ಅಂತಿಂಥ ಹೆಣ್ಣು ನಾನಲ್ಲ... ಅಂತಿದ್ದಾರೆ ಕಮಲಾ ಹ್ಯಾರಿಸ್!

ಭಾರತೀಯರು ಜಗತ್ತನ್ನು ಆಳುವ ಹಂತಕ್ಕೆ ಬಂದು ನಿಂತಿದ್ದು, ಭಾರತ ಮೂಲದ ಹಲವರು ಈಗಾಗಲೇ ಪಾಶ್ಚಿಮಾತ್ಯ ದೇಶಗಳಲ್ಲಿ ತಮ್ಮ ಹವಾ ಇಟ್ಟಿದ್ದಾರೆ. ಈಗಾಗಲೇ ದೊಡ್ಡ ದೊಡ್ಡ ದೇಶಗಳಲ್ಲಿ ಭಾರತ ಮೂಲದವರು ಪ್ರಧಾನಿ, ಅಧ್ಯಕ್ಷರ ಸ್ಥಾನ ಗಿಟ್ಟಿಸಿದ್ದಾರೆ. ಹೀಗಿದ್ದಾಗಲೇ ಇದೇ ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದವರು ಆಯ್ಕೆ ಆಗುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಹೀಗೆ ಅಮೆರಿಕದ ಇತಿಹಾಸದಲ್ಲೇ ಹೊಸ ದಾಖಲೆ ನಿರ್ಮಾಣ ಮಾಡಲು ಕಮಲಾ ಹ್ಯಾರಿಸ್ ಸಜ್ಜಾಗಿದ್ದಾರೆ. ಇಂತಹ ಸಮಯದಲ್ಲೇ, ಮಹತ್ವದ ಹೇಳಿಕೆ ನೀಡಿದ್ದಾರೆ ಕಮಲಾ!

ಈಗಿರುವ ಮಾಹಿತಿ ಪ್ರಕಾರ ಡೊನಾಲ್ಡ್ ಟ್ರಂಪ್ ಅವರಿಗೆ ಅತಿಹೆಚ್ಚಾಗಿ ಬೆಂಬಲ ಸಿಗುತ್ತಿರುವುದು ಪುರುಷರಿಂದ. ಆದರೆ ಅಮೆರಿಕದ ಮಹಿಳಾ ಮತದಾರರ ಮನಸ್ಸು ಗೆಲ್ಲುವಲ್ಲಿ ಡೊನಾಲ್ಡ್ ಟ್ರಂಪ್ ಯಶಸ್ವಿ ಆಗಿಲ್ಲ ಎಂಬ ಮಾತು ಕೇಳಿಬರುತ್ತಿದೆ. ಮತ್ತೊಂದ್ಕಡೆ, ಆಫ್ರಿಕನ್ ಅಮೆರಿಕನ್ ಮತದಾರರ ವೋಟ್ ಹೆಚ್ಚಾಗಿ ಟ್ರಂಪ್ ಅವರಿಗೆ ಬೀಳುವುದಿಲ್ಲ. ಇಂತಹ ಸಮಯ ಕಮಲಾ ಹ್ಯಾರಿಸ್ ಅವರಿಗೆ ವರದಾನವಾಗಿ ಪರಿಣಮಿಸಿದೆ. ಅಲ್ಲದೆ ಇದನ್ನೇ ಅಸ್ತ್ರ ಮಾಡಿಕೊಂಡಿರುವ ಕಮಲಾ ಹ್ಯಾರಿಸ್ ಅದ್ಧೂರಿಯಾಗಿ ಚುನಾವಣಾ ಪ್ರಚಾರ ನಡೆಸುತ್ತಿದ್ದಾರೆ.

Kamala Harris Is Promised This To The American Voters About Her Administration

ಕಮಲಾ ಹ್ಯಾರಿಸ್ ಹೊಸ ಅಸ್ತ್ರ!

ಅಮೆರಿಕದಲ್ಲಿ ಒಂದು ಬಾರಿ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದ ಡೊನಾಲ್ಡ್ ಟ್ರಂಪ್ ವಿರುದ್ಧ 2020ರ ಚುನಾವಣೆ ಸಮಯದಲ್ಲಿ ಭಾರಿ ಅಸಮಾಧಾನ ಇತ್ತು. ಇದೇ ಕಾರಣಕ್ಕೆ ಡೊನಾಲ್ಡ್ ಟ್ರಂಪ್ ಅವರು ಜೋ ಬೈಡನ್ ಎದುರು ಸೋತು ಮನೆಗೆ ಹೋದರು. ಆದರೆ ಮತ್ತೊಮ್ಮೆ, ಅಮೆರಿಕದ ಅಧ್ಯಕ್ಷೀಯ ಸ್ಥಾನ ಪಡೆಯಬೇಕು ಎಂಬ ಹಠದಲ್ಲಿ ಟ್ರಂಪ್ ಹೋರಾಟ ಶುರು ಆಗಿದೆ. ಆದರೆ ಇದೇ ಸಮಯದಲ್ಲಿ ಕಮಲಾ ಹ್ಯಾರಿಸ್ ಹೊಸ ಅಸ್ತ್ರ ಪ್ರಯೋಗಿಸಿದ್ದಾರೆ.

ಆಧುನಿಕ ಕಾಲದ ಆಡಳಿತ ಗ್ಯಾರಂಟಿ!

ಹೌದು, ಇದೀಗ ಕಮಲಾ ಹ್ಯಾರಿಸ್ ಅವರು ಡೊನಾಲ್ಡ್ ಟ್ರಂಪ್ ವಿರುದ್ಧ ಪ್ರಚಾರ ಕಾರ್ಯ ನಡೆಸುವಾಗ ಬೇರೆಯದ್ದೇ ಬಾಂಬ್ ಸಿಡಿಸಿದ್ದಾರೆ. ನನ್ನ ಆಡಳಿತದಲ್ಲಿ ಜೋ ಬೈಡನ್ ಅವರ‌ ರೀತಿಯೇ ಆಗಲಿ ಅಥವಾ ಟ್ರಂಪ್‌ ರೀತಿಯಲ್ಲೇ ಆಗಲಿ ಇರುವುದಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ನಾನು ಆಧುನಿಕ ಕಾಲದ ಲೀಡರ್‌ಶಿಪ್ ಮೂಲಕ ಆಡಳಿತ ನಡೆಸಲಿದ್ದೇನೆ ಎನ್ನುವ ಮೂಲಕ ಸಂಚಲನ ಸೃಷ್ಟಿ ಮಾಡಿದ್ದಾರೆ. ಹಾಗೇ ಆಧುನಿಕ ಕಾಲದಲ್ಲಿ ಹೊಸ ಚಿಂತನೆ & ಆಲೋಚನೆಗಳ ಅಭಿವ್ಯಕ್ತಿಗೆ ನನ್ನನ್ನು ನಾನು ಹೊಂದಾಣಿಕೆ ಮಾಡಿಕೊಳ್ಳುವೆ ಎಂದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+