ವಿಜ್ಞಾನಿಯ ಶಾಕಿಂಗ್ ಹೇಳಿಕೆ: ಅಯ್ಯೋ ವಿಧಿಯೇ.. ಬದುಕು ಮೊದಲಿನಂತಾಗುವುದಿಲ್ಲವೇ?

ಮಾರಣಾಂತಿಕ ಕೊರೊನಾ ವೈರಸ್ ನಿಂದಾಗಿ ಇಡೀ ವಿಶ್ವವೇ ಹೆಣಗಾಡುತ್ತಿದೆ. ಇಲ್ಲಿಯವರೆಗೂ 14,31,973 ಮಂದಿಯಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದಿದೆ. ಡೆಡ್ಲಿ ಕೊರೊನಾ ವೈರಸ್ ನಿಂದ 82,096 ಮಂದಿ ಮೃತಪಟ್ಟಿದ್ದರೆ, 47,895 ಮಂದಿ ಇನ್ನೂ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದಾರೆ.

Recommended Video

      ಲಾಕ್ ಡೌನ್ ಇದ್ರೂ ರಸ್ತೆಗೆ‌ ಇಳಿಯಲಿವೆ ಓಲಾ ಮತ್ತು ಉಬರ್ ಕ್ಯಾಬ್ ಗಳು | Oneindia Kannada

      ಕೊರೊನಾ ವೈರಸ್ ಅದ್ಯಾವಾಗ ನಾಶವಾಗುತ್ತೋ, ಜಗತ್ತಿನಲ್ಲಿ ಅದ್ಯಾವಾಗ ಮತ್ತೆ ನೆಮ್ಮದಿ ಕಂಡುಬರುತ್ತೋ, ವಿಶ್ವ ಮೊದಲಿನಂತೆ ಅದ್ಯಾವಾಗ ಆಗುತ್ತೋ ಅಂತ ಎಲ್ಲರೂ ಆತಂಕದಿಂದ ದಿನಗಳನ್ನು ಕಳೆಯುತ್ತಿರುವಾಗಲೇ, ವಿಜ್ಞಾನಿಯೊಬ್ಬರು ಒಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ.

      ''ಪ್ರಪಂಚದಾದ್ಯಂತ ಜನ ಜೀವನ ಮತ್ತೆ ಮೊದಲಿನಂತಾಗುವುದಿಲ್ಲ. ಕೊರೊನಾ ವೈರಸ್ ಹರಡುವುದಕ್ಕೂ ಮೊದಲಿದ್ದ ದಿನಗಳು ಬಹುಶಃ ಮರುಕಳಿಸುವುದಿಲ್ಲ'' ಎಂದು ಅಮೇರಿಕಾದ ಪ್ರಖ್ಯಾತ ವಿಜ್ಞಾನಿ ಡಾ.ಆಂಥೋನಿ ಫೌಸಿ ಹೇಳಿದ್ದಾರೆ.

      ಬಹುಶಃ ಮರುಕಳಿಸುವುದಿಲ್ಲ.!

      ಬಹುಶಃ ಮರುಕಳಿಸುವುದಿಲ್ಲ.!

      ''ದೇಶಗಳು ಎಂದಿನಂತೆ ಸಮಾಜವಾಗಿ ಕಾರ್ಯ ನಿರ್ವಹಿಸಬಹುದು. ಆದ್ರೆ, ಕೊರೊನಾ ವೈರಸ್ ಬರುವುದಕ್ಕೂ ಮುಂಚೆ ಇದ್ದ ದಿನಗಳು ಬಹುಶಃ ಮರುಕಳಿಸುವುದಿಲ್ಲ. ಯಾಕಂದ್ರೆ, ಎಲ್ಲರ ಮನಸ್ಸಿನಲ್ಲೂ ಹೆದರಿಕೆ ಇದ್ದೇ ಇರುತ್ತದೆ'' ಎಂದು ವೈಟ್ ಹೌಸ್ ನಲ್ಲಿ ಯು.ಎಸ್ ವಿಜ್ಞಾನಿ ಡಾ.ಆಂಥೋನಿ ಫೌಸಿ ಹೇಳಿದ್ದಾರೆ.

      ಕಂಪ್ಲೀಟ್ ನಾರ್ಮಲ್ ಆಗುವುದು ಯಾವಾಗ.?

      ಕಂಪ್ಲೀಟ್ ನಾರ್ಮಲ್ ಆಗುವುದು ಯಾವಾಗ.?

