• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಿಮ್ ಜಾಂಗ್ ಆರೋಗ್ಯದ ಬಗ್ಗೆ ಅನುಮಾನ ಹುಟ್ಟಿಸಿದ ತಲೆಯಲ್ಲಿರುವ ಪಟ್ಟಿ

|
Google Oneindia Kannada News

ಕಳೆದ ಒಂದೆರೆಡು ವರ್ಷಗಳಿಂದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ಹಲವಾರು ಊಹಾಪೋಹಗಳಿವೆ.

ಸವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಸತ್ತೇ ಹೋಗಿದ್ದಾರೆ ಅವರ ತಂಗಿಯೇ ಮುಂದಿನ ಸರ್ವಾಧಿಕಾರಿ ಎನ್ನುವವರೆಗೂ ವಿಷಯ ಹೋಗಿ ಬಳಿಕ ಕಿಮ್ ಜಾಂಗ್ ಸತ್ತಿಲ್ಲ ಅದೊಂದು ವದಂತಿ ಎಂದು ಹೇಳಿದ್ದರಿಂದ ಎಲ್ಲರೂ ಸುಮ್ಮನಾಗಿದ್ದರು.

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ತೂಕ ಇಳಿಕೆ: ಆರೋಗ್ಯ ಸಮಸ್ಯೆ ಬಗ್ಗೆ ಊಹಾಪೋಹಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ತೂಕ ಇಳಿಕೆ: ಆರೋಗ್ಯ ಸಮಸ್ಯೆ ಬಗ್ಗೆ ಊಹಾಪೋಹ

ಆದರೆ ಇದೀಗ ಕಿಮ್ ಜಾಂಗ್ ಉನ್ ಅವರ ತಲೆಯಲ್ಲಿರುವ ಪಟ್ಟಿ ಮತ್ತಷ್ಟು ಊಹಾಪೋಹಗಳಿಗೆ ಕಾರಣವಾಗಿದೆ. ಅವರಿಗೆ ಏನೋ ಆರೋಗ್ಯ ಸಮಸ್ಯೆ ಇದೆ ಹಾಗಾಗಿಯೇ ಅವರ ತಲೆಯಲ್ಲಿ ಬ್ಯಾಂಡೇಜ್ ಇದೆ ಎಂದು ಹೇಳಲಾಗುತ್ತಿದೆ.

ಕಳೆದ ವರ್ಷ ಕಿಮ್ ಜಾಂಗ್​ ಉನ್​ ಕೆಲವು ತಿಂಗಳುಗಳ ಕಾಲ ನಾಪತ್ತೆಯಾಗಿದ್ದರು. ಅವರು ಸತ್ತು ಹೋಗಿದ್ದಾರೆ ಎಂದು ಹರಡಿತ್ತು. ಅದಾದ ಮೇಲೆ ಏಕಾಏಕಿ ಒಂದು ದಿನ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಸ್ವಲ್ಪದಿನ ಎಲ್ಲವೂ ಸರಿಯಾಗಿತ್ತು..ಆದರೆ ಮತ್ತೆ ಕಿಮ್​ ಜಾಂಗ್​ ಉನ್​ ತೂಕ ಕಳೆದುಕೊಂಡಿದ್ದು ಎಲ್ಲರ ಗಮನಸೆಳೆದಿತ್ತು.

ಇಷ್ಟಾದರೂ ಅವರು ದೇಶದ ಆರ್ಥಿಕ ಚೇತರಿಕೆಗೆ, ಆಹಾರ ಕೊರತೆ ನೀಗಿಸಲು ಅವರು ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಒಂದಲ್ಲ ಒಂದು ಕಾರಣಕ್ಕೆ ಮತ್ತೆಮತ್ತೆ ಅವರ ಆರೋಗ್ಯದ ಬಗ್ಗೆ ಅನುಮಾನಗಳು ಏಳುತ್ತಲೇ ಇವೆ.

