ಟ್ರಂಪ್‌ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ ಭಾರತ ಮೂಲದ ಕಮಲಾ ಹ್ಯಾರಿಸ್!
ಭಾರತೀಯರು ಜಗತ್ತನ್ನೇ ಆಳುವ ಶಕ್ತಿ ಹೊಂದಿದ್ದಾರೆ ಎಂಬುದು ಪದೇ ಪದೇ ಸಾಬೀತಾಗಿದೆ. ಅದ್ರಲ್ಲೂ ಸ್ವಾತಂತ್ರ್ಯ ಬಂದ ನಂತರ ಅಂದ್ರೆ ಕಳೆದ 70 ವರ್ಷಗಳಲ್ಲಿ ಭಾರತ ಬಲಿಷ್ಠವಾಗಿ ಮತ್ತು ಜಗತ್ತನ್ನೇ ಆಳುವ ರೀತಿಯಲ್ಲಿ ಹಂತ ಹಂತವಾಗಿ ಬೆಳೆದಿದೆ. ಇದೇ ಕಾರಣಕ್ಕೆ, ಈಗ ಭಾರತೀಯರು ಜಗತ್ತಿನ ದೊಡ್ಡ ದೊಡ್ಡ ದೇಶಗಳ ಅಧ್ಯಕ್ಷ & ಪ್ರಧಾನಿ ಹುದ್ದಗೆ ಆಯ್ಕೆಯು ಆಗುತ್ತಿದ್ದಾರೆ. ಹೀಗಿದ್ದಾಗಲೇ ಭಾರತ ಮೂಲದ ಮಹಿಳೆ ಬಗ್ಗೆ ಅಮೆರಿಕ ಮಾಜಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಬಾಯಿಗೆ ಬಂದಂತೆ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.
ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಲಿನ ಸುಳಿಗೆ ಸಿಲುಕಿರುವ ಡೊನಾಲ್ಡ್ ಟ್ರಂಪ್ ಇದೀಗ ಬಾಯಿಗೆ ಬಂದ ರೀತಿ ಮಾತನಾಡುತ್ತಿದ್ದಾರೆ ಎಂಬ ಆರೋಪ ಇದೆ. ಹೀಗಾಗಿ ಕೆಲವು ದಿನಗಳ ಹಿಂದಷ್ಟೇ, ಕಮಲಾ ಹ್ಯಾರಿಸ್ ಬಗ್ಗೆ ಡೊನಾಲ್ಡ್ ಟ್ರಂಪ್ ನೀಡಿದ್ದ ಹೇಳಿಕೆ ಬೆಂಕಿ ಹತ್ತಿಸಿದೆ. ಇದೇ ಸಮಯದಲ್ಲೇ, ಡೊನಾಲ್ಡ್ ಟ್ರಂಪ್ ವಿರುದ್ಧ ಜನಾಂಗೀಯ ದಾಳಿ ಎಂಬ ಗಂಭೀರ ಆರೋಪ ಕೂಡ ಕೇಳಿಬಂದಿದೆ. ಇಷ್ಟೆಲ್ಲದರ ನಡುವೆ, ಖಡಕ್ ಉತ್ತರ ನೀಡಿರುವ ಭಾರತ ಮೂಲದ ಕಮಲಾ ಹ್ಯಾರಿಸ್ ಅವರು, ಟ್ರಂಪ್‌ಗೆ ಹೇಳಿರುವುದು ಏನು ಗೊತ್ತೇ? ಆ ಬಗ್ಗೆ ಮಾಹಿತಿಗೆ ಮುಂದೆ ಓದಿ.

ಟ್ರಂಪ್ ದುಷ್ಕರ್ಮಿ ಎಂದ ಕಮಲಾ?