      ''ಲಸಿಕೆಯಿಂದ ನಾವು ಜನರನ್ನು ಸಂಪೂರ್ಣವಾಗಿ ರಕ್ಷಿಸುವವರೆಗೂ ''ಕಂಪ್ಲೀಟ್ ನಾರ್ಮಲ್''.. ಅಂದ್ರೆ ಕೊರೊನಾ ವೈರಸ್ ಇಲ್ಲವೇ ಇಲ್ಲ ಎಂಬ ಸನ್ನಿವೇಶ ಬಹುಶಃ ಬರುವುದಿಲ್ಲ'' ಎಂದಿದ್ದಾರೆ ಡಾ.ಆಂಥೋನಿ ಫೌಸಿ.

      ಪೀಕ್ ಡೆತ್ ವೀಕ್

      ಪೀಕ್ ಡೆತ್ ವೀಕ್

      ಅಮೇರಿಕಾದಲ್ಲಿ ಇದೀಗ ಕರಾಳ ದಿನಗಳು ಶುರುವಾಗಿದೆ. ಪೀಕ್ ಡೆತ್ ವೀಕ್ (ಹೆಚ್ಚು ಸಾವುಗಳು ಸಂಭವಿಸುವ ವಾರ) ಹಂತಕ್ಕೆ ಕಾಲಿಟ್ಟಿರುವ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾದಲ್ಲಿ ಸೋಂಕಿತರ ಪ್ರಾಣ ಉಳಿಸಲು ಆಸ್ಪತ್ರೆಗಳು ಹೆಣಗಾಡುತ್ತಿವೆ.

      ಅಮೇರಿಕಾದಲ್ಲಿ ಸೋಂಕಿತರ ಸಂಖ್ಯೆ ಎಷ್ಟು.?

      ಅಮೇರಿಕಾದಲ್ಲಿ ಸೋಂಕಿತರ ಸಂಖ್ಯೆ ಎಷ್ಟು.?

      ಅಮೇರಿಕಾದಲ್ಲಿ ಇಲ್ಲಿಯವರೆಗೂ 4,00,540 ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ. 12,857 ಮಂದಿ ಈಗಾಗಲೇ ಮೃತಪಟ್ಟಿದ್ದು, 9,169 ಜನರ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ.

      ವೈಟ್ ಹೌಸ್ ಅಧಿಕಾರಿಗಳ ಅಂದಾಜು

      ವೈಟ್ ಹೌಸ್ ಅಧಿಕಾರಿಗಳ ಅಂದಾಜು

      ಅಮೇರಿಕಾವೊಂದರಲ್ಲೇ ಕೋವಿಡ್-19 ನಿಂದಾಗಿ 1,00,000 ದಿಂದ 2,40,000 ಮಂದಿ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವೈಟ್ ಹೌಸ್ ಅಧಿಕಾರಿಗಳು ಅಂದಾಜಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಕೊಟ್ಟಿರುವ ಡಾ.ಆಂಥೋನಿ ಫೌಸಿ, ''ಕಠಿಣ ಶ್ರಮ ಪಟ್ಟರೆ, ಖಂಡಿತ ಈ ಸಂಖ್ಯೆಯನ್ನು ಕಡಿಮೆಗೊಳಿಸಬಹುದು'' ಎಂದಿದ್ದಾರೆ.

      ಪ್ರಯೋಗಗಳು ನಡೆಯುತ್ತಲೇ ಇದೆ.!

      ಪ್ರಯೋಗಗಳು ನಡೆಯುತ್ತಲೇ ಇದೆ.!

      ಕೊರೊನಾ ವೈರಸ್ ಗೆ ಔಷಧಿ ಕಂಡುಹಿಡಿಯುವ ನಿಟ್ಟಿನಲ್ಲಿ, ಲಸಿಕೆ ತಯಾರಿಕೆಯಲ್ಲಿ ಅನೇಕ ಪ್ರಯೋಗಗಳು ನಡೆಯುತ್ತಲೇ ಇವೆ. ಕೊರೊನಾ ವೈರಸ್ ವಿರುದ್ಧ ಹೋರಾಡಿ ಬದುಕುಳಿದವರ ರಕ್ತದಿಂದ ಪ್ಲಾಸ್ಮಾ ಪಡೆದು ರೋಗಿಗಳಿಗೆ ಚಿಕಿತ್ಸೆಯಾಗಿ ನೀಡುವ ಪ್ರಯೋಗಗಳೂ ಚಾಲ್ತಿಯಲ್ಲಿವೆ. ಸದ್ಯಕ್ಕೆ ಇದು ಪರಿಣಾಮಕಾರಿಯಾಗಿ ಕಂಡುಬಂದಿದೆ. ಇನ್ನು ಮಲೇರಿಯಾಗೆ ಮದ್ದಾಗಿ ನೀಡುವ hydroxychloroquine ಕೂಡ ಕೋವಿಡ್-19 ವಿರುದ್ಧ ಪರಿಣಾಮಕಾರಿ ಹೋರಾಟ ಮಾಡಬಲ್ಲದು ಎನ್ನಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+