Kamala Harris: ಕಮಲಾ ಹ್ಯಾರಿಸ್ ಗೆಲುವು ಗ್ಯಾರಂಟಿ, ಟ್ರಂಪ್‌ಗೆ ಭಾರಿ ಹಿನ್ನಡೆ!
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಭಾರತ ಮೂಲದ ಮಹಿಳೆ ಅಧಿಕಾರ ಪಡೆಯುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ. ಭಾರತ ಮೂಲದ ಕಮಲಾ ಹ್ಯಾರಿಸ್ ಅವರು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ವಿರುದ್ಧ ಎಲ್ಲಾ ರೀತಿಯಲ್ಲೂ ಭರ್ಜರಿ ಜಯ ಸಾಧಿಸುವುದು ಪಕ್ಕಾ ಆಗಿದೆ. ಹಾಗಾದ್ರೆ ಈ ಸತ್ಯ ಹೇಳಿದ್ದು ಯಾರು? ಮುಂದೆ ಓದಿ.
ಹೌದು, ಅಮೆರಿಕ ಅಧ್ಯಕ್ಷ ಜೋ ಬೈಡನ್ ಅಧ್ಯಕ್ಷೀಯ ಚುನಾವಣೆ ಅಖಾಡದಿಂದ ಹಿಂದೆ ಸರಿದು ಭಾರತ ಮೂಲದ ಮಹಿಳೆ ಕಮಲಾ ಹ್ಯಾರಿಸ್ ಅವರಿಗೆ ಅವಕಾಶ ಕೊಟ್ಟಿದ್ದಾರೆ. ಈ ಮೂಲಕ ಕಮಲಾ ಹ್ಯಾರಿಸ್ ಅವರು ಈ ಬಾರಿ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಗೆಲ್ಲುವುದು ಬಹುತೇಕ ಪಕ್ಕಾ ಆಗುತ್ತಿದೆ. ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ಘೋಷಿಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅವರಿಗೆ ನಡುಕ ಶುರುವಾಗಿ ಸೋಲಿನ ಭಯ ಕಾಡುತ್ತಿದೆ.

ಭಾರತೀಯ ಮಹಿಳೆಗೆ ಅಮೆರಿಕದ ಅಧ್ಯಕ್ಷ ಸ್ಥಾನ?
ಜೋ ಬೈಡನ್ ಅವರ ಸರ್ಕಾರದಲ್ಲಿ ಉಪಾಧ್ಯಕ್ಷೆ ಆಗಿದ್ದ ಭಾರತ ಮೂಲದ ಕಮಲಾ ಹ್ಯಾರಿಸ್ ಅವರನ್ನು, ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ನಿಲ್ಲಿಸಬೇಕು ಎಂಬ ಕೂಗು ಕೇಳಿಬಂತು. ಯಾಕಂದ್ರೆ ಜೋ ಬೈಡನ್ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಈ ಕಾರಣಕ್ಕೆ ಅಕಸ್ಮಾತ್ ಜೋ ಬೈಡನ್ ಮತ್ತೊಮ್ಮೆ ಸ್ಪರ್ಧೆ ಮಾಡಿದರೆ ಸೋಲು ಗ್ಯಾರಂಟಿ.
ಈ ಮೂಲಕ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ ಎಂಬ ಅಭಿಪ್ರಾಯ ಕೇಳಿಬಂದಿತ್ತು. ಹೀಗಾಗಿ 2024ರ ಅಧ್ಯಕ್ಷೀಯ ಚುನಾವಣೆ ಸ್ಪರ್ಧೆಗೆ ಹಾಲಿ ಅಧ್ಯಕ್ಷ ಜೋ ಬೈಡನ್ ಗುಡ್‌ಬೈ ಹೇಳಿದ್ದರು. ಆ ನಂತರ ಅಮೆರಿಕ ಚುನಾವಣೆ ಪರಿಸ್ಥಿತಿ ಬದಲಾಗಿ ಹೋಗಿದೆ. ಕಮಲಾ ಹ್ಯಾರಿಸ್ ಪರವಾಗಿ ಅಮೆರಿಕದಲ್ಲಿ ಇರುವ ಭಾರತ ಮೂಲದ ಪ್ರಜೆಗಳು ಮಾತ್ರವಲ್ಲ, ಇಡೀ ಅಮೆರಿಕದ ತುಂಬಾ ಹವಾ ಹುಟ್ಟಿದೆ. ಇದೇ ಕಾರಣಕ್ಕೆ ಈ ಬಾರಿ ಭಾರತ ಮೂಲದ ಕಮಲಾ ಹ್ಯಾರಿಸ್ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುವುದು ಬಹುತೇಕ ಗ್ಯಾರಂಟಿ ಎನ್ನಲಾಗುತ್ತಿದೆ.
ಕಮಲಾ ಎಂಟ್ರಿಗೆ ಟ್ರಂಪ್ ಶೇಕ್!
ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಮೀಕ್ಷೆಗಳ ವರದಿ ಪ್ರಕಾರ ಇದೀಗ ಕಮಲಾ ಹ್ಯಾರಿಸ್ ಒಟ್ಟಾರೆ 2 ಪಾಯಿಂಟ್ ಮುನ್ನಡೆ ಸಾಧಿಸಿದ್ದಾರೆ. ಹಾಗೇ ಇನ್ನು ಮುಂದಿನ ದಿನಗಳಲ್ಲೂ ಕಮಲಾ ಹ್ಯಾರಿಸ್ ಅವರು ಹೆಚ್ಚಿನ ಬೆಂಬಲ ಪಡೆಯುವ ಸಾಧ್ಯತೆ ಇದೀಗ ಇದ್ದು, ಟ್ರಂಪ್ ಸೋಲುವುದು ಬಹುತೇಕ ಗ್ಯಾರಂಟಿ ಎಂಬ ಅಭಿಪ್ರಾಯ ಕೇಳಿಬಂದಿದೆ. ಬೈಡನ್ ಅವರು ಟ್ರಂಪ್ ವಿರುದ್ಧ ಹಿನ್ನಡೆ ಅನುಭವಿಸಿದ್ದರು. ಆದರೆ ಇದೀಗ ಟ್ರಂಪ್ ವಿರುದ್ಧ ಕಮಲಾ ಮುನ್ನಡೆ ಪಡೆದು ಶಾಕ್ ಕೊಟ್ಟಿದ್ದಾರೆ. ಹೀಗಾಗಿ ಟ್ರಂಪ್ ಸೋಲುವ ಬಗ್ಗೆ ಚರ್ಚೆಗಳು ಶುರುವಾಗಿವೆ.












Click it and Unblock the Notifications