ಸರ್ವಾಧಿಕಾರಿಗೆ ಹೊಟ್ಟೆ ತುಂಬಾ ಊಟ.. ಪ್ರಜೆಗಳಿಗೆ ಉಪವಾಸ?
ಸಿಯೋಲ್: ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅಟ್ಟಹಾಸ ಮುಗಿಲುಮುಟ್ಟಿದೆ. ತನ್ನ ದೇಶದ ಪ್ರಜೆಗಳು ಹಸಿವಿನಿಂದ ಸಾಯುವಾಗಲೂ ಸರ್ವಾಧಿಕಾರಿ ಕಿಮ್ ಚೆನ್ನಾಗಿ ಎಣ್ಣೆ ಹೊಡೆಯುತ್ತಾ ಮೂಳೆ ಕಡಿದು ಆರಾಮವಾಗಿದ್ದಾನೆ. ಇಷ್ಟು ಪಾಪ ಮಾಡಿದ್ದರೆ ದೇವರು ಸುಮ್ಮನೆ ಬಿಡ್ತಾನಾ? ಅದಕ್ಕೆ ಈಗ ಬರಬಾರದ ಕಾಯಿಲೆ ವಕ್ಕರಿಸಿದೆ ಸರ್ವಾಧಿಕಾರಿಗೆ!
ಅಂದಹಾಗೆ ಕಿಮ್ ಜಾಂಗ್ ಉನ್ ಮನೆಯವರಿಗೆ ಹಲವು ಕಾಯಿಲೆ ಕಾಡುತ್ತಲೇ ಬಂದಿವೆ. ಅದರಲ್ಲೂ ದಡೂತಿ ದೇಹ ಕಿಮ್ ಫ್ಯಾಮಿಲಿಗೆ ಬಂದಿರುವ ಶಾಪ. ಇದೇ ಕಾರಣಕ್ಕೆ ಕಿಮ್ ಪರದಾಡುತ್ತಿದ್ದ. ಕೆಲವು ತಿಂಗಳ ಹಿಂದೆ ಫುಲ್ ಟ್ರೀಟ್‌ಮೆಂಟ್ ಪಡೆದು ಸ್ಲಿಮ್ ಆಗಿದ್ದ ಈ ಸರ್ವಾಧಿಕಾರಿ. ಆದರೆ ಈಗ ಮತ್ತೆ ಎಣ್ಣೆ ಚಟ ಹಾಗೂ ಧೂಮಪಾನ ಮಾಡುತ್ತಾ ದಪ್ಪಗೆ ಆಗಿದ್ದಾನೆ. ಈಗ ಕಿಮ್ ಜಾಂಗ್ ಉನ್ ತೂಕ ಎಷ್ಟು ಗೊತ್ತಾ? ಮುಂದೆ ಓದಿ.

140 ಕೆ.ಜಿ. ತೂಗುತ್ತಿದ್ದಾನೆ ಕಿಮ್!
ಹೌದು, ಕಿಮ್ ಜಾಂಗ್ ಉನ್ ಈಗ ಬರೋಬ್ಬರಿ 140 ಕೆ.ಜಿ. ತೂಗುತ್ತಿದ್ದಾನೆ. ಇಷ್ಟೊಂದು ದಡೂತಿ ದೇಹ ಇಟ್ಟುಕೊಂಡಿರುವ ಕಿಮ್‌ಗೆ ವೆರೈಟಿ ವೆರೈಟಿ ಕಾಯಿಲೆಗಳು ವಕ್ಕರಿಸುತ್ತಿವೆ. ಅದರಲ್ಲೂ ಬಿಪಿ ಡಬಲ್ ಆಗಿದ್ದು, ಶುಗರ್ ಲೆವೆಲ್ ಕೂಡ ಭಾರಿ ಏರಿಕೆ ಕಂಡಿದೆಯಂತೆ. ಹೀಗಾಗಿ ಕಿಮ್ ಜಾಂಗ್ ಉನ್ ಆರೋಗ್ಯದ ಬಗ್ಗೆ ಆತನ ಕುಟುಂಬಕ್ಕೆ ಚಿಂತೆ ಕಾಡುತ್ತಿದೆ. ಆದರೆ ಉತ್ತರ ಕೊರಿಯಾ ಜನ ಮಾತ್ರ ಈತ ಸತ್ತರೆ ಒಳ್ಳೆಯದು ಅಂದುಕೊಳ್ತಿದ್ದಾರೆ.
ಬರೀ ತಿನ್ನು, ಕುಡಿ, ಮಿಸೈಲ್ ಹಾರಿಸು!
ಕಿಮ್ ಜಾಂಗ್ ಉನ್ ತನ್ನ ದೇಶದಲ್ಲಿ ಆಡಳಿತ ಸುಧಾರಣೆಗೆ ಕ್ರಮ ಕೈಗೊಳ್ಳುತ್ತಿಲ್ಲ. ಇದು ಬಿಟ್ಟು ಬೇರೆ ಎಲ್ಲದನ್ನೂ ಮಾಡ್ತಿದ್ದಾನೆ. ತಿನ್ನೋದು, ಕುಡಿಯೋದು, ಪದೇ ಪದೆ ಹೊಸ ಹೊಸ ಮಿಸೈಲ್ಸ್ ಹಾರಿಸಿ ಶತ್ರುಗಳಿಗೆ ಬೆದರಿಕೆ ಹಾಕೋದು. ಇಷ್ಟೇ ಕಿಮ್ ಜಾಂಗ್ ಉನ್‌ನ ಜೀವನ ಆಗೋಗಿದೆ. ಇದರ ನಡುವೆ ಉತ್ತರ ಕೊರಿಯಾ ನರಳಾಡಿ ಹೋಗುತ್ತಿದ್ದು, ಜನರು ನಿತ್ಯ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಆದ್ರೂ ಈತನಿಗೆ ಚಿಂತೆಯೇ ಇಲ್ಲ.

