3 ಸಾರಿ ಬೆಂಗಳೂರಿಗೆ ಬಂದಿಳಿಯಲಿದೆ ಕುವೈತ್ ಏರ್ವೇಸ್
ಬೆಂಗಳೂರು, ಜ. 16 : ಬೆಂಗಳೂರು ಮತ್ತು ಅಹಮದಾಬಾದ್ ಗೆ ಇನ್ನು ಮುಂದೆ ಕುವೈತ್ ಏರ್ವೇಸ್ ಬಂದಿಳಿಯಲಿದೆ. ಜೂನ್ 2015 ರಿಂದ ವಿಮಾನ ಹಾರಾಟ ಆರಂಭಿಸಲಿದ್ದು ವಾರಕ್ಕೆ 3 ಬಾರಿ ಪ್ರಯಾಣ ಬೆಳೆಸಲು ಅವಕಾಶ ಕಲ್ಪಿಸಲಾಗುವುದು.
ಈ ಬಗ್ಗೆ ಮಾಹಿತಿ ನೀಡಿದ ಕುವೈತ್ ಏರ್ವೇಸ್ ಹಿರಿಯ ಅಧಿಕಾರಿ, ಜೂನ್ ತಿಂಗಳಲ್ಲಿ ಹಾರಾಟ ಆರಂಭಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯಾನಕ್ಕೆ ಏರ್ ಕ್ರಾಫ್ಟ್ ಎ 320 ಬಳಸಲಾಗುವುದು. ಕೆಲ ಅಡೆತಡೆಗಳ ನಿವಾರಣೆಗೆ ಕಾಯುತ್ತಿದ್ದೇವೆ ಎಂದು ತಿಳಿಸಿದರು.[ಐಆರ್ ಸಿಟಿಸಿಯಿಂದ ದುಬೈ ಪ್ರವಾಸದ ಪ್ಯಾಕೇಜ್]

ಈ ವರ್ಷದಲ್ಲಿಯೇ ಅಹಮದಾಬಾದ್ ನಿಂದ ಮುನಿಚ್, ವಿಯೆನ್ನಾ ಮತ್ತು ಇಸ್ತಾನ್ ಬುಲ್ ಗೆ ಹೊಸ ವಿಮಾನಗಳ ರೂಟ್ ಆರಂಭಿಸುವ ಚಿಂತನೆಯಿದೆ. ಭಾರತದಿಂದ ಕುವೈತ್ ಗೆ ಸಂಚರಿಸುವ ಪ್ರಯಾಣಿಕರ ಸಂಖ್ಯೆ ಕಳೆದ ಒಂದು ವರ್ಷದಲ್ಲಿ ಗಣನೀಯ ಹೆಚ್ಚಳ ಕಂಡಿದೆ ಎಂದು ತಿಳಿಸಿದರು.
ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡಿರುವ ವಿಮಾನ ಸಂಸ್ಥೆ ಭಾರತ ಮತ್ತು ಕುವೈತ್ ಸಂಪರ್ಕ ಕೊಂಡಿಯಾಗಿದೆ. ಸದ್ಯ ಭಾರತದಲ್ಲಿ ವಿಮಾನದ ಐದು ರೂಟ್ ಗಳಿದ್ದು ಪ್ರತಿದಿನ ಮುಂಬೈ ಮತ್ತು ಕೊಚ್ಚಿ, ವಾರದಲ್ಲಿ 6 ಸಾರಿ ದೆಹಲಿ ಮತ್ತು 4 ಸಾರಿ ಚೆನ್ನೈ ಮತ್ತು ತ್ರಿವೇಂದ್ರಮ್ ನಡುವೆ ಸಂಚರಿಸುತ್ತಿದೆ.












Click it and Unblock the Notifications