ಜುಲೈ 24-27ರವರೆಗೆ ನಡೆದ ಕೊರಿಯನ್​ ಜನರ ಸೇನಾ ಸಮಾರಂಭದಲ್ಲಿ ಕಿಮ್​ ಪಾಲ್ಗೊಂಡಿದ್ದರು. ಆ ಕಾರ್ಯಕ್ರಮದ ಫೋಟೋಗಳನ್ನು ಸ್ಥಳೀಯ ಮಾಧ್ಯಮಗಳು ಪ್ರಕಟಿಸಿವೆ. ಅದರಲ್ಲಿ ಕಿಮ್​ ಜಾಂಗ್​ ಉನ್​ ತಲೆಯ ಹಿಂಭಾಗ ಪುಟ್ಟ ಬ್ಯಾಂಡೇಜ್​ ಇರುವುದು ಕಾಣಿಸುತ್ತಿದೆ ಅದರ ಹಿನ್ನೆಲೆಯಲ್ಲಿ ಕಿಮ್ ಜಾಂಗ್ ಉನ್‌ಗೆ ತಲೆಗೆ ಸಂಬಂಧಿಸಿದಂತಹ ತೊಂದರೆಯೇನಾದರೂ ಇರಬಹುದೇ ಎಂದು ಊಹಿಸಲಾಗುತ್ತಿದೆ.

ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಅವರ ಆರೋಗ್ಯ ಬಗ್ಗೆ ಕಳೆದ ವರ್ಷ ಭಾರೀ ಸುದ್ದಿಯಾಗಿತ್ತು. ಪ್ರತಿಸ್ಪರ್ಧಿ, ದಕ್ಷಿಣ ಕೊರಿಯಾ ಇದೀಗ ಮತ್ತೆ ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ಪ್ರಮುಖ ವದಂತಿಗಳನ್ನು ಹಬ್ಬಿಸುತ್ತಿದೆ.

ಕಿಮ್ ಜಾಂಗ್ ಉನ್ ಮತ್ತೆ ತೂಕ ಗಳಿಸಿಕೊಂಡಿದ್ದಾರೆಯೇ, ಉಸಿರಾಟಕ್ಕೆ ತೊಂದರೆಯಾಗುತ್ತಿದೆಯೇ, ಇತ್ತೀಚೆಗೆ ಸರ್ಕಾರದ ಪ್ರಮುಖ ಕಾರ್ಯಕ್ರಮಕ್ಕೆ ಅವರು ಏಕೆ ಗೈರಾಗಿದ್ದರು ಇತ್ಯಾದಿ ಪ್ರಶ್ನೆಗಳು ದಕ್ಷಿಣ ಕೊರಿಯಾದ್ಯಂತ ಈ 37 ವರ್ಷದ ನಾಯಕನ ಬಗ್ಗೆ ಹರಿದಾಡುವುದು ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಅವರು ಗಮನ ಸೆಳೆದಿದ್ದು ದೇಹದ ತೂಕ ಕಳೆದುಕೊಂಡ ಬಗ್ಗೆ.

ಕಿಮ್ ಅವರ ಆರೋಗ್ಯದ ಬಗ್ಗೆ ಸಿಯೋಲ್, ವಾಷಿಂಗ್ಟನ್, ಟೋಕ್ಯೋ ಮತ್ತು ಇತರ ವಿಶ್ವದ ರಾಷ್ಟ್ರಗಳ ರಾಜಧಾನಿಗಳಲ್ಲಿ ಸುದ್ದಿಯಾಗುತ್ತಿದೆ. ಕಿಮ್ ಅವರ ಆರೋಗ್ಯ ಅಷ್ಟು ಹದಗೆಟ್ಟಿದ್ದರೆ ಯುನೈಟೆಡ್ ಸ್ಟೇಟ್ಸ್ ಮತ್ತು ಅದರ ಮಿತ್ರ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡು ಮುಂದುವರಿಯುತ್ತಿರುವ ಪರಮಾಣು ಕಾರ್ಯಕ್ರಮವನ್ನು ನಿಯಂತ್ರಿಸುವ ಉತ್ತರಾಧಿಕಾರಿಯನ್ನು ಅವರು ಸಾರ್ವಜನಿಕವಾಗಿ ನೇಮಿಸುತ್ತಿರಲಿಲ್ಲ.

