ಹತ್ತನೇ ಅಂತಸ್ತಿನ ಕಟ್ಟಡದಿಂದ ಎಸೆದು ಮಗುವನ್ನು ಬದುಕಿಸಿದ ಮಹಿಳೆ

Posted By:
Subscribe to Oneindia Kannada

ಲಂಡನ್, ಜೂನ್ 14: ಬುಧವಾರ ಪಶ್ಚಿಮ ಲಂಡನ್ ನ ಗ್ರೆನ್ ಫೆಲ್ ಟವರ್ ನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡ ಸುದ್ದಿ ನಿಮಗೆ ಗೊತ್ತೇ ಇರುತ್ತದೆ. ಈ ವೇಳೆ ಒಳಗೆ ಸಿಕ್ಕಿಕೊಂಡ ಮಗುವನ್ನು ಒಂಬತ್ತು ಅಥವಾ ಹತ್ತನೇ ಅಂತಸ್ತಿನ ಕಿಟಕಿಯಿಂದ ಹೊರಗೆ ಹಾಕಿದ್ದು, ಕೆಳಗೆ ಇದ್ದ ವ್ಯಕ್ತಿಯೊಬ್ಬರು ಆ ಮಗುವನ್ನು ಕೈಯಲ್ಲಿ ಹಿಡಿಯುವಲ್ಲಿ ಸಫಲರಾಗಿದ್ದಾರೆ.

ಪ್ರತ್ಯಕ್ಷದರ್ಶಿ ಸಮಿರಾ ಲಮ್ರಾನಿ ಈ ಬಗ್ಗೆ ಮಾತನಾಡಿದ್ದು, ತಮ್ಮ ಮಗುವನ್ನು ಕಾಪಾಡಿಕೊಳ್ಳುವ ಸಲುವಾಗಿ ಮಗುವನ್ನು ಕಿಟಕಿಯಿಂದ ಹೊರಗೆ ಹಾಕಿದ್ದು, ಒಂಬತ್ತು ಅಥವಾ ಹತ್ತನೆ ಅಂತಸ್ತಿನಿಂದ ಕೆಳಗೆ ಹಾಕಿದ್ದಾರೆ ಎಂದು ಹೇಳಿದ್ದಾರೆ.

London fire: Baby thrown from 10th floor saved 'miraculously'

ಜನರು ಕಿಟಕಿ ಕಡೆಗೆ ನೋಡುತ್ತಿದ್ದರು. ಆಗ ಅಲ್ಲಿಂದ ಮಹಿಳೆಯೊಬ್ಬರು ಗಾಬರಿಯಿಂದ ಕೂಗುತ್ತಿದ್ದರು. ಸ್ವಲ್ಪ ಮಟ್ಟಿಗೆ ತೆರೆದಿದ್ದ ಕಿಟಕಿಯಿಂದ ಕಾಣುತ್ತಿದ್ದ ಹಾಗೆ ಆ ಮಹಿಳೆ ತನ್ನ ಮಗುವನ್ನು ಅಲ್ಲಿಂದ ಹೊರಗೆ ಹಾಕುವುದರಲ್ಲಿದ್ದರು. ಯಾರಾದರೂ ತಮ್ಮ ಮಗುವನ್ನು ಹಿಡಿದುಕೊಳ್ಳಲಿ ಎಂಬಂತೆ ನೋಡುತ್ತಿದ್ದರು ಎಂದು ಲಮ್ರಾನಿ ಹೇಳಿದ್ದಾರೆ.

ಅಷ್ಟರಲ್ಲಿ ವ್ಯಕ್ತಿಯೊಬ್ಬರು ಮುಂದೆ ಬಂದು ಮಗುವನ್ನು ಹಿಡಿದುಕೊಳ್ಳಲು ಯಶಸ್ವಿಯಾದರು ಎಂದು ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A baby was dropped from Grenfell Tower in west London as a massive fire tore through the residential tower before dawn on Wednesday. The baby was caught by a man at the scene after being thrown out of the window from 9th or 10th floor of the 24-storey residential tower.
Please Wait while comments are loading...