ಪ್ರಯಾಣಕ್ಕೆ ಬ್ರಿಟಿಷ್ ಹೆಸರು ಬಳಸಿದ್ದ ಲಲಿತ್ ಮೋದಿ!
ಲಂಡನ್, ಜೂ. 21: ವೀಸಾ ಗೊಂದಲಕ್ಕೆ ಸಿಕ್ಕಿ ಹಾಕಿಕೊಂಡಿರುವ ಐಪಿಎಲ್ ಮಾಜಿ ಅಧ್ಯಕ್ಷ ಲಲಿತ್ ಮೋದಿ ವಿದೇಶ ಪ್ರಯಾಣಕ್ಕೆಂದು ತಮ್ಮ ಹೆಸರನ್ನೇ ಬದಲಾಯಿಸಿಕೊಂಡ ಸಂಗತಿ ಬಹಿರಂಗವಾಗಿದೆ.
ಬ್ರಿಟೀಷ್ ಮೂಲದ ಮಾಧ್ಯಮವೊಂದು ವರದಿ ಮಾಡಿರುವಂತೆ, ಬ್ರಿಟಿಷ್ ಸರ್ಕಾರಕ್ಕೆ ಲಲಿತ್ ಮೋದಿ ಸಲ್ಲಿಸಿರುವ ದಾಖಲೆಗಳಲ್ಲಿ ಬೇರೆ ಹೆಸರನ್ನು ನಮೂದು ಮಾಡಿದ್ದಾರೆ ಎಂಬುದು ಬಹಿರಂಗವಾಗಿದೆ. ಮೋದಿ ತಮ್ಮ ಹೆಸರನ್ನು ಪ್ರಿನ್ಸ್ ಚಾರ್ಲ್ಸ್ ಎಂದೂ ಮತ್ತು ತಮ್ಮ ಸಹೋದರನ ಹೆಸರನ್ನು ಆಂಡ್ರ್ಯೂ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪತ್ರಿಕೆ ವರದಿಗಳ ಪ್ರಕಾರ ಆಂಡ್ರ್ಯೂ 2ನೇ ಕ್ವೀನ್ ಎಲಿಜೆಬೆತ್ ಅವರ 2ನೇ ಪುತ್ರನಾಗಿದ್ದು, ಲಲಿತ್ ಮೋದಿ ಹಲವು ವರ್ಷಗಳಿಂದ ಪರಿಚಯ ಎಂದು ಹೇಳಲಾಗಿದೆ.

ಲಲಿತ್ ಮೋದಿಗೆ ನಿಯಮ ಬಾಹಿರ ರೀತಿಯಲ್ಲಿ ವೀಸಾ ನೀಡಿಕೆ ಮಾಡಲಾಗಿದೆ ಎಂಬ ವಿವಾದ ದೇಶಾದ್ಯಂತ ಚರ್ಚೆಗೆ ಕಾರಣವಾಗಿದೆ. ವಿದೇಶಾಂಗ ಸಚಿಚೆ ಸುಷ್ಮಾ ಸ್ವರಾಜ್ ಮತ್ತು ವಸುಂಧರಾ ರಾಜೇ ಮೋದಿಗೆ ನೆರವು ನೀಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಲ್ಲದೇ ಸುಷ್ಮಾ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ನಡೆಸಿತ್ತು.
ಆದರೆ ಲಲಿತ್ ಮೋದಿ ಈ ಬಗ್ಗೆ ಯಾವ ಪ್ರತಿಕ್ರಿಯೆಯನ್ನು ನೀಡಿಲ್ಲ. ಬಕಿಂಗ್ ಹ್ಯಾಂ ಅರಮನೆ ಸಹ ಈ ವರದಿ ಸತ್ಯಕ್ಕೆ ದೂರವಾಗಿದ್ದು ಎಂದು ಹೇಳಿದೆ. ಆಂಡ್ರ್ಯೂ ಮೋದಿಯಿಂದ ಯಾವ ಬಗೆಯ ಉಡಯಗೊರೆಗಳನ್ನು ಪಡೆದುಕೊಂಡಿಲ್ಲ ಎಂದು ಅರಮನೆ ಸ್ಪಷ್ಟನೆ ನೀಡಿದೆ.












Click it and Unblock the Notifications