ರಷ್ಯಾಗೆ ಬೆಂಬಲ ಘೋಷಿಸಿದ ಉತ್ತರ ಕೊರಿಯಾ ಸರ್ವಾಧಿಕಾರಿ!

ಮಾಸ್ಕೋ: ಉಕ್ರೇನ್ & ರಷ್ಯಾ ಮಧ್ಯೆ ಭೀಕರ ಯುದ್ಧ ನಡೆಯುವ ಸಂದರ್ಭದಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ಮಹತ್ವದ ಘೋಷಣೆ ಮಾಡಿದ್ದಾನೆ. ಅಮೆರಿಕ ಮತ್ತು ನ್ಯಾಟೋ ಸಮಾನ ಶತ್ರು ಕಿಮ್ ಜಾಂಗ್ ಉನ್ ರಷ್ಯಾಗೆ ತನ್ನ ಸಂಪೂರ್ಣ ಬೆಂಬಲ ಘೋಷಿಸಿದ್ದಾನೆ. ಈ ಮೂಲಕ ರಷ್ಯಾ & ಉಕ್ರೇನ್ ಯುದ್ಧ ಮತ್ತೊಂದು ಮಹತ್ವದ ಹಂತ ತಲುಪಿದೆ.

ಒಂದು ಕಡೆ ಉಕ್ರೇನ್ ಡ್ಯಾಂ ಬ್ಲಾಸ್ಟ್ ಆಗಿದೆ, ಇನ್ನೊಂದ್ಕಡೆ ರಷ್ಯಾ ಮೇಲೆ ಉಕ್ರೇನ್ ಸೇನೆ ಯಾವುದೇ ಕ್ಷಣದಲ್ಲಿ ದಾಳಿ ನಡೆಸುವ ಸಾಧ್ಯತೆ ಇದೆ. ಈ ಹೊತ್ತಲ್ಲಿ ರಷ್ಯಾ ಕೂಡ ಚೀನಾ ಬೆಂಬಲ ಪಡೆದು ಯುದ್ಧ ಮುಂದುವರಿಸಿದೆ. ಇದೀಗ ರಷ್ಯಾಗೆ ಬೆನ್ನೆಲುಬಾಗಿ ನಾನು ಕೂಡ ನಿಲ್ಲುತ್ತೇನೆ ಅಂತಾ ಉತ್ತರ ಕೊರಿಯಾ ಸರ್ವಾಧಿಕಾರಿ ಮುಂದಾಗಿದ್ದಾನೆ. ಈ ಕುರಿತು ಕಿಮ್ ಜಾಂಗ್ ಉನ್ ಮಹತ್ವದ ಹೇಳಿಕೆ ನೀಡಿದ್ದು, ರಷ್ಯಾ & ಉಕ್ರೇನ್ ಯುದ್ಧದಲ್ಲಿ ನ್ಯಾಯಕ್ಕೆ ಗೆಲುವು ಸಿಗಲಿದೆ. ಯುದ್ಧದಲ್ಲಿ ರಷ್ಯಾ ಸೇನೆ ಜಯ ಸಾಧಿಸುತ್ತೆ ಎಂದಿದ್ದಾನೆ ಸರ್ವಾಧಿಕಾರಿ (Russia Ukraine War).

Kim Jong Un supports to Russia

ಸರ್ವಾಧಿಕಾರಿ ಸಂಪೂರ್ಣ ಬೆಂಬಲ ರಷ್ಯಾಗೆ!

