ರಷ್ಯಾ ಮೇಲೆ ಉಕ್ರೇನ್ ಡ್ರೋನ್ ಅಟ್ಯಾಕ್- ಭಾರತೀಯ ಸಂಸದರಿಗೆ ಆಘಾತ!

ಯುದ್ಧದ ಬಲೆಯಲ್ಲಿ ಸಿಲುಕಿ ನರಳುತ್ತಿರುವ ರಷ್ಯಾ & ಉಕ್ರೇನ್ ಈಗ ಬೇರೆ ದೇಶಗಳಿಗೆ ಕೂಡ ತಲೆನೋವು ತರಿಸಿವೆ. ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಬೇಕು ಎಂಬ ಹಠದಲ್ಲಿ ಅಮೆರಿಕ ಏನೆಲ್ಲಾ ಪ್ರಯತ್ನ ಮಾಡಿದರೂ ಪ್ರಯೋಜನ ಆಗುತ್ತಿಲ್ಲ, ಇಂತಹ ಸಮಯದಲ್ಲಿ ಭಾರತದ ನಾಯಕರು ಕೂಡ ರಷ್ಯಾ & ಉಕ್ರೇನ್ ಯುದ್ಧ ನಿಲ್ಲಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ವೇಳೆ ಆಘಾತಕಾರಿ ಸುದ್ದಿಯೊಂದು ಇದೀಗ ಹೊರ ಬಿದ್ದಿದೆ.

ಹೌದು, ರಷ್ಯಾ ರಾಜಧಾನಿ ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ದಿಢೀರ್ ಅಂತಾ ಉಕ್ರೇನ್ ಡ್ರೋನ್ ದಾಳಿ ಆರಂಭಿಸಿದೆ. ಹೀಗೆ ಉಕ್ರೇನ್ ಡ್ರೋನ್ ದಾಳಿ ಶುರು ಮಾಡಿದ ನಂತರದಲ್ಲಿ ದೊಡ್ಡ ಅವಘಡ ನಡೆದು ಹೋಗಿದ್ದು, ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ ಕಾರಣ ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ. ಹೀಗಿದ್ದಾಗ ಭಾರತ ಮೂಲದ ಸಂಸದರು ಕೂಡ ಈ ಸಮಯದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಡಿಎಂಕೆ ನಾಯಕಿ ಕನಿಮೋಳಿ ಅವರ ನೇತೃತ್ವದ ಸರ್ವಪಕ್ಷ ನಿಯೋಗ ಪ್ರಯಾಣಿಸ್ತಿದ್ದ ವಿಮಾನ ಕೂಡ ಇದೇ ರೀತಿ ಸಂಕಷ್ಟಕ್ಕೆ ಸಿಲುಕಿಬಿಟ್ಟಿತ್ತು. ಹಾಗಾದ್ರೆ ಮುಂದೆ ಏನಾಯ್ತು? ಭಾರತದ ಸಂಸದರು ಸೇಫ್ ಆಗಿ ಲ್ಯಾಂಡ್ ಆದ್ರಾ?

Kanimozhi-led Indian MP Delegation Circles Moscow Sky After Drone Attack

ಭಾರತೀಯ ಸಂಸದರಿಗೂ ಸಂಕಷ್ಟದ ಸ್ಥಿತಿ!