ನಾಯಕತ್ವದ ಆಂತರಿಕ ಕೆಲಸಗಳ ಬಗ್ಗೆ ಉತ್ತರ ಕೊರಿಯಾ ಯಾವತ್ತಿಗೂ ಬಹಿರಂಗವಾಗಿ ತೋರ್ಪಡಿಸಿಕೊಂಡಿಲ್ಲ. ಕಳೆದ ವರ್ಷ ಕೊರೋನಾ ವೈರಸ್ ಬಂದ ಮೇಲಂತೂ ಆಂತರಿಕ ಆಡಳಿತ ಇನ್ನೂ ಕಟ್ಟುನಿಟ್ಟಾಗಿದೆ. ಇತ್ತೀಚಿಗೆ ರಾಷ್ಟ್ರೀಯ ಮಾಧ್ಯಗಳಲ್ಲಿ ಬಂದ ವರದಿಯಂತೆ ಕಿಮ್ ಜಾಂಗ್ ಉನ್ ಬಹಳಷ್ಟು ತೂಕ ಕಳೆದುಕೊಂಡ ರೀತಿಯಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.

ಅವರ ವಾಚು ಕಟ್ಟುವ ಭಾಗದಲ್ಲಿ ಮತ್ತು ಮುಖದಲ್ಲಿನ ಗುರುತಿನಿಂದ ತೆಳ್ಳಗಾಗಿದ್ದಾರೆ ಎಂದು ಹೇಳಲಾಗುತ್ತಿದೆ. 170 ಸೆಂಟಿ ಮೀಟರ್ ಎತ್ತರ ಮತ್ತು 140 ಕೆಜಿ ತೂಕವಿದ್ದ ಕಿಮ್ ಈಗ 10ರಿಂದ 20 ಕೆಜಿ ಕಳೆದುಕೊಂಡಿರಬಹುದು ಎಂದು ಅಂದಾಜಿಸಲಾಗಿತ್ತು. ಆರೋಗ್ಯ ಸುಧಾರಿಸಿಕೊಳ್ಳಲು ಕಿಮ್ ತೂಕ ಕಳೆದುಕೊಂಡಿರಬಹುದು ಎಂದು ಭಾವಿಸಲಾಗುತ್ತಿದೆ.

ಅವರು ಅನಾರೋಗ್ಯ ಹೊಂದಿದ್ದರೆ, ಕಳೆದ ವಾರ ವರ್ಕರ್ಸ್ ಪಾರ್ಟಿಯ ಕೇಂದ್ರ ಸಮಿತಿಯ ಸಮಗ್ರ ಸಭೆಯನ್ನು ಕರೆಯಲು ಸಾರ್ವಜನಿಕವಾಗಿ ಹೊರಬರುತ್ತಿರಲಿಲ್ಲ ಎಂದು ದಕ್ಷಿಣ ಕೊರಿಯಾದ ಹಿರಿಯ ವಿಶ್ಲೇಷಕ ಹಾಂಗ್ ಮಿನ್ ಹೇಳುತ್ತಾರೆ.

ಅತಿಯಾದ ಮದ್ಯ ಸೇವನೆ ಮತ್ತು ಧೂಮಪಾನದ ಚಟ ಹೊಂದಿರುವ ಕಿಮ್ ಅವರ ಕುಟುಂಬಸ್ಥರಿಗೆ ಹೃದಯ ಸಮಸ್ಯೆಯಿದೆ. ಉತ್ತರ ಕೊರಿಯಾ ಆಳಿದ್ದ ಅವರ ತಂದೆ ಮತ್ತು ತಾತ ಇಬ್ಬರೂ ಹೃದಯ ಸಮಸ್ಯೆಯಿಂದ ಅಸುನೀಗಿದ್ದರು. ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಅವರು ತೂಕ ಕಡಿಮೆ ಮಾಡಿಕೊಂಡಿರಬಹುದು ಎಂದು ಹೇಳಲಾಗುತ್ತಿದೆ.

English summary
North Korea's Kim Jong Un has appeared in recent days with a bandage about the size of a few postage stamps on the back of his head, in the latest episode to stoke speculation about the reclusive leader's health.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X