೆಯ ಕೆಲಸ ಕೊಡಿಸುವುದಾಗಿ ಹೇಳಿ ಮುಂಬೈನ ಖಾರ್ ಮೂಲದ Memsaab in Khar ಎಂಬ ಹೂವಿನ ಅಂಗಡಿ ಮಾಲೀಕಳೊಬ್ಬಳು ಮುಂಬೈ ಗೊರೆಗಾವಿನ ಯುವ ಫ್ಯಾಶನ್ ಡಿಸೈನರ್ ಅನ್ನು ವೇಶ್ಯಾವಾಟಿಕೆಗೆ ತಳ್ಳಿದ್ದಳು. ಆ ವೇಳೆ ಒಟ್ಟು 13 ಮಂದಿ ಆಕೆಯ ಮೇಲೆ ನಿರಂತರವಾಗಿ ರೇಪ್ ಮಾಡಿದ್ದಾರೆ. ದುಬೈನ ಅಂಜಲಿ ವಿನೋದ್ ಕುಮಾರ್ ಡೆ ಈ ಪಾಪ ಕೃತ್ಯವೆಸಗಿದ ಘರ್ ವಾಲಿ.
ಭಾರತಕ್ಕೆ ಮರಳಿದ ಮೇಲೆ ಭಾದಿತ ಯುವತಿ ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿ IPC section 406 (criminal breach of trust) and 420 (cheating and dishonestly inducing delivery of property)
ಅನುಸಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ಪೊಲೀಸರು ಅಂಜಲಿ ವಿನೋದ್ ಕುಮಾರ್ ವಿರುದ್ಧ ನೇರವಾಗಿ ಇನ್ನೂ ಯಾವುದೇ ದೂರು ದಾಖಲಿಸಿಕೊಂಡಿಲ್ಲ.
ಅಂಜಲಿ ವಿನೋದ್ ಕುಮಾರ್ ಡೆ ಮುಂಬೈನಲ್ಲಿದ್ದಾಗ ತನಗೆ ತಿಂಗಳಿಗೆ 4 ಲಕ್ಷ ರೂ. ಸಂಬಳದ ಆಸೆಯೊಡ್ಡಿದ್ದಳು. ಅದನ್ನು ನಂಬಿ ನನ್ನ ಚಿಕ್ಕಪ್ಪನಿಂದ 10 ಲಕ್ಷ ರೂ ಸಾಲವೆತ್ತಿ ವೀಸಾ, ಏರ್ ಟಿಕೆಟ್ ಮತ್ತು ವಸತಿಗಾಗಿ ವ್ಯವಸ್ಥೆ ಮಾಡಿಕೊಂಡಿದ್ದೆ. ಅದರಂತೆ ಕಳೆದ ವರ್ಷ ಜೂನ್ ನಲ್ಲಿ ದುಬೈ ಹೋಗುತ್ತಿದ್ದಂತೆ ಅಂಜಲಿ ವಿನೋದ್ ಕುಮಾರ್ ನನ್ನ ಪಾಸ್ ಪೋರ್ಟ್ ಮುಂತಾದ ದಾಖಲೆಯನ್ನೆಲ್ಲಾ ತನ್ನ ವಶಕ್ಕೆ ತೆಗೆದುಕೊಂಡಳು. ಮುಂದೆ ನನ್ನ ಹಣವೂ ಹೋಯ್ತು, ಮಾನವೂ ಹೋಯ್ತು ಎಂದು ಯುವತಿ ಅಲವತ್ತುಕೊಂಡಿದ್ದಾಳೆ.












Click it and Unblock the Notifications