ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ಮಾತಿನ ಮಹಾಯುದ್ಧಕ್ಕೆ ಮುಹೂರ್ತ ಫಿಕ್ಸ್!

ಅಮೆರಿಕ ಅಧ್ಯಕ್ಷೀಯ ಚುನಾವಣೆ ದೊಡ್ಡ ಮಟ್ಟದಲ್ಲಿ ಸಂಚಲನ ಸೃಷ್ಟಿ ಮಾಡುತ್ತಿದೆ. ಈ ಕಾರಣಕ್ಕೆ ಯಾರಿಗೆ ಗೆಲುವು? ಯಾರಿಗೆ ಸೋಲು ಎಂಬ ಚರ್ಚೆಗಳು ಜೋರಾಗಿವೆ. ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆಗೆ ಇದೇ ನವೆಂಬರ್ ತಿಂಗಳಲ್ಲಿ ಮತದಾನ ನಡೆಯಲಿದೆ. ಹೀಗೆ ಅಭ್ಯರ್ಥಿಗಳು ಕೂಡ ಕೆಲವೇ ದಿನಗಳು ಬಾಕಿ ಇರುವ ಕಾರಣಕ್ಕೆ ಭರ್ಜರಿ ಪ್ರಚಾರ ನಡೆಸ್ತಿದ್ದು, ಭಾರತ ಮೂಲದ ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ಫೈಟ್ ಫಿಕ್ಸ್ ಆಗಿದೆ. ಹಾಗೆಯೇ ಇಬ್ಬರ ನಡುವೆ ಮಾತಿನ ಮಹಾಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದೆ.

ಡೊನಾಲ್ಡ್ ಟ್ರಂಪ್ & ಕಮಲಾ ಹ್ಯಾರಿಸ್ ನಡುವೆ ಫೈಟಿಂಗ್ ಯಾವ ರೇಂಜ್‌ಗೆ ಇದೆ ಅಂದ್ರೆ ಇಡೀ ಜಗತ್ತು ಇದೀಗ ಅಮೆರಿಕದ ಮೇಲೆ ಗಮನ ಇಟ್ಟು ಕೂತಿದೆ. ಈ ಬಾರಿ ಅಮೆರಿಕದಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ? ಅನ್ನೋ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಅದ್ರಲ್ಲೂ ಒಂದು ಕಡೆ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುವ ಕನಸು ಕಾಣುತ್ತಿದ್ದರೆ. ಇಡೀ ಅಮೆರಿಕ ಇತಿಹಾಸದಲ್ಲೇ ಮೊಟ್ಟಮೊದಲ ಮಹಿಳಾ ಅಧ್ಯಕ್ಷೆ ಆಗುವ ಕನಸು ಕಂಡಿದ್ದಾರೆ ಕಮಲಾ ಹ್ಯಾರಿಸ್. ಹೀಗಾಗಿ ಇಬ್ಬರ ನಡುವೆ ಇದೀಗ ಮಾತಿನ ಯುದ್ಧಕ್ಕೆ ವೇದಿಕೆ ರೆಡಿ ಮಾಡಲಾಗಿದೆ.

Kamala Harris And Donald Trump Face To Face Discussion

ಕಮಲಾ ಗೆಲುವಿಗೆ ಇದೇ ಮುಖ್ಯ!

ಇದೇ ಸೆಪ್ಟೆಂಬರ್‌ 4 ರಂದು ಅಮೆರಿಕದ ಅತ್ಯಂತ ಜನಪ್ರಿಯ 'ಫಾಕ್ಸ್‌ ನ್ಯೂಸ್‌' ಸುದ್ದಿ ಸಂಸ್ಥೆಯ ಕಚೇರಿಯಲ್ಲಿ ಚರ್ಚಾ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಮಲಾ ಹ್ಯಾರಿಸ್ & ಡೊನಾಲ್ಡ್ ಟ್ರಂಪ್ ಮುಖಾಮುಖಿ ಚರ್ಚೆ ನಡೆಸಲಿದ್ದಾರೆ. ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಆಗಿರುವ ಡೊನಾಲ್ಡ್ ಟ್ರಂಪ್ & ಡೆಮಾಕ್ರಟಿಕ್ ಪಕ್ಷದ ಕಡೆಯಿಂದ, ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಕಮಲಾ ಹ್ಯಾರಿಸ್ ಅವರಿಗೆ ಮತದಾರರನ್ನ ಸೆಳೆಯಲು ಈ ಮುಖಾಮುಖಿ ಚರ್ಚೆ ಅತ್ಯಂತ ಮುಖ್ಯವಾಗಿದೆ.

ಅಮೆರಿಕ ಚುನಾವಣೆ ಸಂಪ್ರದಾಯದಂತೆ...

ಜಗತ್ತಿನಲ್ಲಿ ಪುರಾತನ ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶಗಳ ಪೈಕಿ ಅಮೆರಿಕ ಕೂಡ ಒಂದಾಗಿದೆ. ಹೀಗಾಗಿಯೇ, ಇಡೀ ಜಗತ್ತು ಅಮೆರಿಕದ ಚುನಾವಣೆಗೆ ಮಹತ್ವದ ನೀಡುತ್ತದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂಪ್ರದಾಯದ ಪ್ರಕಾರ ಯಾರೇ ಅಧ್ಯಕ್ಷೀಯ ಚುನಾವಣೆಗೆ ಸ್ಫರ್ಧೆ ಮಾಡಿದ್ರೂ, ಆ ಇಬ್ಬರನ್ನ ಒಂದೇ ವೇದಿಕೆ ಮೇಲೆ ನಿಲ್ಲಿಸಿ ಮಾತುಕತೆ ನಡೆಸಲಾಗುತ್ತದೆ. ಹಾಗೇ ಅಮೆರಿಕದ ನ್ಯೂಸ್ ಚಾನೆಲ್‌ಗಳು ಈ ಚರ್ಚೆ ಕಾರ್ಯಕ್ರಮ ನೇರ ಪ್ರಸಾರ ಮಾಡ್ತವೆ.

ಅಮೆರಿಕದಲ್ಲಿ ಈ ರೀತಿ ಚರ್ಚೆ ಮಾಡುವುದು ಹಲವು ವರ್ಷಗಳಿಂದ ನಡೆದುಕೊಂಡು ಬರ್ತಿದೆ. ಪ್ರಜೆಗಳಿಗೆ ಇಬ್ಬರೂ ಅಭ್ಯರ್ಥಿಗಳ ಬಂಡವಾಳ ತಿಳಿಸುತ್ತದೆ. ಹೀಗಾಗಿ ಅಮೆರಿಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ವೇಳೆ ಅಭ್ಯರ್ಥಿಗಳ ಮುಖಾಮುಖಿ ಚರ್ಚೆ ಕೂಡ ಜಗತ್ತಿನ ಗಮನ ಸೆಳೆಯುತ್ತದೆ ಕೆಲವೇ ಕೆಲವು ದಿನಗಳ ಹಿಂದೆ ಜೋ ಬೈಡನ್ & ಟ್ರಂಪ್ ನಡುವೆ ಈ ರೀತಿ ಚರ್ಚೆ ನಡೆದಿತ್ತು. ಆದ್ರೆ ಜೋ ಬೈಡನ್ ಚುನಾವಣೆ ಅಖಾಡದಿಂದ ಹಿಂದೆ ಸರಿದಿದ್ದು, ಇದೀಗ ಕಮಲಾ ಹ್ಯಾರಿಸ್ & ಟ್ರಂಪ್ ನಡುವೆ ತಿಕ್ಕಾಟ ನಡೆಯಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+