ಡೊನಾಲ್ಡ್ ಟ್ರಂಪ್ ವಿರುದ್ಧ ಕಮಲಾ ಹ್ಯಾರಿಸ್ ಗರಂ ಆಗಿ ಉತ್ತರವನ್ನ ನೀಡಿದ್ದಾರೆ. ತಮ್ಮ ಜನಾಂಗೀಯ ಪರಂಪರೆ ಪ್ರಶ್ನಿಸಿದ ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಮತ್ತು ಮಾಜಿ ಅಧ್ಯಕ್ಷ ಟ್ರಂಪ್‌ಗೆ ತಿರುಗೇಟು ನೀಡಿದ್ದಾರೆ. ಭಾರತ ಮೂಲದ ಅಮೆರಿಕ ಉಪಾಧ್ಯಕ್ಷೆ, ಕಮಲಾ ಹ್ಯಾರಿಸ್ ಬಗ್ಗೆ ಟ್ರಂಪ್ ಏನೇನೋ ಮಾತನಾಡಿದ್ದರು. ಅದಕ್ಕೆ ಉತ್ತರ ನೀಡಿರುವ ಕಮಲಾ ಅವರು, ನಾನು ಜಿಲ್ಲಾ ಅಟಾರ್ನಿ, ಅಟಾರ್ನಿ ಜನರಲ್ & ಕೋರ್ಟ್‌ರೂಮ್ ಪ್ರಾಸಿಕ್ಯೂಟರ್ ಆಗಿದ್ದಾಗ ಎಲ್ಲ ರೀತಿ ದುಷ್ಕರ್ಮಿಗಳನ್ನು ನೋಡಿದ್ದೇನೆ ಎಂದಿದ್ದಾರೆ. ಈ ಮಾತಿನ ಮೂಲಕ ತಮ್ಮನ್ನು ಕೆಣಕಿದ ಟ್ರಂಪ್‌ಗೆ ಉತ್ತರ ನೀಡಿದ್ದಾರೆ ಕಮಲಾ ಹ್ಯಾರಿಸ್.
ಇಷ್ಟಲ್ಲದೆ ಈ ಮೂಲಕ ಪರೋಕ್ಷವಾಗಿ, ಟ್ರಂಪ್ ದುಷ್ಕರ್ಮಿ ಎಂಬಂತೆ ಖಡಕ್ ತಿರುಗೇಟು ನೀಡಿದ್ದಾರೆ. ಹಾಗೇ ಇಂತಹ ವ್ಯಕ್ತಿಗಳನ್ನು ನಿಭಾಯಿಸುವುದು ನನಗೆ ಗೊತ್ತಿದೆ ಎಂದಿದ್ದಾರೆ ಕಮಲಾ ಹ್ಯಾರಿಸ್. ಈ ಹಿಂದೆ ಕೂಡ ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ನಡುವೆ, ದೊಡ್ಡ ಮಟ್ಟದಲ್ಲಿ ತಿಕ್ಕಾಟ ನಡೆದಿತ್ತು. ಆದರೆ ಈಗ ಇಬ್ಬರೂ ಅಧ್ಯಕ್ಷೀಯ ಚುನಾವಣೆಗೆ ಎದುರಾಳಿ ಆಗಿದ್ದು, ಮತ್ತಷ್ಟು ಕಿತ್ತಾಟ ಆರಂಭಿಸಿದ್ದಾರೆ.
ಟ್ರಂಪ್ ಕಿರಿಕ್ ಬಲು ಜೋರು!
ವಿಡಿಯೋ ಸಂದೇಶ ಒಂದರಲ್ಲಿ ಡೊನಾಲ್ಡ್ ಟ್ರಂಪ್ ಮಾತಿಗೆ ಉತ್ತರ ನೀಡಿರುವ ಕಮಲಾ, ತಾವು ಭಾರತ ಮೂಲದವರೇ ಅಥವಾ ಕಪ್ಪು ವರ್ಣಿಯರೇ ಎಂದು ಪ್ರಶ್ನೆ ಮಾಡಿದ್ದ ಮಾಜಿ ಅಧ್ಯಕ್ಷ ಟ್ರಂಪ್ ಅವರಿಗೆ ಉತ್ತರ ನೀಡಿದಂತೆ ಆಗಿದೆ. ಮೊದಲಿನಿಂದ ಕೂಡ ಡೊನಾಲ್ಡ್ ಟ್ರಂಪ್ ಇದೇ ರೀತಿ ವಿವಾದ ಸೃಷ್ಟಿಸುವ ಮಾತುಗಳನ್ನ ಆಡುತ್ತಾ ಬಂದಿದ್ದರು. ಈಗಲಾದರೂ ಟ್ರಂಪ್ ಬದಲಾಗುತ್ತಾರಾ? ಎಂಬ ನಿರೀಕ್ಷೆ ಸುಳ್ಳಾಗುತ್ತಿದೆ.












Click it and Unblock the Notifications