Earthquake in Nepal: ನೇಪಾಳದ ಕಠ್ಮಂಡು ಕಣಿವೆಯಲ್ಲಿ 6.1 ತೀವ್ರತೆಯ ಭೂಕಂಪ

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಮತ್ತೊಮ್ಮೆ ಭೂಕಂಪನವಾಗಿದೆ. ರಿಕ್ಟರ್ ಮಾಪಕದಲ್ಲಿ 6.1 ತೀವ್ರತೆಯ ಭೂಕಂಪ ದಾಖಲಾಗಿದೆ. ಧಾಡಿಂಗ್‌ ಅನ್ನು ಭೂಕಂಪನದ ಕೇಂದ್ರಬಿಂದು ಎಂದು ರಾಷ್ಟ್ರೀಯ ಭೂಕಂಪ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್ ತಿಳಿಸಿದೆ.

ಬೆಳಿಗ್ಗೆ 7:39 ಕ್ಕೆ ಭೂಕಂಪವು ದಾಖಲಾಗಿದೆ ಮತ್ತು ಅದರ ಕಂಪನಗಳು ಬಾಗ್ಮತಿ ಮತ್ತು ಗಂಡಕಿ ಪ್ರಾಂತ್ಯಗಳ ಇತರ ಜಿಲ್ಲೆಗಳಲ್ಲಿ ಅನುಭವವಾಗಿದೆ. ಕಂಪನದಿಂದ ಯಾವುದೇ ಸಾವು ಅಥವಾ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

Kathmandu Valley Struck by 6.1 Magnitude Earthquake in Nepal

ನೇಪಾಳದಲ್ಲಿ ಭೂಕಂಪವು ಸಾಮಾನ್ಯ ಸಂಗತಿಯಾಗಿದೆ. ಟಿಬೆಟಿಯನ್ ಮತ್ತು ಭಾರತೀಯ ಟೆಕ್ಟೋನಿಕ್ ಪ್ಲೇಟ್‌ಗಳು ಸಂಧಿಸುವ ಸ್ಥಳದಲ್ಲಿ ಅಪ್ಪಳಿಸುತ್ತವೆ ಮತ್ತು ಪ್ರತಿ ಶತಮಾನಕ್ಕೂ ಎರಡು ಮೀಟರ್‌ಗಳು ಒಂದಕ್ಕೊಂದು ಹತ್ತಿರವಾಗುತ್ತವೆ, ಇದು ಭೂಕಂಪಗಳ ರೂಪದಲ್ಲಿ ಬಿಡುಗಡೆಯಾಗುವ ಒತ್ತಡಕ್ಕೆ ಕಾರಣವಾಗುತ್ತದೆ.

2015 ರಲ್ಲಿ, 7.8 ತೀವ್ರತೆಯ ಭೂಕಂಪ ಮತ್ತು ನಂತರದಲ್ಲಿ ಆದ ಅವಘಡದಲ್ಲಿ ಸುಮಾರು 9 ಸಾವಿರ ಜನ ಪ್ರಾಣ ಕಳೆದುಕೊಂಡರು. ಸರ್ಕಾರದ ವಿಪತ್ತಿನ ನಂತರದ ಅಗತ್ಯಗಳ ಮೌಲ್ಯಮಾಪನ (PDNA) ವರದಿಯು ಗಮನಿಸಿದಂತೆ, ನೇಪಾಳವು ವಿಶ್ವದ 11 ನೇ ಅತಿ ಹೆಚ್ಚು ಭೂಕಂಪನ ಪೀಡಿತ ರಾಷ್ಟ್ರವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+