ಕಿಮ್ ಹಾರಿಸಿದ್ದ ಉಪಗ್ರಹ ಉಡೀಸ್!
ಅಂದಹಾಗೆ ನಿನ್ನೆ ಬೆಳಗ್ಗೆ 6.27ಕ್ಕೆ ಉತ್ತರ ಫಿಯೋಂಗನ್ ಪ್ರಾಂತ್ಯ, ಚೋಲ್ಸನ್ ಕೌಂಟಿಯ ಸೋಹೆ ಉಪಗ್ರಹ ಉಡಾವಣಾ ಮೈದಾನದಿಂದ ಉತ್ತರ ಕೊರಿಯಾದ ಮೊದಲ ಸೇನಾ ಉಪಗ್ರಹ ಹೊತ್ತಿದ್ದ ರಾಕೆಟ್ ಉಡಾವಣೆ ಆಗಿತ್ತು. ಆದರೆ ಹೀಗೆ ಲಾಂಚ್ ಮಾಡಿದ ಕೆಲವೇ ನಿಮಿಷದಲ್ಲಿ ಅದು ಸಮುದ್ರಕ್ಕೆ ಬಿದ್ದು ಹೋಗಿತ್ತು. ಸುದ್ದಿ ತಿಳಿಯುತ್ತಿದ್ದಂತೆ ಸರ್ವಾಧಿಕಾರಿ ಕಿಮ್ ಎಲ್ಲರ ಮೇಲೆ ಕೂಗಾಡಿದ್ದಾನೆ. ಇದು ಕೂಡ ಕಿಮ್ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಯಾರ ಹೆಣ ಬೀಳಿಸುತ್ತಾನೋ ಗೊತ್ತಿಲ್ಲ!
ಚೋಲಿಮಾ-1 ರಾಕೆಟ್ ಮೊದಲ ಹಂತದ ಹಾರಾಟವನ್ನ ಸುಲಭವಾಗಿ ಪೂರ್ಣಗೊಳಿಸಿ, 2ನೇ ಹಂತದಲ್ಲಿ ಇಂಜಿನ್ ಕೈಕೊಟ್ಟ ಪರಿಣಾಮ ಸರ್ವಾಧಿಕಾರಿ ಲೆಕ್ಕಾಚಾರ ಉಲ್ಟಾ ಆಗಿದೆ. ಇದೇ ಕಾರಣಕ್ಕೆ ತಕ್ಷಣ ಕಿಮ್ ದೇಶ ನಿರ್ಮಿಸಿದ್ದ ಕನಸಿನ ಉಪಗ್ರಹ ಸಮುದ್ರಕ್ಕೆ ಬಿದ್ದಿತ್ತು. ಸುದ್ದಿ ಕೇಳಿ ಸರ್ವಾಧಿಕಾರಿ ಕೂಗಾಡಿದ್ದು, ಕೆಲವು ವಿಜ್ಞಾನಿಗಳಿಗೆ ಎಚ್ಚರಿಕೆ ನೀಡಿದ್ದಾನೆ ಎಂದು ಕೂಡ ಆರೋಪಿಸಲಾಗಿದೆ. ಹೀಗಾಗಿ ಉಪಗ್ರಹ ಉಡಾವಣೆ ವಿಚಾರಕ್ಕೆ ಯಾರ ಹೆಣ ಬೀಳುತ್ತೋ ಗೊತ್ತಿಲ್ಲ.

ಕಿಮ್ ಜಾಂಗ್ ಉನ್ ರಾಕ್ಷಸ!
ಕಿಮ್ ಅನ್ನೋ ಸರ್ವಾಧಿಕಾರಿ ಅಕ್ಷರಶಃ ರಾಕ್ಷಸ. ಈತ ಎಷ್ಟು ಕೂರಿ ಅಂದ್ರೆ ತನ್ನ ದೇಶದ ಅಧಿಕಾರಿಗಳನ್ನ ಒಂದೇ ಮಾತಿಗೆ ಕೊಂದು ಬಿಸಾಡುತ್ತಾನೆ. ಸ್ವತಃ ಈತನ ಚಿಕ್ಕಪ್ಪನ ಹಸಿದ ನಾಯಿಗೆ ಹಾಕಿದ್ದ. ತನ್ನ ಸಭೆಯಲ್ಲಿ ನಿದ್ದೆ ಮಾಡಿದ ಅಂತಾ ಹಸಿದ ನಾಯಿಗಳಿಗೆ ಕಿಮ್ ಜಾಂಗ್ ಉನ್ ತನ್ನ ಚಿಕ್ಕಪ್ಪ & ಉತ್ತರ ಕೊರಿಯಾದ ಅಧಿಕಾರಿ ಆಗಿದ್ದವನನ್ನ ಬಲಿ ನೀಡಿದ್ದ. ಈಗ ಕಿಮ್ ಉಡಾಯಿಸಿದ ಮೊದಲನೇ ಮಿಲಿಟರಿ ಉಪಗ್ರಹ ಹಾಳಾಗಿ ನೀರಿಗೆ ಬಿದ್ದಿದೆ. ಅದೇ ಕಾರಣಕ್ಕೆ ಭಯವೂ ಶುರುವಾಗಿದೆ.












Click it and Unblock the Notifications