ರಷ್ಯಾದ ರಾಷ್ಟ್ರೀಯ ದಿನಾಚರಣೆ ಹಿನ್ನೆಲೆ ಉ.ಕೊರಿಯಾದ ಅಧ್ಯಕ್ಷ ಮತ್ತು ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ವಿಶೇಷ ಸಂದೇಶ ನೀಡಿದ್ದಾನೆ. ಕಿಮ್ ಸ್ನೇಹಿತ ಪುಟಿನ್ ಬಗ್ಗೆ ಹೆಮ್ಮೆ ಪಡುವ ಮಾತನಾಡಿದ್ದಾನೆ ಸರ್ವಾಧಿಕಾರಿ. ಇಲ್ಲಿ ನ್ಯಾಯ ಗೆಲ್ಲುವುದು ಖಚಿತ ಮತ್ತು ರಷ್ಯಾ ವಿಜಯದ ಇತಿಹಾಸಕ್ಕೆ ಮತ್ತೊಂದು ವೈಭವ ಸೇರ್ಪಡೆಯಾಗಲಿದೆ ಎಂದಿದ್ದಾನೆ ಕಿಮ್. ಈ ಮೂಲಕ ಉಕ್ರೇನ್ ವಿರುದ್ಧ ರಷ್ಯಾ ಗೆಲ್ಲುವುದು ಗ್ಯಾರಂಟಿ ಎಂದು ಕಿಮ್ ಜಾಂಗ್ ಉನ್ ಭವಿಷ್ಯ ನುಡಿದಿದ್ದಾನೆ. ಆದರೆ ಈ ಹೇಳಿಕೆ ಅಮೆರಿಕ ಮತ್ತು ನ್ಯಾಟೋ ಪಡೆಗಳ ಕೋಪ ಹೆಚ್ಚಾಗುವಂತೆ ಮಾಡಿದೆ (Kim Jong Un).

ಶಾಂತಿ ಸಂದೇಶ ಕಳುಹಿಸಿದ್ದ ಸರ್ವಾಧಿಕಾರಿ!

ರಷ್ಯಾ ರಾಷ್ಟ್ರೀಯ ದಿನಕ್ಕೆ ಮಾತ್ರವಲ್ಲ, ರಷ್ಯಾ ವಿಕ್ಟರಿ ಡೇ ಅಂದರೆ ಮೇ 9ರ ವಿಜಯದಿನ ಸಂಭ್ರಮದ ಹೊತ್ತಲ್ಲೂ ವಿಶೇಷ ಸಂದೇಶ ಕಳಿಸಿದ್ದ ಕಿಮ್ ಜಾಂಗ್ ಉನ್. ತನ್ನ ಸ್ನೇಹಿತ ರಾಷ್ಟ್ರ ರಷ್ಯಾಗೆ ಸ್ಪೆಷಲ್ ಸಂದೇಶ ಕೊಟ್ಟಿದ್ದ. ವಿಶ್ವ ಶಾಂತಿ ಕಾಪಾಡುವ ಪವಿತ್ರ ಹೋರಾಟಕ್ಕೆ ನಾವು ನಿಮಗೆ, ರಷ್ಯಾ ಸೇನೆಗೆ ಹಾಗೂ ರಷ್ಯಾ ಜನರಿಗೆ ಹೃತ್ಪೂರ್ವಕ ಶುಭಾಶಯ ತಿಳಿಸುತ್ತೇವೆ ಎಂದಿದ್ದ ಕಿಮ್ ಜಾಂಗ್ ಉನ್. ಈ ಮೂಲಕ ರಷ್ಯಾ ಸೇನೆ ಹಿಟ್ಲರ್ ವಿರುದ್ಧ ಗೆದ್ದ ಸಂಭ್ರಮ ತಾನೂ ಸಂಭ್ರಮಿಸಿದ್ದ ಸರ್ವಾಧಿಕಾರಿ. ಇದೀಗ ಮತ್ತೆ ರಷ್ಯಾ ದೇಶದ ರಾಷ್ಟ್ರೀಯ ದಿನಕ್ಕೂ ವಿಶೇಷ ಸಂದೇಶ ನೀಡಿದ್ದಾನೆ.

Kim Jong Un supports to Russia

ಉತ್ತರ ಕೊರಿಯಾಗೆ ರಷ್ಯಾ ಬಲ!