2022ರ ಫೆಬ್ರವರಿ ತಿಂಗಳಲ್ಲಿ ಶುರುವಾಗಿದ್ದ ರಷ್ಯಾ & ಉಕ್ರೇನ್ ಯುದ್ಧ, ಬರೋಬ್ಬರಿ 3 ವರ್ಷ ಪೂರೈಸಿ 4ನೇ ವರ್ಷದಲ್ಲಿ ಮುನ್ನಡೆಯುತ್ತಿದೆ. ಈ ಯುದ್ಧ ಭಾರಿ ಸಂಚಲನ ಸೃಷ್ಟಿ ಮಾಡಿರುವ ಸಮಯದಲ್ಲೇ ಮತ್ತೆ ರಷ್ಯಾ & ಉಕ್ರೇನ್ ಸೇನೆಗಳು ಒಬ್ಬರ ಮೇಲೆ ಮತ್ತೊಬ್ಬರು ಭೀಕರ ದಾಳಿಗೆ ಮುಂದಾಗಿದ್ದರು. ಇದು ಗಡಿ ಭಾಗದಲ್ಲಿ ಹೆಚ್ಚಾಗುತ್ತಿರುವ ಸೂಕ್ಷ್ಮ ಪರಿಸ್ಥಿತಿಗೆ ಹಿಡಿದ ಕೈಗನ್ನಡಿ ಆಗಿತ್ತು. ಆದರೆ ಉಕ್ರೇನ್ ಇನ್ನೂ ಒಂದು ಹೆಜ್ಜೆ ಮುಂದೆ ನುಗ್ಗಿದ್ದು ರಷ್ಯಾ ರಾಜಧಾನಿ ಮಾಸ್ಕೋ ಮೇಲೆ ಕೂಡ ಭೀಕರ ದಾಳಿ ಆರಂಭ ಮಾಡಿದೆ. ಇದರಿಂದ ಭಾರತೀಯ ಸಂಸದರು ಕೂಡ ಭಾರಿ ದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದರು.

ದಿಢೀರ್ ಎದುರಾಗಿತ್ತು ಘೋರ ಆಘಾತ!

ರಷ್ಯಾ ಸೇನೆ ಉಕ್ರೇನ್‌ ಹಾರಿಸಿದ್ದ 112 ಡ್ರೋನ್‌ಗಳನ್ನ ಹೊಡೆದುರುಳಿಸಿದೆ, ಇದಕ್ಕೂ ಮೊದಲು ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಭಾರಿ ದೊಡ್ಡ ಕಿಚ್ಚು ಹೊತ್ತಿಕೊಂಡಿತ್ತು. 112 ಡ್ರೋನ್‌ಗಳ ಪೈಕಿ 24 ಡ್ರೋನ್‌ಗಳು ಮಾಸ್ಕೋ ವಿಮಾನ ನಿಲ್ದಾಣದ ಕಡೆಗೆ ಬರುತ್ತಿದ್ದವು ಎನ್ನಲಾಗಿದೆ. ಈ ಹಿನ್ನೆಲೆ ಮಾಸ್ಕೋ ಸೇರಿ, ಸುತ್ತಮುತ್ತಲ ಪ್ರದೇಶದ ವಿಮಾನ ನಿಲ್ದಾಣಗಳಲ್ಲಿ ವಿಮಾನ ಹಾರಾಟ ದಿಢೀರ್ ಬಂದ್ ಆಗಿತ್ತು.

ಪರಿಸ್ಥಿತಿ ಹೀಗಿದ್ದಾಗ ಕನಿಮೋಳಿ ಸೇರಿ ಒಟ್ಟಾರೆ ಐವರು ಸಚಿವರು ಇದ್ದ ಸರ್ವಪಕ್ಷ ನಿಯೋಗದ ವಿಮಾನ ಕೂಡ ಮಾಸ್ಕೋ ವಿಮಾನ ನಿಲ್ದಾಣದಲ್ಲಿ ಇಳಿಯಲು ಪರದಾಡಿತು. ಅಂದಹಾಗೆ, ಸುಮಾರು 3 ಗಂಟೆ ಕಾಲ ಈ ರೀತಿ ವಿಮಾನ ಸುತ್ತಾಡಿ ನಂತರ ಲ್ಯಾಂಡ್ ಆಗಿದೆ. ಕನಿಮೋಳಿ ಮತ್ತು ಇತರರ ತಂಡ ಆಪರೇಷನ್ ಸಿಂಧೂರ್ & ಭಯೋತ್ಪಾದನೆ ವಿರುದ್ಧದ ಭಾರತದ ಸಂದೇಶ ಸಾರಲು ಇಡೀ ಜಗತ್ತಿಗೆ ಹೊರಟಿತ್ತು. ಆದರೆ ಈ ರೀತಿ ಉಕ್ರೇನ್ ದಾಳಿ ಪರಿಣಾಮ ಭಯದ ವಾತಾವರಣ ಎದುರಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+