Kamala Harris: ದೊಡ್ಡಣ್ಣ ಅಮೆರಿಕದಲ್ಲೂ ಶುರುವಾಯ್ತು ‘ಐಯೋ ತಗಡೇ’ ವಾರ್!

ಭಾರತ ಮೂಲದ ಕಮಲಾ ಹ್ಯಾರಿಸ್ ಈ ಬಾರಿ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದು ಅಮೆರಿಕ ದೇಶವನ್ನ ಆಳುವುದು ಬಹುತೇಕ ಪಕ್ಕಾ ಎಂಬ ಮಾತುಗಳು ಕೇಳಿಬರುತ್ತಿವೆ. ಬ್ರಿಟನ್ ದೇಶವನ್ನ ಭಾರತ ಮೂಲದ ರಿಷಿ ಸುನಕ್ ಅವರು ಆಳಿದ ರೀತಿ, ಅಮೆರಿಕದಲ್ಲೂ ಭಾರತೀಯ ವ್ಯಕ್ತಿಗೆ ಅಧಿಕಾರ ಸಿಗುವುದು ಬಹುತೇಕ ಗ್ಯಾರಂಟಿ ಆಗಿದೆ. ಈ ಸಮಯದಲ್ಲೇ ಮಾಜಿ ಅಧ್ಯಕ್ಷ & ವಿವಾದಗಳ ಸರದಾರ ಡೊನಾಲ್ಡ್ ಟ್ರಂಪ್ ಅವರಿಗೆ ಭಾರತ ಮೂಲದ ಕಮಲಾ ಹ್ಯಾರಿಸ್ ಗುದ್ದು ಕೊಟ್ಟಿದ್ದಾರೆ!

ಅಮೆರಿಕದ ಚುನಾವಣೆ ಶುರುವಾದ ನಂತರ ಜಗತ್ತು 'ದೊಡ್ಡಣ್ಣ' ಅಮೆರಿಕದ ಮೇಲೆ ಕಣ್ಣಿಟ್ಟು ಕಾಯುತ್ತಿದೆ. ಯಾಕಂದ್ರೆ ಅಮೆರಿಕ ಎಲೆಕ್ಷನ್ ಜಾಗತಿಕ ಮಟ್ಟದಲ್ಲಿ ದೊಡ್ಡ ಪ್ರಭಾವ ಬೀರುತ್ತೆ. ಹೀಗಿದ್ದಾಗ ಅಮೆರಿಕದ ಹಾಲಿ ಅಧ್ಯಕ್ಷ ಜೋ ಬೈಡನ್ ಅಧ್ಯಕ್ಷೀಯ ಚುನಾವಣೆ ಕಣದಿಂದ ಹೊರಗೆ ಬಂದಿದ್ದಾರೆ. ಪರಿಸ್ಥಿತಿ ಹೀಗಿದ್ದಾಗ ಭಾರತ ಮೂಲದ ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ನಡುವೆ ಭರ್ಜರಿ ಯುದ್ದ ಶುರುವಾಗಿದೆ. ಇದೇ ಸಮಯದಲ್ಲಿ ಟ್ರಂಪ್ ವಿರುದ್ಧ ಕಮಲಾ ಹ್ಯಾರಿಸ್ 'ಐಯೋ ತಗಡೇ' ಎಂಬಂತೆ ಭಾಷಣ ಕೂಡ ಮಾಡಿದ್ದಾರೆ!

Kamala Harris Said That She Will Definitely Win Against Donald Trump In 2024 November Election

'ಐಯೋ ತಗಡೇ' ವಾರ್ ಜೋರು!

ಡೊನಾಲ್ಡ್ ಟ್ರಂಪ್ ಅಮೆರಿಕ ಕಂಡ ಅತ್ಯಂತ ವಿವಾದಾತ್ಮಕ ಅಧ್ಯಕ್ಷ ಎನ್ನಬಹುದು. ಕೊರೊನಾ ಬಂದಾಗ ಒಂದು ಮಾಸ್ಕ್ ಹಾಕುವ ವಿಚಾರಕ್ಕೆ ದೊಡ್ಡ ರಾದ್ಧಾಂತ ಮಾಡಿದ್ದ ಪುಣ್ಯಾತ್ಮ ಡೊನಾಲ್ಡ್ ಟ್ರಂಪ್. ಹೀಗೆ ಎಲ್ಲಾ ಕಡೆಯೂ ವಿವಾದದ ಬಿರುಗಾಳಿ ಎಬ್ಬಿಸಿದ್ದ ಡೊನಾಲ್ಡ್ ಟ್ರಂಪ್ ಇದೀಗ ಮತ್ತೊಮ್ಮೆ ಅಮೆರಿಕದ ಅಧ್ಯಕ್ಷರಾಗಲು ಸಜ್ಜಾಗಿದ್ದಾರೆ. ಆದರೆ, ಡೊನಾಲ್ಡ್ ಟ್ರಂಪ್‌ಗೆ ಮಹಿಳಾ ಪೀಡಕ, ಭ್ರಷ್ಟ, ಅಸಮರ್ಥ ಎಂಬ ಪಟ್ಟ ಕಟ್ಟಿರುವ ಕಮಲಾ ಹ್ಯಾರಿಸ್, ಚುನಾವಣೆಯಲ್ಲಿ ನಾನೇ ಗೆಲ್ಲುವುದು ಎಂದು ಘೋಷಿಸಿದ್ದಾರೆ. ಅಮೆರಿಕನ್ನರು ಕೂಡ ಕಮಲಾ ಹ್ಯಾರಿಸ್ ಅವರ ಪರ ಒಲವು ತೋರಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+