ಅಮೆರಿಕ ವಿರುದ್ಧ ಇರುವ ರಾಷ್ಟ್ರಗಳು ಬಹುತೇಕ ರಷ್ಯಾ ಅಥವಾ ಚೀನಾ ಜೊತೆಗೆ ಸೇರುತ್ತಿವೆ. ಈ ಪೈಕಿ ಉ.ಕೊರಿಯಾ ಮೊದಲಿನದ್ದು ಎನ್ನಬಹುದು. ಅಮೆರಿಕ & ಅಮೆರಿಕ ಸ್ನೇಹಿತರನ್ನ ಕ್ಷಿಪಣಿಗಳ ಮೂಲಕ ಹೆದರಿಸುತ್ತಾನೆ ಉ.ಕೊರಿಯಾ ಸರ್ವಾಧಿಕಾರಿ. ಇಂತಿಪ್ಪ ಕಿಮ್ ಜಾಂಗ್ ಉನ್, ರಷ್ಯಾ ವಿಚಾರದಲ್ಲಿ ಮಾತ್ರ ಮಗು ಮನಸ್ಸಿನವನು. ಈಗಲೂ ಅಷ್ಟೇ ತನ್ನ ಸ್ನೇಹಿತ ರಾಷ್ಟ್ರಕ್ಕೆ ಶುಭಾಶಯ ಕೋರಿ ಜಗತ್ತಿನ ಗಮನ ಸೆಳೆದಿದ್ದಾನೆ. ಅಲ್ಲದೆ ಉಕ್ರೇನ್ ಯುದ್ಧದಲ್ಲಿ ರಷ್ಯಾಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾನೆ ಕಿಮ್ ಜಾಂಗ್ ಉನ್.

ಉಕ್ರೇನ್ ಸುದ್ದಿಸಂಸ್ಥೆ ಮಾಹಿತಿ ಪ್ರಕಾರ 2,16,180 ಸೈನಿಕರನ್ನ ರಷ್ಯಾ ಕಳೆದುಕೊಂಡಿದೆ. ಉಕ್ರೇನ್ ಸೇನೆ ಅಂದಾಜಿನಂತೆ 2 ಲಕ್ಷಕ್ಕೂ ಹೆಚ್ಚು ರಷ್ಯಾ ಸೈನಿಕರು ಮೃತಪಟ್ಟಿದ್ದಾರೆ. ಹಾಗೇ ಕಳೆದ ಒಂದೇ ದಿನದಲ್ಲಿ ರಷ್ಯಾದ 540 ಜನರನ್ನ ಹತ್ಯೆ ಮಾಡಿರುವುದಾಗಿ ಉಕ್ರೇನ್ ತಿಳಿಸಿದೆ ಎಂದು ವೆಬ್‌ಸೈಟ್ ವರದಿ ಮಾಡಿದೆ. ಈ ಮೂಲಕ ರಷ್ಯಾ, ಉಕ್ರೇನ್ ನಡುವಿನ ಯುದ್ಧ ಹತ್ತು ಲಕ್ಷಕ್ಕೂ ಹೆಚ್ಚು ಜನರ ಜೀವ ಬಲಿ ಪಡೆದಂತಾಗಿದೆ. ಈ ಸ್ಥಿತಿ ನೋಡಿದರೆ ಉಕ್ರೇನ್ ದಾಳಿ ಎದುರಿಸಲು ರಷ್ಯಾ ಪರಮಾಣು ಅಸ್ತ್ರ ಬಳಸುವ ಸಾಧ್ಯತೆ ಹೆಚ್ಚಾಗಿದೆ. ಈ ಹೊತ್ತಲ್ಲಿ ಉತ್ತರ ಕೊರಿಯಾ ಸರ್ವಾಧಿಕಾರಿ ರಷ್ಯಾಗೆ ಬೆಂಬಲ ಘೋಷಿಸಿರುವ ವಿಶೇಷ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+