ಡೊನಾಲ್ಡ್ ಟ್ರಂಪ್ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿದ ಕಮಲಾ ಹ್ಯಾರಿಸ್!

ಅಮೆರಿಕ ಅಧ್ಯಕ್ಷೀಯ ಚುನಾವಣೆ ಕಾವು ಏರುತ್ತಿದ್ದಂತೆ, ಚರ್ಚೆಗಳು ಕೂಡ ಬಲು ಜೋರು ಜೋರಾಗಿವೆ. ಅದ್ರಲ್ಲೂ ಭಾರತ ಮೂಲದ ಮಹಿಳೆ ಒಬ್ಬರು ಈ ಬಾರಿ ಜಗತ್ತಿನ ದೊಡ್ಡಣ್ಣ ಎಂಬ ಬಿರುದು ಪಡೆದಿರುವ ಅಮೆರಿಕದ ಸಾರಥ್ಯ ವಹಿಸಲು ಸಜ್ಜಾಗಿದ್ದಾರೆ. ಹೀಗಿದ್ದಾಗಲೇ, ಕಮಲಾ ಹ್ಯಾರಿಸ್ ಅವರು ತಮ್ಮ ಎದುರಾಳಿ ಟ್ರಂಪ್ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿ ಸಂಚಲನ ಮೂಡಿಸಿದ್ದಾರೆ.

ಹೌದು, ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ನಡುವೆ ಭರ್ಜರಿ ಪೈಪೋಟಿ ಏರ್ಪಟ್ಟಿದೆ. ಇದೇ ಕಾರಣಕ್ಕೆ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಿಕ್ಕಾಟ ಕೂಡ ಜೋರಾಗಿದೆ. ಈ ಸಮಯದಲ್ಲೇ ಕಮಲಾ ಹ್ಯಾರಿಸ್ ಅವರ ಪಕ್ಷದ ವಿರುದ್ಧ ಹೋರಾಟ ಹೆಚ್ಚಾಗುತ್ತಿದೆ. ಯಾಕೆ ಅಂದ್ರೆ ಹಾಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್ ಪರವಾಗಿ ಇದ್ದು, ಡೆಮಾಕ್ರಟಿಕ್ ಪಕ್ಷದಿಂದಲೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಹೀಗಿದ್ದಾಗ ಇಸ್ರೇಲ್ ವಿರೋಧಿ ಹೋರಾಟದ ನೆಪದಲ್ಲಿ ಕಮಲಾ ಹ್ಯಾರಿಸ್ ವಿರುದ್ಧ ಹೋರಾಟಗಾರರು ಆಕ್ರೋಶ ಹೊರ ಹಾಕುತ್ತಿದ್ದರು. ಹೀಗಿದ್ದಾಗ ಹೊಸ ಅಸ್ತ್ರ ಪ್ರಯೋಗ ಮಾಡಿರುವ ಕಮಲಾ ಹ್ಯಾರಿಸ್, ಡೊನಾಲ್ಡ್ ಟ್ರಂಪ್‌ಗೆ ಶಾಕ್ ಕೊಟ್ಟಿದ್ದಾರೆ.

Kamala Harris Got Much More Grip Against Donald Trump In USA President Election

ಕಮಲಾ & ಟ್ರಂಪ್ ಫೈಟ್ ಜೋರು!

ಡೊನಾಲ್ಡ್ ಟ್ರಂಪ್ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಕಮಲಾ ಹ್ಯಾರಿಸ್ ಅವರು ಇದೀಗ ಮತ್ತೊಂದು ಅಸ್ತ್ರ ಪ್ರಯೋಗ ಮಾಡಿದ್ದಾರೆ. ಇಸ್ರೇಲ್ ವಿರೋಧಿ ಹೋರಾಟದ ನೆಪ ಮಾಡಿಕೊಂಡು ನಮ್ಮನ್ನು ವಿರೋಧ ಮಾಡಿದರೆ ಡೊನಾಲ್ಡ್ ಟ್ರಂಪ್ ಆಯ್ಕೆ ಆಗುತ್ತಾರೆ. ಆ ಮೂಲಕ ನಿಮಗೆ ಮತ್ತಷ್ಟು ಹಿನ್ನಡೆ ಆಗಲಿದೆ ಎಂದು, ಹೋರಾಟಗಾರರಿಗೆ ಇದೀಗ ಕಮಲಾ ಹ್ಯಾರಿಸ್ ಕಿವಿಮಾತು ಹೇಳಿದ್ದಾರೆ. ಅಲ್ಲದೆ, ಟ್ರಂಪ್ ವಿರುದ್ಧ ಹೊಸ ಅಸ್ತ್ರ ಪ್ರಯೋಗಿಸಿದ ರೀತಿಯೂ ಆಗಿದೆ.

ಕಮಲಾ ಹ್ಯಾರಿಸ್ ಪರ ಬಲ

ಒಟ್ನಲ್ಲಿ ಅಮೆರಿಕ ಅಧ್ಯಕ್ಷೀಯ ಚುನಾವಣೆ ಭಾರಿ ಕುತೂಹಲ ಕೆರಳಿಸುತ್ತಿದ್ದು, ಯಾವ ಕ್ಷಣ ಏನಾಗುತ್ತೋ? ಎಂಬ ಕುತೂಹಲ ಮೂಡುತ್ತಿದೆ. ಮತ್ತೊಂದು ಕಡೆ ಸಮೀಕ್ಷೆಗಳು ಹೇಳುವ ಪ್ರಕಾರ ಇದೀಗ ಕಮಲಾ ಹ್ಯಾರಿಸ್ ಅವರಿಗೆ ಗೆಲ್ಲುವ ಅವಕಾಶ ಹೆಚ್ಚಾಗಿದೆ. ಈ ಮೂಲಕ, ಅಮೆರಿಕ ಅಧ್ಯಕ್ಷೀಯ ಚುನಾವಣೆ ಅಖಾಡದಲ್ಲಿ ಹೊಸ ಸಂಚಲನ ಸೃಷ್ಟಿ ಮಾಡುತ್ತಿದ್ದಾರೆ ಕಮಲಾ ಹ್ಯಾರಿಸ್ ಅವರು. ಹಾಗೇ ಭಾರತೀಯರು & ಆಫ್ರಿಕನ್-ಅಮೆರಿಕನ್ ಪ್ರಜೆಗಳು ಈ ವೇಳೆ ಕಮಲಾ ಹ್ಯಾರಿಸ್ ಪರವಾಗಿ ನಿಂತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+